ಸನ್ಮಾರ್ಗ ವಾರ್ತೆ
ಬಾಡಿಗೆ ಮನೆ ಹುಡುಕುತ್ತಾ ಕೇರಳ ಕೊಚ್ಚಿಯ ಹೌಸಿಂಗ್ ಕಾಲೋನಿಗೆ ಬಂದ ತನಗೆ ಎದುರಾದ ದುರನುಭವಗಳನ್ನು ಬರಹಗಾರ ಶಾಜಿಕುಮಾರ್ ಬರಕೊಂಡಿದ್ದಾರೆ. ತನ್ನ ಹೆಸರು ಶಾಜಿ ಎಂದು ಹೇಳಿದಾಗ, ಇಲ್ಲಿ ಮುಸ್ಲಿಮರಿಗೆ ಬಾಡಿಗೆ ಮನೆ ನೀಡಲಾಗುತ್ತಿಲ್ಲ ಎಂದು ಬ್ರೋಕರ್ ತನ್ನಲ್ಲಿ ಹೇಳಿರುವುದನ್ನು ಅವರು ಬಹಿರಂಗಪಡಿಸಿದ್ದಾರೆ.
ಹಿಂದೆಯೂ ಮನೆ ಹುಡುಕಲು ಹೊರಟ ತನಗೆ ಇದೆ ಅನುಭವವಾಗಿತ್ತು. ಆದರೆ ಅದು ಒಂಟಿ ಪ್ರಕರಣ ಆಗಿರಬಹುದು ಅಂದುಕೊಂಡು ನಾನು ಬಹಿರಂಗ ಪಡಿಸಿರಲಿಲ್ಲ ಎಂದು ಶಾಜಿ
ತನ್ನ ಫೇಸ್ಬುಕ್ ಪೋಸ್ಟ್ ನಲ್ಲಿ ತಿಳಿಸಿದ್ದಾರೆ.












