ಕ್ರೈಸ್ಟ್‌ಚರ್ಚ್ ಭಯೋತ್ಪಾದನಾ ದಾಳಿ: ನ್ಯೂಝಿಲೆಂಡಿನಲ್ಲಿ ಬಂದೂಕು ನಿಷೇಧಕ್ಕೆ ಪ್ರಧಾನಿ ಜೆಸಿಂತಾ ಅರ್ಡೆನ್ ಘೋಷಣೆ

0
1362

ಕ್ರೈಸ್ಟ್‌ಚರ್ಚ್,ಮಾ.21: ಕ್ರೈಸ್ಟ್ ಚರ್ಚ್ ಭಯೋತ್ಪಾದನಾ ದಾಳಿಯ ಹಿನ್ನೆಲೆಯಲ್ಲಿ ನ್ಯೂಝಿಲೆಂಡ್‍ನಲ್ಲಿ ಬಂದೂಕು ನಿಷೇಧ ಜಾರಿಗೊಳಿಸುವುದಾಗಿ ಅಧ್ಯಕ್ಷೆ ಜೆಸಿಂತಾ ಅರ್ಡೆನ್ ಘೋಷಿಸಿದ್ದಾರೆ.  ಸೆಮಿ ಅಟೊಮ್ಯಾಟಿಕ್ ಆಯುಧಗಳು, ರೈಫಲ್‍ಗಳು ನಿಷೇಧಿಸಲಾದ ಆಯುಧಗಳ ಸಾಲಿಗೆ ಸೇರಿವೆ.

ಗುರುವಾರ ಕ್ರೈಸ್ಟ್‌ಚರ್ಚ್ ಭಯೋತ್ಪಾದನೆಯಲ್ಲಿ ಉಪಯೋಗಿಸಿದ ಎಲ್ಲ ಆಯುಧಗಳನ್ನು ನಿಷೇಧಿಸಲಾಗುವುದು ಎಂದು ಜೆಸಿಂತಾ ಆರ್ಡನ್ ಪತ್ರಿಕಾ ಗೋಷ್ಠಿಯಲ್ಲಿ ತಿಳಿಸಿದರು. ಬರುವ ತಿಂಗಳು ಎಪ್ರಿಲ್ ಹನ್ನೊಂದರಿಂದ ನಿಷೇಧ ಜಾರಿಗೆ ಬರಲಿದೆ ಎಂದು ಪ್ರಧಾನಿ ಹೇಳಿದರು. ಇಂತಹ ಆಯುಧಗಳನ್ನು ವಶದಲ್ಲಿರಿಸಿಕೊಂಡವರು ಕೂಡಲೇ ಸರಕಾರಕ್ಕೆ ಅದನ್ನು ಒಪ್ಪಿಸಬೇಕು ಮತ್ತು ಕಾನೂನು ತಿದ್ದುಪಡಿ ಪ್ರಕ್ರಿಯೆಯನ್ನು ಶೀಘ್ರಗೊಳಿಸಲಾಗುವುದು ಎಂದು ಜೆಸಿಂತಾ ಹೇಳಿದರು. ತೀವ್ರ ಬಲಪಂಥೀಯವಾದದ ನಿರ್ಮೂಲನೆಗೆ ಜಗತ್ತು ಒಗ್ಗಟ್ಟು ಪ್ರದರ್ಶಿಸಬೇಕು ಎಂದು ನ್ಯೂಝಿಲೆಂಡ್ ಪ್ರಧಾನಿ ಹೇಳಿದರು. ನಂತರ ಬಂದೂಕು ಕಾನೂನಿನಲ್ಲಿ ತಿದ್ದುಪಡಿ ತಂದು ಕಠಿಣ ಕ್ರಮಕ್ಕೆ ಅವರು ಮುಂದಾಗಿದ್ದಾರೆ.