ಪವಿತ್ರ ಕುರ್ ಆನ್ ಸುಟ್ಟ ಘಟನೆ: ಇರಾಕಿನ ಸ್ವೀಡಿಷ್ ದೂತವಾಸಕ್ಕೆ ಬೆಂಕಿಯಿಟ್ಟ ಪ್ರತಿಭಟನಾಕಾರರು

0
294

ಸನ್ಮಾರ್ಗ ವಾರ್ತೆ

ಬಾಗ್ದಾದ್, ಜು. 20: ಸ್ವೀಡನಿನಲ್ಲಿ ಪವಿತ್ರ ಕುರ್‍ಆನ್ ಸುಟ್ಟು ಹಾಕಿದ ಘಟನೆಯಲ್ಲಿ ಇರಾಕಿನ ಬಗ್ದಾದಿನ ಸ್ವೀಡಿಷ್ ದೂತವಾಸಕ್ಕೆ ಪ್ರತಿಭಟನಾಕಾರರು ಗುರುವಾರ ಬೆಳಗ್ಗೆ ದೂತವಾಸಕ್ಕೆ ನುಗ್ಗಿ ಕೆಲವು ಕಡೆ ಬೆಂಕಿ ಹಚ್ಚಿದ್ದಾರೆ.

ದೂತವಾಸದ ಸಿಬ್ಬಂದಿಗಳು ಸುರಕ್ಷಿತರಾಗಿದ್ದಾರೆ ಎಂದು ಸ್ವೀಡಿಷ್ ವಿದೇಶ ಸಚಿವಾಲಯ ಈ ವಿಷಯ ತಿಳಿಸಿದ್ದು ತನ್ನ ರಾಜತಾಂತ್ರಿಕರಿಗೆ ಸುರಕ್ಷೆ ದೃಢಪಡಿಸಲು ಅದು ಇರಾಕಿನೊಂದಿಗೆ ಆಗ್ರಹಿಸಿದೆ.

ದೂತವಾಸದ ಮೇಲೆ ದಾಳಿ ನಡೆದ ಬೆನ್ನಿಗೆ ತುರ್ತು ತನಿಖೆಗೆ ಇರಾಕ್ ಸೂಚನೆ ನೀಡಿದೆ. ಅಪರಾಧಿಗಳನ್ನು ಕಾನೂನಿನ ಮುಂದೆ ತರಲು ಇರಾಕಿನ ಸರಕಾರ ಕ್ರಮ ಆರಂಭಿಸಿದೆ ಎಂದು ವರದಿಯಾಗಿದೆ.

ಶಿಯ ವಿದ್ವಾಂಸ ಮುಕ್ತದ ಅಲ್ ಸದರ್ ರ ಅನುಯಾಯಿಗಳು ಈ ಕೃತ್ಯ ಎಸಗಿದ್ದೆಂದು ಹೇಳಲಾಗುತ್ತಿದೆ.

ಪವಿತ್ರ ಕುರ್‍ಆನ್ ಸುಟ್ಟದ್ದಕ್ಕೆ ಪ್ರತಿಭಟಿಸಬೇಕೆಂದು ಆಗ್ರಹಿಸುವ ಸಂದೇಶಗಳು ವ್ಯಾಪಕವಾಗಿ ಪ್ರಚಾರವಾಗಿತ್ತು. ಕಳೆದ ತಿಂಗಳು ಸ್ವೀಡಿಷ್ ರಾಜಧಾನಿ ಸ್ಟಾಕ್‍ಹೋಂ ನ ಮಸೀದಿಯ ಮುಂದೆ ಬಲಪಂಥೀಯ ವಾದಿಗಳು ಪವಿತ್ರ ಕುರ್‍ಆನ್ ಸುಟ್ಟು ಹಾಕಿದ್ದರು.