ಸನ್ಮಾರ್ಗ ವಾರ್ತೆ
ನವದೆಹಲಿ: ಜಮಾಅತೆ ಇಸ್ಲಾಮೀ ಹಿಂದ್ನ ರಾಷ್ಟ್ರೀಯ ಕಾರ್ಯದರ್ಶಿ ಮೌಲಾನ ಶಫೀ ಮದನಿಯವರ ನೇತೃತ್ವದ ನಿಯೋಗವು ಕೋಮುಗಲಭೆ ಪೀಡಿತ ಹರಿಯಾಣದ ಗುರುಗ್ರಾಮ್ಗೆ ಭೇಟಿ ನೀಡಿತು.
ಪೊಲೀಸ್ ಕಮಿಷನರ್ ಕಲಾ ರಾಮ ಚಂದ್ರರನ್ನು ಭೇಟಿಯಾಗಿ ಸೆಕ್ಟರ್ 57ರ ಮಸೀದಿಯ ಮೇಲೆ ಆಕ್ರಮಣ, ಇಮಾಮ್ ಸಾದ್ರವರ ಹತ್ಯೆ ಮತ್ತು ಗುರುಗ್ರಾಮದ ಸುತ್ತ ಇನ್ನಿತರ ಹಲ್ಲೆ ಹಾಗೂ ನಾಶ-ನಷ್ಟಗಳ ಬಗ್ಗೆ ವಿಚಾರಿಸಿ ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ ನೀಡುವಂತೆ ಒತ್ತಾಯಿಸಿತು.
ಸೋಶಿಯಲ್ ಮೀಡಿಯಾ ಪ್ರೊಪಗಂಡಾ ಹಿಂಸೆಯನ್ನು ಹೆಚ್ಚಿಸಿತು ಹಾಗೂ ಪೊಲೀಸ್ ಪಡೆಯನ್ನು ಹಲವು ಸ್ಥಳಗಳಿಗೆ ಕಳುಹಿಸಬೇಕಾಗಿ ಬಂದ ಕಾರಣ ಸರಿಯಾಗಿ ನಿಭಾಯಿಸಲು ಸಾಧ್ಯವಾಗಲಿಲ್ಲ ಎಂದು ಪೊಲೀಸ್ ಕಮಿಷನರ್ ತಿಳಿಸಿದರು.
ನಂತರ ನಿವಾಸಿಗಳನ್ನು ಭೇಟಿ ಮಾಡಲಾಯಿತು. ಕೋಮು ಸಂದಿಗ್ಧತೆಯ ಕಾರಣ ತಮ್ಮ ಜೀವಕ್ಕೆ ಭಯವಿರುವುದಾಗಿ ನಿವಾಸಿಗಳು ತಿಳಿಸಿದರು.
ನಿಯೋಗ ಆಸ್ಪತ್ರೆಗೆ ಭೇಟಿ ನೀಡಿ ಗಾಯಾಳುಗಳ ಯೋಗ ಕ್ಷೇಮ ವಿಚಾರಿಸಿತು. ಅದೇ ರೀತಿ ಸೆಕ್ಟರ್ 57ರ ಗುರುಗ್ರಾಮ್ ಮಸೀದಿಗೂ ಭೇಟಿ ನೀಡಿತು.
ಭೇಟಿಯ ನಂತರ ಗುರುಗ್ರಾಮ್ ಪರಿಸ್ಥಿತಿಗೆ ಇಂಟೆಲಿಜೆನ್ಸ್ ಮತ್ತು ಪೊಲೀಸ್ ಡಿಪಾರ್ಟ್ ಮೆಂಟ್ ನೊಂದಿಗೆ ಸಹಕಾರದ ವೈಫಲ್ಯವೆಂದು ನಿಯೋಗ ಮನಗಂಡಿದೆ.
ಸಮಾಜ ವಿರೋಧಿ ಶಕ್ತಿಗಳು ರಾಜಕೀಯ ಬೆಂಬಲದಿಂದ ತಮ್ಮ ವಿರುದ್ಧ ಕ್ರಮ ಜರುಗಲಾರದೆಂಬ ವಿಶ್ವಾಸದೊಂದಿಗೆ ದುಂಡಾ ವರ್ತನೆಗಳಿದಿರುವುದನ್ನು ನಿಯೋಗವು ಮನಗಂಡಿದೆ.
ಶೀಘ್ರದಲ್ಲಿ ಶಾಂತಿ ಸ್ಥಾಪಿಸಿ ಆತ್ಮವಿಶ್ವಾಸ ಬೆಳೆಸುವ ಕ್ರಮ ಕೈಗೊಳ್ಳಬೇಕೆಂದು ಕರೆ ನಿಯೋಗವು ನೀಡಿತು.
ಅನೈತಿಕ ಮಾಧ್ಯಮಗಳ ಪ್ರೊಪಗಂಡಾ, ಉದ್ವಿಗ್ನ ಸ್ಥಿತಿ ಮತ್ತು ಸೋಶಿಯಲ್ ಮೀಡಿಯಾದಲ್ಲಿ ಹಿಂಸೆಗೆ ಪ್ರಚೋದನೆ ಇತ್ಯಾದಿ ಕಾರಣಗಳನ್ನೂ ನಿಯೋಗಪಟ್ಟಿ ಮಾಡಿದೆ. ಎರಡೂ ಸಮುದಾಯಗಳ ಮಧ್ಯೆ ಸಂವಾದ ಪ್ರಕ್ರಿಯೆ ಆರಂಭಿಸಲು ಗಂಭೀರ ಪ್ರಯತ್ನಗಳಾಗಬೇಕೆಂದು ನಿಯೋಗ ಕರೆ ನೀಡಿತು.
ಯಾರೂ ಕಾನೂನನ್ನು ಕೈಗೆತ್ತಿಕೊಳ್ಳದಂತೆ ನೋಡಿಕೊಳ್ಳಬೇಕೆಂದು ಪೊಲೀಸ್ ಇಲಾಖೆಯನ್ನು ನಿಯೋಗ ಆಗ್ರಹಿಸಿದೆ. ಇಂತಹ ಸನ್ನಿವೇಶದ ಕಾರಣ ದೇಶದ ವಾಣಿಜ್ಯ ಕೇಂದ್ರದ ಜನರು ವಲಸೆ ಹೋಗುತ್ತಿದ್ದಾರೆ ಎಂದಿರುವ ನಿಯೋಗ ಪೀಡಿತರಿಗೆ ಸೂಕ್ತ ಪರಿಹಾರ, ತಪ್ಪಿತಸ್ಥರಿಗೆ ಕಠಿಣ ಶಿಕ್ಷೆಯನ್ನು ನೀಡುವಂತೆ ಆಗ್ರಹಿಸಿದೆ.
ಎಪಿಸಿಆರ್ನ ರಾಷ್ಟ್ರೀಯ ಕಾರ್ಯದರ್ಶಿ ನದೀಮ್ ಖಾನ್, ಜಮಾಅತೆ ಇಸ್ಲಾಮೀ ಹಿಂದ್ ಜೊತೆ ಕಾರ್ಯದರ್ಶಿ ಇನಾಮ್ ರಹ್ಮಾನ್ ಮತ್ತು ಲಈಕ್ ಅಹ್ಮದ್ ಖಾನ್ ನಿಯೋಗದಲ್ಲಿದ್ದರು.












