ಹೊಸದಿಲ್ಲಿ,ಮಾ. 23: ಇಂದು ಐಪಿಎಲ್ ಕ್ರಿಕೆಟ್ ಆರಂಭಗೊಳ್ಳುತ್ತಿದ್ದು ಇದೇ ವೇಳೆ ಮುಂಬೈ ಇಂಡಿಯನ್ ತಂಡದ ಆಟಗಾರ ಪ್ರಶಾಂತ್ ತಿವಾರಿ ಹೋಲಿಯ ದಿನ ಸಂಜೆ ನಾಲ್ಕು ಗಂಟೆಗೆ ದುಷ್ಕರ್ಮಿಗಳಿಂದ ಮಾರಣಾಂತಿಕ ಹಲ್ಲೆಗೊಳಾಗಿದ್ದಾರೆ. ಪ್ರಶಾಂತ್ ಮತ್ತು ಅವರ ಸಹೋದರ ಪ್ರಭಾತ್ರನ್ನು ಮನೆಯಿಂದ ಹೊರಗೆಳೆದು ದುಷ್ಕರ್ಮಿಗಳು ಮಾರಣಾಂತಿಕವಾಗಿ ದೊಣ್ಣೆ, ಲಾಠಿಗಳಿಂದ ಹೊಡೆದರು. ಕೂಡಲೆ ಅಲ್ಲಿಗೆ ಆಗಮಿಸಿದ ಪೊಲೀಸರು ಪ್ರಶಾಂತ್ರನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ.
ಘಟನೆಯಲ್ಲಿ ನೆರೆಮನೆಯ ಸಂದೀಪ್ ಮತ್ತು ಮನ್ದೀಪ್ ಸಹೋದರರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಪೊಲೀಸರು ತಿಳಿಸಿದ ಪ್ರಕಾರ ಪ್ರಶಾಂತ್ ತನ್ನ ಸಹೋದರ ಪ್ರಭಾತ್ರೊಂದಿಗೆ ಜೋರಾಗಿ ಮಾತಾಡುತ್ತಿದ್ದ. ಇದನ್ನು ಸಂದೀಪ್ ಮತ್ತು ಮನ್ದೀಪ್ ಪ್ರಶ್ನಿಸಿದಾಗ ಮಾತಿನ ಚಕಮಕಿ ನಡೆದು ಹೊಡೆದಾಟ ನಡೆಯಿತು ಎಂದು ಪೊಲೀಸರು ತಿಳಿಸಿದರು.
ಹೊಡೆದಾಟದ ವೇಳೆ ಪ್ರಶಾಂತ್ರ ಕೈಯ ನರ ಕತ್ತರಿಸಲ್ಪಟ್ಟಿದೆ ಎನ್ನಲಾಗಿದೆ. ಸಂದೀಪ್ ಮತ್ತು ಮನ್ದೀಪ್ ತಮ್ಮ ಕುಟುಂಬದ ಜೊತೆ ಅವರ ಮನೆಗೆ ಬಂದು ಪ್ರಭಾತ್ ಮತ್ತು ಪ್ರಶಾಂತ್ಗೆ ಯದ್ವಾತದ್ವಾ ಹೊಡೆದರು. ನಂತರ ಮದ್ಯದ ಬಾಟ್ಲಿಯಿಂದ ಪ್ರಶಾಂತ್ನ ಕೈಗೆ ಗೀಚ್ ನರ ಕತ್ತರಿಸಿ ಹೋಗುವಂತೆ ಮಾಡಿದ್ದಾರೆ. ಘಟನೆಯ ನಂತರ ಪ್ರಶಾಂತ್ ಸಹೋದರ ಪ್ರಭಾತ್ ಸಂದೀಪ್ ಮತ್ತು ಮನ್ದೀಪ್ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು.












