ಒಡಿಸ್ಸ ರೈಲು ದುರಂತಕ್ಕೆ ನಾಲ್ಕು ತಿಂಗಳು; ಇನ್ನೂ ಬಾಕಿ ಉಳಿದ 28 ಮೃತ ದೇಹಗಳು

0
878

ಸನ್ಮಾರ್ಗ ವಾರ್ತೆ

ಭುವನೇಶ್ವರ: ಒಡಿಸ್ಸದಲ್ಲಿ ರೈಲು ದುರಂತ ಆಗಿ ನಾಲ್ಕು ತಿಂಗಳಾಯಯತು. ಈ ವರೆಗೂ ಕೆಲವು ಮೃತರ ವಿಳಾಸವೇ ಇಲ್ಲದಂತಾಗಿದ್ದು ಮೃತದೇಹವನ್ನು ಕೊಂಡು ಹೋಗಲು ಯಾರು ಮುಂದೆ ಬಂದಿಲ್ಲ.

ಈ ಕಾರಣದಿಂದ ಮೃತದೇಹ ಸಂಸ್ಕಾರಕ್ಕೆ ಭುವನೇಶ್ವರದ ಮುನ್ಸಿಪಲ್ ಕಾರ್ಪೊರೇಷನ್ ಮುಂದಾಗಿದ್ದು ಹೀಗೆ 28 ಮೃತದೇಹಗಳ ಶವಸಂಸ್ಕಾರ ನಡೆಯಲಿದೆ ಎಂದು ವರದಿಯಾಗಿದೆ.

ಭುವನೇಶ್ವರದ ಏಮ್ಸ್ ಆಸ್ಪತ್ರೆಯಲ್ಲಿ ಈ ಎಲ್ಲ ಮೃತದೇಹವನ್ನು ಈ ವರೆಗೂ ಕಾಯ್ದಿರಿಸಿಕೊಳ್ಳಲಾಗಿತ್ತು. ಡಿಎನ್‍ಎ ಪರೀಕ್ಷೆ ಮಾಡಿ 53 ಮೃತ ದೇಹಗಳನ್ನು ಅವರವರ ಸಂಬಂಧಿಕರಿಗೆ ಹಸ್ತಾಂತರಿಸಲಾಯಿತು. ಉಳಿದ 28 ಮೃತ ಶರೀರಗಳನ್ನು ವಿಚಾರಿಸಿ ಇದುವರೆಗೂ ಯಾರೂ ಬಂದಿಲ್ಲ. ಆದುದರಿಂದ ಮುನ್ಸಿಪಾಲಿಟಿ ಸಂಸ್ಕರಿಸುವ ತಿರ್ಮಾಣಕ್ಕೆ ಬಂದಿದೆ.

ಸಿಬಿಐ ಅಧಿಕಾರಿಗಳ ಮೇಲ್ನೋಟದಲ್ಲಿ ಮೃತದೇಹ ಸಂಸ್ಕರಿಸುವ ಕೆಲಸ ನಡೆಯಲಿದೆ. ಸತ್ಯನಗರ, ಭರತಪುರದಲ್ಲಿ ಮೃತದೇಹ ಅಂತಿಮ ಸಂಸ್ಕಾರ ನೆರವೇರಿಸಲಾಗುತ್ತದೆ. ಇದನ್ನು ವೀಡಿಯೊ ಮೂಲಕ ಬಹಿರಂಗಪಡಿಸುವುದಾಗಿ ಸಂಬಂಧಪಟ್ಟ ಅಧಿಕಾರಿಗಳು ತಿಳಿಸಿದರು.

ಜೂನ್ ಎರಡಕ್ಕೆ ಬಾಹನಗರ ಬಝಾರ್ ರೈಲ್ವೆ ನಿಲ್ದಾಣಕ್ಕೆ ಸಮೀಪದಲ್ಲಿ ಕೊರಮಂಡಲ ಚೆನ್ನೈ ಎಕ್ಸ್‌ಪ್ರೆಸ್ ಹಾಗೂ ಯಶವಂತಪುರ -ಹೌರ ಸೂಪರ್ ಫಾಸ್ಟ್ ಎಕ್ಸ್‌ಪ್ರೆಸ್‌, ಸರಕು ಸಾಗಿಸುವ ರೈಲುಗಳು ಪರಸ್ಪರ ಢಿಕ್ಕಿಯಾಗಿದ್ದವು.