ಸನ್ಮಾರ್ಗ ವಾರ್ತೆ
ಜಲಂಧರ್, ಅ. 9: ಪಂಜಾಬಿನ ಜಲಂಧರ್ ನಲ್ಲಿ ಪ್ರಿಡ್ಜ್ ನ ಕಂಪ್ರೆಸರ್ ಸ್ಫೋಟಗೊಂಡು ಒಂದೇ ಕುಟುಂಬದ ಐದು ಮಂದಿ ಮೃತಪಟ್ಟಿದ್ದಾರೆ.
ರವಿವಾರ ಮಧ್ಯ ರಾತ್ರೆಯಲ್ಲಿ ಕಂಪ್ರೆಸರ್ ಸ್ಫೋಟಗೊಂಡಿದೆ. ಮೃತರಲ್ಲಿ 3 ಮಕ್ಕಳು ಎಪ್ಪತ್ತು ವರ್ಷದ ಯಶಪಾಲ ಘಾಯ್ ಮತ್ತು ನಲ್ವತ್ತು ವರ್ಷದ ರುಚಿ ಘಾಯ್, ಹದಿನಾಲ್ಕು ವರ್ಷದ ಮನಿಷಾ , ಹತ್ತು ವರ್ಷದ ಅಕ್ಷಯ್, ಹನ್ನೆರಡು ವರ್ಷದ ದಿಯ ಸೇರಿದ್ದು ಕಂಪ್ರೆಸರ್ ಸ್ಫೋಟದಲ್ಲಿ ಬೆಂಕಿ ಹಿಡಿದದ್ದು ಇವರ ಸಾವಿಗೆ ಕಾರಣವಾಗಿದೆ.
ಅಂದರೆ ಇವರೆಲ್ಲ ಮಧ್ಯರಾತ್ರೆಯಾದ್ದರಿಂದ ಗಾಢ ನಿದ್ದೆಯಲ್ಲಿದ್ದರು. ಬೆಂಕಿ ಹಿಡಿದುದು ಗೊತ್ತಾಗಲಿಲ್ಲ. ಸುಟ್ಟು ಬೆಂದು ಹೋಗಿದ್ದಾರೆ.
ಮನೆಯಲ್ಲಿ ಸರಿಯಾಗಿ ಅತ್ತಿತ್ತ ಗಾಳಿ ಸಂಚಾಯ ಇರಲಿಲ್ಲ. ಇದು ಕಂಪ್ರೆಸ್ ಸ್ಫೋಟಕ್ಕೆ ಒಂದು ಕಾರಣವಾಯಿತು. ಪ್ರಾಥಮಿಕ ಹಂತ ತನಿಖೆಯಲ್ಲಿ ಸಿಕ್ಕಿದ್ದು ಇಷ್ಟೇ ವಿವರವಾದರೂ ಹೆಚ್ಚಿನ ತನಿಖೆ ನಡೆಯುತ್ತಿದೆ. ಸಮಗ್ರ ತನಿಖೆಗೆ ಪಂಜಾಬ್ ಸರಕಾರ ಆದೇಶ ಹೊರಡಿಸಿದೆ.












