ಸನ್ಮಾರ್ಗ ವಾರ್ತೆ
ಕ್ಯಾಲಿಫೋರ್ನಿಯಾ, ನ.4: ಇಸ್ರೇಲಿಗೆ ಆಯುಧಗಳನ್ನು ಸಾಗಿಸುತ್ತಿದ್ದ ಹಡಗನ್ನು ಅಮೆರಿಕದ ಒಕ್ಲೆಂಡ್ ಬಂದರಿನಲ್ಲಿ ಪ್ರತಿಭಟನಾಕಾರರು ತಡೆದಿದ್ದಾರೆ.
ಶುಕ್ರವಾರ ಬೆಳಗ್ಗೆ 200ರಷ್ಟು ಪ್ರತಿಭಟನಾಕಾರರು ಇಸ್ರೇಲಿಗೆ ಸೈನಿಕ ಸಹಾಯಕ ನೀಡಬಾರದು. ಕದನ ವಿರಾಮ ಘೋಷಿಸಬೇಕು ಎಂಬ ಬ್ಯಾನರ್ ಗಳು ಹಾಗೂ ಫೆಲೆಸ್ತೀನ್ ಧ್ವಜದೊಂದಿಗೆ ಕೆಪ್ ಓರ್ಲಾಂಡೊ ಹಡಗಿಗೆ ಹತ್ತಿ ಮುಂದೆ ನಿಂತು ಘೋಷಣೆ ಕೂಗಿ ಪ್ರತಿಭಟಿಸಿದ್ದಲ್ಲದೇ ಹಡಗು ಹೊರಡುವುದಂತೆ ತಡೆದರು.
ಸಾನ್ಫ್ರಾನ್ಸಿಸ್ಕೊ ಕೇಂದ್ರವಾಗಿಟ್ಟು ಕಾರ್ಯ ನಿರ್ವಹಿಸುವ ಅರಬ್ ರಿಸೋರ್ಸ್ ಆರ್ಗನೈಸೇಶನ್ ಸೆಂಟರ್ ನೇತೃತ್ವದಲ್ಲಿ ಪ್ರತಿಭಟನೆ ನಡೆಯಿತು. ಯಹೂದಿ ವಿಭಾಗದ ಹಲವು ಮಂದಿ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.
https://x.com/ajplus/status/1720595005717500345?s=20
ಈ ಮೊದಲು ಇರಾಕ್, ಅಫ್ಘಾನಿಸ್ತಾನ ಅತಿಕ್ರಮಣದಲ್ಲಿ ಕೂಡಾ ಕೇಪ್ ಓಕ್ಲೆಂಡ್ ಹಡಗನ್ನು ಬಳಸಲಾಗಿತ್ತು. 2014 ಮತ್ತು 2021ರಲ್ಲಿ ಇದೇ ರೀತಿಯಲ್ಲಿ ಓಕ್ಲೆಂಡಿನಲ್ಲಿ ಪ್ರತಿಭಟನೆ ನಡೆದಿತ್ತು.
ಅಮೆರಿಕ ಸಾಮ್ರಾಜ್ಯಶಾಹಿತ್ವ ಜಗತ್ತಿನ ದಶಲಕ್ಷ ಲೆಕ್ಕದಲ್ಲಿ ಜನರನ್ನು ಕೊಂದು ಹಾಕಿದೆ. ಮತ್ತು ಅಮೆರಿಕ ಇಸ್ರೇಲ್ ಸೇರಿದೊಡ್ಡ ಯುದ್ಧ ಅಪರಾಧ ಮಾಡುತ್ತಿದೆ ಎಂದು ಪ್ರತಿಭಟನಾಕಾರರು ಆರೋಪಿಸಿದರು. ಒಂಬತ್ತು ಗಂಟೆಗಳ ನಂತರ ಹಡಗು ಹೊರಟರೂ ಮುಂದಿನ ಸ್ಟಾಪಿನಲ್ಲಿ ನೋಡಿಕೊಳ್ಳುತ್ತೇವೆ ಎಂದು ಪ್ರತಿಭಟನಾಕಾರರು ಕೂಗು ಹಾಕಿದರು. ಪೊಲೀಸರು ಪ್ರತಿಭಟನಾಕಾರರನ್ನು ಬಂಧಿಸಿ ತೆರವುಗೊಳಿಸಿದರು.












