ಉಬರ್ ಟ್ಯಾಕ್ಸಿಯೆಂದು ಕಾರಿಗೆ ಹತ್ತಿದ ವಿದ್ಯಾರ್ಥಿನಿಯ ಕ್ರೂರ ಅತ್ಯಾಚಾರ,ಹತ್ಯೆ

0
2692

ಸೌತ್ ಕರೊಲಿನ,ಎ.1: ಉಬರ್ ಟ್ಯಾಕ್ಸಿಯೆಂದು ಕಾರಿಗೆ ಹತ್ತಿದ ಕಾಲೇಜು ವಿದ್ಯಾರ್ಥಿನಿ ಕ್ರೂರ ಅತ್ಯಾಚಾರಕ್ಕೊಳಗಾಗಿ ಮೃತಪಟ್ಟಿದ್ದಾಳೆ. ನಿರಂತರ 14 ಗಂಟೆಗಳ ಕಾಲ ಅತ್ಯಾಚಾರಕ್ಕೊಳಗಾದ ಸಮಂತಾ ಜೋಸೆಫ್ಸ್‍ಳ ಮೃತದೇಹ ಗದ್ದೆ ಬದಿಯಲ್ಲಿ ಪತ್ತೆಯಾಗಿದೆ. ಸಮಾಂತಳನ್ನು ಕ್ರೂರವಾಗಿ ಅತ್ಯಾಚಾರ ಮಾಡಿ ಕೊಂದು ಹಾಕಿದ ಆರೋಪಿ ನಡಾನಿಯಲ್ ರೌಲ್‍ನನ್ನು ಪೊಲೀಸರು ಬಂಧಿಸಿದ್ದಾರೆ. ಆರೋಪಿ ಕಾರಿನೊಳಗೆ ಚೈಲ್ಡ್ ಲಾಕ್ ಹಾಕಿದ್ದರಿಂದ ಬಾಗಿಲು ತೆರದು ಪಾರಾಗಲು ಸಮಾಂತಳಿಗೆ ಆಗಿರಲಿಲ್ಲ.

ಕಳೆದ ಶುಕ್ರವಾರ ಘಟನೆ ನಡೆದಿತ್ತು. ಸಮಾಂತ ಕಾಣೆಯಾದ ಬಳಿಕ ಗೆಳೆಯರು ಹುಡುಕಾಡಿದ್ದು ಮೃತದೇಹ ಗದ್ದೆ ಬದಿ ಪತ್ತೆಯಾಗಿತ್ತು. ಉಬರ್ ಟ್ಯಾಕ್ಸಿಯೆಂದು ಸಮಾಂತ ಕಾರಿಗೆ ಕೈತೋರಿಸಿದ್ದಳು. ಕಾರು ನಿಲ್ಲಿಸಿದ ಕೂಡಲೇ ಅದರಲ್ಲಿ ಹತ್ತಿ ಕುಳಿತಿದ್ದಳು. ಸಮಾಂತಳ ದೇಹದಲ್ಲಿ ಹಲವು ಕಡೆ ಆಳವಾದ ಗಾಯಗಳಾಗಿವೆ.

ಸಿಸಿಟಿವಿ ದೃಶ್ಯಗಳನ್ನು ಅನುಸರಿಸಿ ಪೊಲೀಸರು ದುಷ್ಕರ್ಮಿಯನ್ನು ಪತ್ತೆಹಚ್ಚಿದ್ದಾರೆ. ರೊಬಿನ್ಸ್‍ವಿಲ್ಲಾ ನಿವಾಸಿಯಾದ ಸಮಾಂತ ಸೌತ್ ಕರೊಲಿನ ಯುನಿವರ್ಸಿಟಿಯ ವಿದ್ಯಾರ್ಥಿನಿಯಾಗಿದ್ದಾಳೆ.