ಕೇರಳ: ರೋಡ್ ಶೋ ವೇಳೆ ವಾಹನದಿಂದ ಕೆಳಗೆ ಬಿದ್ದ ಪತ್ರಕರ್ತನ ನೆರವಿಗೆ ಧಾವಿಸಿದ ರಾಹುಲ್, ಪ್ರಿಯಾಂಕಾ ಗಾಂಧಿ- ವೀಡಿಯೊ

0
1430

ವಯನಾಡ್,ಎ.4: ವಯನಾಡಿನಲ್ಲಿ ನಾಮಪತ್ರ ಸಲ್ಲಿಸಿದ ಬಳಿಕ ರೋಡ್ ಶೋ ನಡೆಸುವ ವೇಳೆ ಟ್ರಕ್‍ನಿಂದ ಕೆಳಗೆ ಬಿದ್ದು ಗಾಯಗೊಂಡ ಪತ್ರಕರ್ತರಿಗೆ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಸ್ವಯಂ ನೆರವಿಗೆ ಧಾವಿಸಿದರು.
ರೋಡ್ ಶೋ ದೃಶ್ಯಗಳನ್ನು ಚಿತ್ರೀಕರಿಸಲು ಟ್ರಕ್‍ನಲ್ಲಿ ಸಂಚರಿಸುತ್ತಿದ್ದ ಪತ್ರಕರ್ತರು ಬಿದ್ದು ಗಾಯಗೊಂಡರು. ಮಹಿಳಾ ಪತ್ರಕರ್ತರು ಕೂಡ ಕೆಳಗೆ ಬಿದ್ದಿದ್ದಾರೆ. ನಂತರ ಓರ್ವ ಪತ್ರಕರ್ತರಿಗೆ ಅನಾರೋಗ್ಯ ಕಾಡಿತು.  ಕೂಡಲೇ ಅಲ್ಲಿಗೆ ಬಂದ ರಾಹುಲ್ ಗಾಂಧಿ ನೀರು ಕುಡಿಸಿದರು. ಆಸ್ಪತ್ರೆಗೆ ಕರೆದುಕೊಂಡು ಹೋಗಲು ಆಂಬುಲೆನ್ಸ್‍ಗೆ ಸಾಗಿಸಲುಕೂಡ ರಾಹುಲ್ ಗಾಂಧಿ ನೆರವಾದರು. ಅವರ ಹಿಂದೆ ಪ್ರಿಯಾಂಕಾ ಗಾಂಧಿ ಕೂಡ ಇದ್ದರು. ಇಂಡಿಯ ಎಹಡ್ ಕೇರಳ ವರದಿಗಾರ ರಿಟ್ಸನ್ ಉಮ್ಮನ್ ವಾಹನದಿಂದ ಬಿದ್ದ ನಂತರ ಅಸ್ವಸ್ಥಗೊಂಡಿದ್ದರು. ರಿಟ್ಸನ್‍ರನ್ನು ಆಂಬುಲೆನ್ಸ್‍ಗೆ ಹತ್ತಿಸಲು ರಾಹುಲ್ ಗಾಂಧಿ ಶ್ರಮಿಸುತ್ತಿದ್ದಾಗ ಪ್ರಿಯಾಂಕಾ ಗಾಂಧಿ ರಿಟ್ಸನ್‍ರ ಶೂ ಹಿಡಿದುಕೊಂಡು ಬರುವುದು ವೀಡಿಯೊದಲ್ಲಿ ಸ್ಪಷ್ಟವಾಗಿ ಕಾಣಿಸುತ್ತಿದೆ.