ರಾಹುಲ್ ಗಾಂಧಿ ಪ್ರಧಾನಿಯಾಗುವುದಿಲ್ಲ- ಮೇನಕಾ ಗಾಂಧಿ

0
1077

ಹೊಸದಿಲ್ಲಿ,ಎ.6: ಪವಾಡಗಳೇನೂ ನಡೆಯದಿದ್ದರೆ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಪ್ರಧಾನಿಯಾಗುವುದಿಲ್ಲ ಎಂದು ಬಿಜೆಪಿ ನಾಯಕಿ ಹಾಗೂ ಕೇಂದ್ರ ಸಚಿವೆ ಮೇನಕಾ ಗಾಂಧಿ ಹೇಳಿದ್ದಾರೆ. ರಾಜಕೀಯದಲ್ಲಿ ಚಲನೆ ಸೃಷ್ಟಿಸಲು ಪ್ರಿಯಾಂಕಾ ಗಾಂಧಿಯಿಂದ ಸಾಧ್ಯವಿಲ್ಲ. ಜನರ ಬೆಂಬಲ ಪ್ರಿಯಾಂಕಾ ಗಾಂಧಿಗಿಲ್ಲ ಎಂದು ಮೇನಕಾ ಗಾಂಧಿ ಹೇಳಿದರು.

ಸುಲ್ತಾನ್‍ಪುರದಿಂದ ಚುನಾವಣೆಯಲ್ಲಿ ಸ್ಪರ್ಧಿಸಿ ತಾನು ಜಯಗಳಿಸುವೆ ಎಂದು ಮೇನಕಾ ಗಾಂಧಿ ವಿಶ್ವಾಸ ವ್ಯಕ್ತಪಡಿಸಿದರು. ತನ್ನ ಪತಿ ಸಂಜಯ್ ಗಾಂಧಿ, ಪುತ್ರ ವರುಣ್ ಗಾಂಧಿ ಈ ಕ್ಷೇತ್ರದಲ್ಲಿ ಗೆದ್ದಿದ್ದಾರೆ. ಈ ಸಲ ತನಗೆ ಇಲ್ಲಿಂದ ಗೆಲ್ಲಲು ಸಾಧ್ಯವಾಗಬಹುದು ಎಂದು ಅವರು ಹೇಳಿದರು.

ಎಸ್ಪಿ-ಬಿಎಸ್ಪಿ ಸಖ್ಯ ಕ್ಷೇತ್ರದಲ್ಲಿ ಸವಾಲಲ್ಲ. ಹಣಕ್ಕೆ ಸೀಟುಗಳನ್ನು ಮಾಯಾವತಿ ಮಾರುತ್ತಾರೆ. ಅವರು ಸುಲ್ತಾನ್‍ಪುರ ಕ್ಷೇತ್ರದ ಬಿಎಸ್ಪಿ ಅಭ್ಯರ್ಥಿಯಿಂದ 15 ಕೋಟಿ ರೂಪಾಯಿ ಪಡೆದು ಸೀಟು ನೀಡಿದ್ದಾರೆ ಎಂದು ಮೇನಕಾ ಗಾಂಧಿ ಆರೋಪಿಸಿದರು.