ಮಾಲದ್ವೀಪ ಚುನಾವಣೆ: ಇಬ್ರಾಹೀಂ ಸಾಲಿಹ್‍ರ ಪಾರ್ಟಿ ವಿಜಯದೆಡೆಗೆ

0
683

ಮಾಲೆ,ಎ.7: ಮಾಲದ್ವೀಪ ಪಾರ್ಲಿಮೆಂಟಿನ ಚುನಾವಣೆಯಲ್ಲಿ ಹೊರ ಬಂದ ಮೊದಲ ಫಲಿತಾಂಶದಲ್ಲಿ ಇಬ್ರಾಹೀಂ ಮುಹಮ್ಮದ್ ಸಾಲಿಹ್‍ರ ಮಾಲ್ಡಿವೀಯನ್ ಡೆಮಕ್ರಾಟಿಕ್ ಪಾರ್ಟಿ(ಎಂಡಿಎಂ) ವಿಜಯದೆಡೆಗೆ ಸಾಗಿದೆ.

ಅರ್ಧಾಂಶಕ್ಕಿಂತ ಹೆಚ್ಚು ಬ್ಯಾಲೆಟ್ ಪೆಟ್ಟಿಗೆಗಳ ಎಣಿಕೆ ಕಾರ್ಯ ಮುಗಿದಿದೆ.ಒಟ್ಟು 87 ಸೀಟುಗಳಿದ್ದು ಇದರಲ್ಲಿ 59 ಸೀಟುಗಳಲ್ಲಿ ಎಂಡಿಎಂ ವಿಜಯಗಳಿಸಿದೆ. ಫಲಿತಾಂಶಗಳು ಹೊರಬರುವುದರೊಂದಿಗೆ ಪಾರ್ಟಿ ಕಾರ್ಯಕರ್ತರು ವಿಜಯಾಚಾರಣೆ ಆರಂಭಿಸಿದ್ದಾರೆ.

87 ಸದಸ್ಯರಿರುವ ಮಾಲಿದ್ವೀಪದ ಸಂಸತ್ತಿನ ಚುನಾವಣೆಯ ಮತ ಎಣಿಕೆ ಶನಿವಾರ ಕೊನೆಗೊಂಡಿತು. ಹತ್ತು ಪಾರ್ಟಿಗಳ 386 ಅಭ್ಯರ್ಥಿಗಳು ಚುನಾವಣಾ ಕಣದಲ್ಲಿದ್ದರು.