ಹೊಸದಿಲ್ಲಿ,ಎ.10: ಮೇವು ಹಗರಣ ಪ್ರಕರಣದಲ್ಲಿ ಆರ್ಜೆಡಿ ನಾಯಕ ಲಾಲು ಪ್ರಸಾದ್ ಯಾದವ್ರಿಗೆ ಸುಪ್ರೀಂಕೋರ್ಟು ಜಾಮೀನು ನಿರಾಕರಿಸಿದೆ. 25 ವರ್ಷದ ಜೈಲು ಶಿಕ್ಷೆಯಲ್ಲಿ 14 ತಿಂಗಳು ಮಾತ್ರ ಅವರು ಈ ವರೆಗೆ ಶಿಕ್ಷೆ ಅನುಭವಿಸಿದ್ದಾರೆ ಎಂದು ಸುಪ್ರೀಂಕೋರ್ಟು ಹೇಳಿತು. ಆದರೆ, 25 ವರ್ಷ ಶಿಕ್ಷೆಯೇ 14 ವರ್ಷ ಶಿಕ್ಷೆಯೇ ಎಂಬುದನ್ನು ಹೈಕೋರ್ಟು ತೀರ್ಮಾನಿಸಲಿದೆ ಎಂದು ಚೀಫ್ ಜಸ್ಟಿಸ್ ರಂಜನ್ ಗೊಗೊಯಿ ಹೇಳಿದರು. ರಾಜಕಾರಣಿಗಳ ವಿರುದ್ಧ ಪ್ರಕರಣಗಳನ್ನು ವಿಳಂಬಿಸದೆ ಇತ್ಯರ್ಥ ಪಡಿಸಬೇಕೆಂದು ಹೈಕೋರ್ಟಿಗೆ ಸೂಚಿಸಲಾಗುವುದು ಎಂದು ಸುಪ್ರೀಂ ಕೋರ್ಟು ಜಡ್ಜ್ ತಿಳಿಸಿದರು.
ಲಾಲು ಪ್ರಸಾದ್ ಯಾದವ್ರನ್ನು ಜಾಮೀನಿನಲ್ಲಿ ಬಿಡುಗಡೆಗೊಳಿಸುವುದರಿಂದ ಏನು ಅಪಾಯವಿದೆ ಎಂದು ಕಪಿಲ್ ಸಿಬಲ್ ಕೋರ್ಟಿನ್ನು ಕೇಳಿದರು. ಶಿಕ್ಷೆಗೊಳಗಾಗಿದ್ದಾರೆ ಎನ್ನುವುದು ಬಿಟ್ಟರೆ ಬೇರೆಯಾವುದು ಇಲ್ಲ ಎಂದು ಕೋರ್ಟು ಹೇಳಿತು. ಶಿಕ್ಷೆಗೊಳಗಾದ ವ್ಯಕ್ತಿಗೆ ಜಾಮೀನು ನೀಡಲು ಸಾಧ್ಯವಿಲ್ಲ ಎಂದು ಅದು ತಿಳಿಸಿತು. ಲಾಲು ಪ್ರಸಾದ್ ಯಾದವ್ರ ಜಾಮೀನು ಅರ್ಜಿಯನ್ನು ಸಿಬಿಐ ಮಂಗಳವಾರ ಸುಪ್ರೀಂಕೋರ್ಟಿನಲ್ಲಿ ವಿರೋಧಿಸಿತ್ತು. ಲೋಕಸಭಾ ಚುನಾವಣೆ ನಡೆಯುವ ಸಮಯದಲ್ಲಿ ರಾಜಕೀಯ ಮಾಡಿ ಜಾಮೀನನ್ನು ದುರುಪಯೋಗಿಸಿದ್ದಾರೆ ಎಂದು ಸಿಬಿಐ ಕೋರ್ಟಿಗೆ ತಿಳಿಸಿತ್ತು. ಆರೋಗ್ಯ ಸಮಸ್ಯೆಯಲ್ಲಿ ಎಂಟು ತಿಂಗಳು ಆಸ್ಪತ್ರೆಯಲ್ಲಿದ್ದ ಸಮಯದಲ್ಲಿ ಸಮಯದಲ್ಲಿ ಲಾಲು ರಾಜಕೀಯ ಚಟುವಟಿಕೆಗಳನ್ನು ಮಾಡಿದರೆಂದು ಸಿಬಿಐ ಆರೋಪಿಸಿತ್ತು.












