ಪ್ರಧಾನಿ ಮೋದಿ ವಿರುದ್ಧ ಪೋಸ್ಟರ್!: ಕಿಸಾನ್ ಮಹಾಸಂಘ ಕಾರ್ಯಕರ್ತರು ಪೊಲೀಸ್ ಕಸ್ಟಡಿಯಲ್ಲಿ

0
595

ಕಲ್ಲಿಕೋಟೆ(ಕೇರಳ), ಎ. 13: ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಪೋಸ್ಟರ್ ಪ್ರಚಾರ ಮಾಡಿದ ರೈತ ಸಂಘಟನೆಯ ವಿರುದ್ಧ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ. ವಿಜಯ ಸಂಕಲ್ಪ ಯಾತ್ರೆಗಾಗಿ ಕಲ್ಲಿಕೋಟೆಗೆ ಬಂದ ಮೋದಿಯ ವಿರುದ್ಧ ಪೋಸ್ಟರ್ ಅಂಟಿಸಿ ಪ್ರತಿಭಟಿಸಿದ ಐವರು ಕಿಸಾನ್ ಮಹಾ ಸಂಘ್ ಕಾರ್ಯಕರ್ತರನ್ನು ಕಸಬ ಪೊಲೀಸರು ಕಸ್ಟಡಿಗೆ ಪಡೆದಿದ್ದು ಹನ್ನೆರಡು ಗಂಟೆ ತಡೆದಿರಿಸಿದರು. ಕಾರ್ಯಕ್ರಮ ಮುಗಿದು ಮೋದಿ ಮರಳಿ ಹೋದ ಬಳಿಕ ಕೇಸು ದಾಖಲಿಸಿ ಇವರನ್ನು ಬಿಡುಗಡೆಗೊಳಿಸಿದರು.

“ಮೋದಿ ರೈತ ದ್ರೋಹಿ, 70,000 ರೈತರ ಆತ್ಮಹತ್ಯೆಗೆ ಚುನಾವಣೆಯಲ್ಲಿ ಪಾಠ ಕಲಿಸುತ್ತೇವೆ ಎಂಬ ಪೋಸ್ಟರನ್ನು ಕಿಸಾನ್ ಮಹಾಸಂಘದ ಕಾರ್ಯರ್ತರು ಅಂಟಿಸಿದ್ದರು. ಮೋದಿ ಸರಕಾರದ ರೈತ ವಿರೋಧಿ ನೀತಿ ಮತ್ತು ಸುಳ್ಳು ಭರವಸೆಗಳ ಕುರಿತ ನೋಟಿಸನ್ನು ಕೂಡ ಕಿಸಾನ್ ಸಂಘದ ಕಾರ್ಯಕರ್ತರು ಹಂಚಿಕೆ ನಡೆಸಿದ್ದರು. ಆದ್ದರಿಂದ ಸುರಕ್ಷೆಯ ವಿಚಾರವನ್ನು ಪರಿಗಣಿಸಿ ಕಿಸಾನ್ ಮಹಾ ಸಂಘದ ಕಾರ್ಯಕರ್ತರನ್ನು ಹನ್ನೆರಡು ಗಂಟೆಗಳ ಕಾಲ ಪೊಲೀಸ್ ಕಸ್ಟಡಿಯಲ್ಲಿರಿಸಲಾಗಿತ್ತು.