ಇದ್‍ಲಿಬ್‍ನಲ್ಲಿ ಮಾರ್ಚ್ ತಿಂಗಳೊಂದರಲ್ಲೇ ಸಿರಿಯನ್ ಸೇನೆಯಿಂದ 6422 ಬಾರಿ ದಾಳಿ!

0
785

ಇದ್‍ಲಿಬ್,ಎ.13: ಸಿರಿಯದ ಆಂತರಿಕ ಯುದ್ಧ ತೀವ್ರವಾಗಿರುವ ಇದ್‍ಲಿಬ್‍ಗೆ ಕಳೆದ ತಿಂಗಳು ಅಧ್ಯಕ್ಷ ಅಸದ್ ನೇತೃತ್ವದ ಸೇನೆ 6422 ಬಾರಿ ದಾಳಿ ನಡೆಸಿದೆ ಎಂದು ವರದಿಯಾಗಿದೆ. 3950 ಬಾರಿ ಹಮದಲ್ಲಿ 299 ಬಾರಿ ಅಲಪ್ಪೊದಲ್ಲಿ, 2087 ಬಾರಿ ಇದ್‍ಲಿಬ್‍ಗೆ ಸೇನೆ ದಾಳಿ ಮಾಡಿದೆ. ಸ್ವಯಸೇವಾ ಸಂಸ್ಥೆ ವೈಡ್ ಹೆಲ್ಮೆಟ್ಸ್ ಈ ಲೆಕ್ಕವನ್ನು ಬಿಡುಗಡೆಗೊಳಿಸಿದೆ. ಭೂ ಸೇನೆ, ವಾಯು ಸೇನೆಯ ಮೂಲಕ ರಾಕೆಟ್ ದಾಳಿಯ ಲೆಕ್ಕವಿದು. 2018 ಸೆಪ್ಟಂಬರ್ 17ಕ್ಕೆ ಟರ್ಕಿ, ರಷ್ಯದ ನೇತೃತ್ವದಲ್ಲಿ ನಡೆದಿದ್ದ ಒಪ್ಪಂದವನ್ನು ಬಶರುಲ್ ಅಸದ್‍ರ ಸರಕಾರ ಉಲ್ಲಂಘಿಸಿದೆ. ಇದ್‍ಲಿಬ್, ಹಿಮಗಳಲ್ಲಿ ಅಸದ್ ನೇತೃತ್ವದ ಸೇನೆಯಿಂದ ಈಗಲೂ ದಾಳಿ ಮುಂದುವರಿಯುತ್ತಿದೆ. ಮಾರ್ಚ್‍ನಲ್ಲಿ 135 ಮಂದಿ ಪ್ರಜೆಗಳು ದಾಳಿಯಲ್ಲಿ ಕೊಲೆಯಾಗಿದ್ದಾರೆ ಎಂದು ಸಿರಿಯದ ಮಾನವ ಹಕ್ಕು ಸಂಘಟನೆ ತಿಳಿಸಿದೆ.