ಜೊತೆಗೆ ಹುಟ್ಟಿ, ಜೊತೆಯಲ್ಲೇ ಮತದಾನ ಹಕ್ಕು ಪಡೆದ ಐದು ಮಂದಿ

0
2018

ಕರುನಾಗಪಳ್ಳಿ,ಎ.22: ಜೊತೆಯೇ ಹುಟ್ಟಿದ ಐದು ಮಕ್ಕಳಿಗೆ ಹತ್ತೊಂಬತ್ತು ವರ್ಷ ಪೂರ್ತಿಯಾಗಿದ್ದು ಜೊತೆಗೆ ಮತದಾನದಹಕ್ಕು ಪಡೆದುಕೊಂಡಿದ್ದಾರೆ. ಮೊತ್ತಮೊದಲ ಮತದಾನಕ್ಕೆ ಅವರು ಐದು ಮಂದಿ ಮಂಗಳವರ ಮತಗಟ್ಟೆಗೆ ತೆರಳಲಿದ್ದಾರೆ. ಕುಲಶೇಖರಪುರಂ ಆದಿನಾಡ್ ದಕ್ಷಿಣ ಕನ್ನೇಲ್ ಹಔಸಿನ ನಾಸರ್-ರಝೀನಾ ದಂಪತಿಯ ಮಕ್ಕಳಾದ ಮುಹಮ್ಮದ್ ಅಮೀನ್, ಮುಹಮ್ಮದ್ ಆದಿಲ್, ಸುಮಯ್ಯಾ, ಸುಬಿನಾ, ಶಬಾನಾ ಪ್ರಥಮ ಮತದಾನಕ್ಕೆ ಅರ್ಹರಾಗಿದ್ದಾರೆ. ದಂಪತಿಗೆ ಏಳು ವರ್ಷದ ಬಳಿಕ ಇವರಿಗೆ ಒಂದೇ ಹೆರಿಗೆಯಲ್ಲಿ ಐವರು ಜನಿಸಿದರು.

ಅಂಗನವಾಡಿಯಿಂದ ಹೈಯರ್ ಸೆಕಂಡರಿಯವರೆಗೆ ಎಲ್ಲರೂ ಜೊತೆಯಲ್ಲೇ ಕರುನಾಗಪ್ಪಳ್ಳಿ ಸರಕಾರಿ ಹೈಯರ್ ಸೆಕಂಡರಿ ಸ್ಕೂಲ್‍ಗಳಲ್ಲಿ ಕಲಿತಿದ್ದು ವಿದೇಶದಲ್ಲಿ ಉದ್ಯೋಗದಲ್ಲಿದ್ದ ಇವರ ತಂದೆ ಒಂದು ವರ್ಷದಿಂದ ಊರಿನಲ್ಲಿಯೇ ಇದ್ದಾರೆ. 1999 ಸೆಪ್ಟಂಬರ್ 13ಕ್ಕೆ ಒಚ್ಚಿರ ಎಂಬಲ್ಲಿನ ಖಾಸಗಿ ಆಸ್ಪತ್ರೆಯಲ್ಲಿ ಇವರು ಜನಿಸಿದ್ದರು. ಮೂವರು ಹೆಣ್ಣುಮಕ್ಕಳು ಟಿಟಿಸಿ ಕೋರ್ಸ್ ಮುಗಿಸಿದ್ದು ಪರೀಕ್ಷೆಗೆ ತಯಾರಿ ನಡೆಸುತ್ತಿದ್ದಾರೆ.

ಇಬ್ಬರು ಗಂಡು ಮಕ್ಕಳು ಕರುನಾಗಪ್ಪಳ್ಳಿ ಖಾಸಗಿ ಕಾಲೇಜಿನಲ್ಲಿ ಎರಡನೇ ವರ್ಷ ಪದವಿ ವಿದ್ಯಾರ್ಥಿಗಳಾಗಿದ್ದಾರೆ. ಮೊದಲ ಮತದಾನ ಮುಸ್ಲಿಂ ಎಲ್‍ಪಿಸ್ಕೂಲ್‍ನ ಮತಗಟ್ಟೆಯಲ್ಲಿ ಇವರು ಮಾಡಲಿದ್ದು ಜಾತ್ಯತೀತ ನಿಲುವಿನ ಸರಕಾರ ಅಧಿಕಾರಕ್ಕೆ ಬರಬೇಕೆಂದು ಐವರು ಒಕ್ಕೊರಲ ಅಭಿಪ್ರಾಯವನ್ನು ವ್ಯಕ್ತಪಡಿಸಿದರು.