ವಾಷಿಂಗ್ಟನ್,ಮೇ.1: ಈಜಿಪ್ಟ್ನ ಮುಸ್ಲಿಂ ಬ್ರದರ್ ಹುಡ್ನ್ನು ಭಯೋತ್ಪಾದಕ ಸಂಘಟನೆಯಾಗಿ ಘೋಷಿಸಲು ಅಮೆರಿಕದ ಡೊನಾಲ್ಡ್ ಟ್ರಂಪ್ ಆಡಳಿತ ಕೂಟ ಸಿದ್ಧವಾಗಿದೆ. ಟ್ರಂಪ್ರ ತೀರ್ಮಾನವನ್ನು ಅಮೆರಿಕದ ರಾಜ್ಯ ಕಾರ್ಯದರ್ಶಿ ಮೈಕ್ ಪೊಂಪಿಯೊ, ರಾಷ್ಟ್ರೀಯ ಭದ್ರತಾ ಸಲಹೆಗಾರ ಜಾನ್ ಬಾಲ್ಟನ್ ಬೆಂಬಲಿಸಿದ್ದಾರೆ. ಆದರೆ ಪೆಂಟಗನ್, ರಾಷ್ಟ್ರೀಯ ಸುರಕ್ಷಾ ಅಧಿಕಾರಿಗಲು, ಸರಕಾರದ ವಕೀಲರು, ರಾಜತಾಂತ್ರಿಕ ಅಧಿಕಾರಿಗಳು ಕಾನೂನು ಮತ್ತು ನೀತಿಗೆ ಸಂಬಂಧಿಸಿದ ಅಡಚಣೆಗಳನ್ನು ಎತ್ತಿ ತೋರಿಸಿದ್ದಾರೆ.
ಎಪ್ರಿಲ್ನಲ್ಲಿ ಅಮೆರಿಕ ಸಂದರ್ಶನದ ವೇಳೆ ಈಜಿಪ್ಟ್ ಅಧ್ಯಕ್ಷ ಅಬ್ದುಲ್ ಫತ್ತಾಹ್ ಅಲ್ಸಿಸಿ ಬ್ರದರ್ಹುಡ್ನ್ನು ಭಯೋತ್ಪಾದಕ ಸಂಘಟನೆಯೆಂದು ಘೋಷಿಸಲು ಟ್ರಂಪ್ರನ್ನುಆಗ್ರಹಿಸಿದ್ದರು. ಈಗ ಅಮೆರಿಕ ಸಿಸಿಯ ಆಶೆಯನ್ನು ಈಡೇರಿಸುವ ನಿಟ್ಟಿನಲ್ಲಿ ಹೆಜ್ಜೆ ಮುಂದಿಡುತ್ತಿದೆ. ಬ್ರದರ್ಹುಡ್ ಅಥವಾ ಇಕ್ವಾನುಲ್ ಮುಸ್ಲಿಮೂನನ್ನು 1928ರಲ್ಲಿ ಸ್ಥಾಪಿಸಲಾಗಿತ್ತು. ದೇಶದಲ್ಲಿ ನಡೆದ ಮೊದಲ ಪ್ರಜಾಪ್ರಭುತ್ವ ಪರವಾದ ಚುನಾವಣೆಯಲ್ಲಿ ಈಜಿಪ್ಟ್ ಅಧ್ಯಕ್ಷರಾಗಿ ಚುನಾಯಿತರಾಗಿದ್ದ ಬ್ರದರ್ ಹುಡ್ನ ನೇತಾರ ಮುಹಮ್ಮದ್ ಮುರ್ಸಿಯವರನ್ನು 2013ರಲ್ಲಿ ಸೇನಾ ಬುಡಮೇಲು ಕೃತ್ಯದ ಮೂಲಕ ಅಲ್ಸಿಸಿ ಪದಚ್ಯುತಗೊಳಿಸಿದ್ದರು. ತಾನು ಅಧಿಕಾರಕ್ಕೇರಿದ ಬಳಿಕ ಸಿಸಿ ಬ್ರದರ್ ಹುಡ್ನ್ನು ಭಯೋತ್ಪಾದಕ ಸಂಘಟನೆಯೆಂದು ಘೋಷಿಸಿದ್ದರು.












