ಗುರು ನಾನಕ್ ಯುನಿವರ್ಸಿಟಿಗಾಗಿ 70 ಎಕರೆ ಜಮೀನು ಒದಗಿಸಿದ ಪಾಕ್ ಸರಕಾರ

0
538

ಇಸ್ಲಾಮಾಬಾದ್, ಮೇ 3: ಪಾಕಿಸ್ತಾನದ ಪಂಜಾಬ್ ಪ್ರಾಮತದಲ್ಲಿ ಸರಕಾರ ಗುರುನಾನಕ್ ವಿಶ್ವವಿದ್ಯಾನಿಲಯಕ್ಕಾಗಿ ಎಪ್ಪತ್ತು ಎಕರೆ ಜಮೀನ ಒದಗಿಸಿದೆ. ಸಿಖ್ಖರ ಮೊದಲ ಗುರು ಜನಿಸಿದ ಸ್ಥಳ ನನಕಾನಾ ಸಾಹಿಬ್‍ನಲ್ಲಿ ಒಂದು ಅಂತಾರಾಷ್ಟ್ರೀಯ ವಿಶ್ವವಿದ್ಯಾನಿಲಯ ಸ್ಥಾಪನೆಯಾಗಲಿದೆ.
ಪಂಜಾಬ್ ಪ್ರಾಂತದ ಮುಖ್ಯಮಂತ್ರಿ ಉಸ್ಮಾನ್ ಬಜ್‍ದಾರ್ ಗುರುವಾರ ನನಕಾನಾ ಸಾಹಿಬ್‍ನಿಂದ ಎಂಬತ್ತು ಕಿಲೊಮೀಟರ್ ದೂರದಲ್ಲಿ ಗುರುನಾನಕ್ ಅಂತಾರಾಷ್ಟ್ರೀಯ ವಿಶ್ವವಿದ್ಯಾನಿಲಯವನ್ನು 2019-20 ಆರ್ಥಿಕ ವರ್ಷದಲ್ಲಿ ಸ್ಥಾಪಿಸಲಾಗುವುದು ಎಂದು ಪ್ರಕಟಿಸಿದ್ದಾರೆ. ಮಾತ್ರವಲ್ಲ ನನಕಾನಾ ಸಾಹಿಬ್‍ನಲ್ಲಿ ಪೊಲಿಸ್ ಲೈನ್, ರಾಷ್ಟ್ರೀಯ ಪಂಜೀಕರಣ ಡಾಟಬೆಸ್ ಪ್ರಾಧಿಕಾರವನ್ನು ಸ್ಥಾಪಿಸಲಾಗುವುದು ಎಂದು ತಿಳಿಸಿದರು.

ನನಕಾನ ಸಾಹಿಬ್‍ನಲ್ಲಿ ವಾಸವಿರುವ ಸಿಖ್ಖರು ಸುದೀರ್ಘ ಸಮಯದಿಂದ ಗುರುನಾನಕ್ ಯುನಿವರ್ಸಿಟಿಗಾಗಿ ಬೇಡಿಕೆ ಮುಂದಿಡುತ್ತಾ ಬಂದಿದ್ದಾರೆ. 2003ರಲ್ಲಿ ಪರ್ವೇಝ್ ಇಲಾಹಿ ಸರಕಾರ ಈ ವಿಶ್ವವಿದ್ಯಾನಿಲಯದ ಕುರಿತು ಪ್ರಸ್ತಾಪಿಸಿತ್ತು. ಎರಡು ವರ್ಷದ ಹಿಂದೆ ಮುಸ್ಲಿಂ ಲೀಗ್ ಸರಕಾರ ಅಂತಿಮ ಮಂಜೂರಾತಿ ನೀಡಿತ್ತು. ವಿಶ್ವವಿದ್ಯಾನಿಲಯ ಸ್ಥಾಪನೆಗಿಂತ ಮೊದಲು ಗುರುನಾನಕ್ ಅಧ್ಯಯನ ಪೀಠ ಸ್ಥಾಪನೆಯಾಗಲಿದೆ.