ರಾಹುಲ್ ಗಾಂಧಿ ವಿದೇಶಿ ಪ್ರಜೆ ಪ್ರಕರಣ: ತಿರಸ್ಕರಿಸಿದ ಸುಪ್ರೀಂಕೋರ್ಟು

0
498

ಹೊಸದಿಲ್ಲಿ,ಮೇ 9: ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿಯ ವಿದೇಶಿ ಪ್ರಜೆ ಪ್ರಕರಣವನ್ನು ಸುಪ್ರೀಂಕೋರ್ಟು ತಿರಸ್ಕರಿಸಿದೆ. ಚೀಫ್ ಜಸ್ಟಿಸ್ ರಂಜನ್ ಗೊಗೊಯ್ ಅಧ್ಯಕ್ಷತೆಯ ಪೀಠ ಪ್ರಕರಣವನ್ನು ತಳ್ಳಿಹಾಕಿತು. ಈಗ ಈಅರ್ಜಿಯ ಅಗತ್ಯ ಏನಿದೆ. ಯಾವುದಾದರೊಂದು ಕಾಗದದಲ್ಲಿ ಬ್ರಿಟಿಷ್ ಪ್ರಜೆ ಎಂದು ಬರೆದರೆ ಬ್ರಿಟಿಷ್ ಪ್ರಜೆ ಆಗುತ್ತಾರೆಯೇ ಎಂದು ಸುಪ್ರೀಂಕೋರ್ಟು ಅರ್ಜಿದಾರನನ್ನು ಪ್ರಶ್ನಿಸಿತು. ಯಾರಿಗೆ ಪ್ರಧಾನಿಯಾಗುವ ಆಸೆಯಿಲ್ಲ. 130 ಕೋಟಿ ಜನರು ಅದನ್ನು ಬಯಸುತ್ತಾರೆ. ಅದು ಒಳ್ಳೆಯದೇ ಎಂದು ಕೋರ್ಟು ತಿಳಿಸಿತು. ಬ್ರಿಟಿಷ್ ಪ್ರಜೆ ವಿಷಯದಲ್ಲಿ ವಿವರಣೆ ಕೇಳಿ ಮೇ ಒಂದಕ್ಕೆ ಗೃಹ ಸಚಿವಾಲಯ ರಾಹುಲ್ ಗಾಂಧಿಗೆ ನೋಟಿಸು ಕಳುಹಿಸಿದ್ದರು. 2017ರಲ್ಲಿ ಸುಬ್ರಮಣಿಯನ್ ಸ್ವಾಮಿ ರಾಹುಲ್ ವಿರುದ್ಧ ದೂರು ನೀಡಿದ್ದರು. ಲೋಕಸಭಾ ಚುನಾವಣೆಯಲ್ಲಿ ರಾಹುಲ್ ಸ್ಪರ್ಧಿಸದಂತೆ ತಡೆಯಲು ಚುನಾವಣಾ ಆಯೋಗಕ್ಕೆ ಸೂಚಿಸಬೇಕೆಂದು ಅರ್ಜಿಯಲ್ಲಿ ಸ್ವಾಮಿ ವಾದಿಸಿದ್ದರು. ತಾನು ಬ್ರಿಟನ್ ಪ್ರಜೆ ಎಂದು ಸ್ವಯಂ ರಾಹುಲ್‍ರೇ ಬಹಿರಂಗಪಡಿಸಿದ್ದಾರೆಂದು ಅರ್ಜಿಯಲ್ಲಿ ಬೆಟ್ಟು ಮಾಡಿದ್ದರು.