ಹೊಸದಿಲ್ಲಿ,ಮೇ9: ಪ್ರಧಾನಿ ನರೇಂದ್ರ ಮೋದಿ ವಿರುದ್ಧ ವಾರಣಾಸಿಯಿಂದ ಲೋಕಸಭೆಗೆ ಸ್ಪರ್ಧಿಸಲು ಸಲ್ಲಿಸಿದ ನಾಮಪತ್ರವನ್ನು ತಿರಸ್ಕರಿಸಿದ ಚುನಾವಣಾ ಆಯೋಗದ ಕ್ರಮದ ವಿರುದ್ಧ ಸುಪ್ರೀಂಕೋರ್ಟಿನ ಮೊರೆ ಹೋಗಿದ್ದ ಮಾಜಿ ಬಿಎಸ್‍ಎಫ್ ಯೋಧ ಸಮಾಜವಾದಿ ಪಾಟಿ ಅಭ್ಯರ್ಥಿ ತೇಜ್‍ಬಹಾದೂರ್ ಯಾದವ್‍ರ ಅರ್ಜಿಯನ್ನು ಸುಪ್ರೀಂಕೋರ್ಟು ತಳ್ಳಿಹಾಕಿದೆ. ಚೀಫ್ ಜಸ್ಟಿಸ್ ರಂಜನ್ ಗೊಗೊಯಿ ಅಧ್ಯಕ್ಷತೆಯ ಪೀಠ ಅರ್ಜಿಯನ್ನು ತಳ್ಳಿ ಹಾಕಿದ್ದು ‘ಆಯೋಗ ಏಕ ಪಕ್ಷೀಯವಾಗಿ ಕ್ರಮ ಗೊಂಡಿದೆ ಎಂಬ ತೇಜ್‍ಬಹಾದೂರ್‍ರ ವಾದ ಬಲಹೀನವಾಗಿದೆ’ ಎಂದು ಕೋರ್ಟು ನಿರೀಕ್ಷಿಸಿತು.
ಜನ ಪ್ರಾತಿನಿಧ್ಯ ಕಾನೂನು ಪ್ರಕಾರ ಶಿಸ್ತುಕ್ರಮಕ್ಕೆ ವಿಧೇಯನಾದ ಸರಕಾರಿ ಉದ್ಯೋಗಿಗೆ ಚುನಾವಣೆಯಲ್ಲಿ ಸ್ಪರ್ಧಿಸಲು ಆಗುವುದಿಲ್ಲ ಎಂದು ಮೇ ಒಂದಕ್ಕೆ ಚುನಾವಣಾಧಿಕಾರಿ ತೇಜ್ ಬಹಾದೂರ್ ನಾಮಪತ್ರವನ್ನು ತಿರಸ್ಕರಿಸಿದ್ದರು. ಚುನಾವಣಾ ಆಯೋಗ ನಿಗದಿಗೊಳಿಸಿದ್ದ ಪ್ರಮಾಣ ಪತ್ರ ಇಲ್ಲದ್ದು ನಾಮಪತ್ರ ತಿರಸ್ಕಾರದ ಕಾರಣವಾಗಿ ತಿಳಿಸಲಾಯಿತು. ಸರಕಾರದೊಂದಿಗೆ ಅವಿಧೇಯತೆ ಅಥವಾ ಭ್ರಷ್ಟಾಚಾರ ತನ್ನ ವಜಾ ಆಗಿಲ್ಲ ಎಂದು ಪ್ರಮಾಣ ಪತ್ರದಲ್ಲಿ ಸೂಚಿಸಬೇಕಾಗಿತ್ತು. ಪ್ರಮಾಣ ಪತ್ರದ ಜೊತೆಗೆ ಸೇನೆಯಿಂದ ಹೊರಹಾಕಿದ ಆದೇಶ ಪ್ರತಿಯನ್ನು ಸಲ್ಲಿಸಿದ್ದೆ ಎಂದು ತೇಜ್ ಬಹಾದೂರ್ ತಿಳಿಸಿದ್ದರು. ಸೈನಿಕರಿಗೆ ಕೆಟ್ಟ ಆಹಾರ ನೀಡಲಾಗುತ್ತಿದೆ ಎಂದು ಸಾಮಾಜಿಕ ಮಾಧ್ಯಮಗಳಲ್ಲಿ ಪೋಸ್ಟ್ ಹಾಕಿದ್ದಕ್ಕಾಗಿ ಗಡಿರಕ್ಷಣಾ ಪಡೆ ಬಹಾದೂರ್ ವಿರುದ್ಧ ವಜಾ ಕ್ರಮ ಜಾರಿಗೆ ತಂದಿತ್ತು.












