ಲಂಡನ್‍ನಲ್ಲಿ ದುಷ್ಕರ್ಮಿಯ ಇರಿತಕ್ಕೆ ಹೈದರಾಬಾದಿನ ಮುಹಮ್ಮದ್ ನದೀಮುದ್ದೀನ್ ಬಲಿ

0
590

ಹೈದರಾಬಾದ್,ಮೇ 10: ಲಂಡನ್‍ನ ಟೆಸ್ಕೋ ಸೂಪರ್ ಮಾರ್ಕೆಟಿನ ಮಾಲ್ ಉದ್ಯೋಗಿ ಹೈದರಾಬಾದಿನ ಯುವಕ ಮುಹಮ್ಮದ್ ನದೀಮುದ್ದೀನ್ ಎಂಬವರು ಅಜ್ಞಾತ ದುಷ್ಕರ್ಮಿಯ ಇರಿತಕ್ಕೆ ಬಲಿಯಾದರು. ಕಳೆದ ಆರು ವರ್ಷಗಳಿಂದ ನದೀಮುದ್ದೀನ್ ಇಲ್ಲಿ ದುಡಿಯುತ್ತಿದ್ದಾರೆ. ನದೀಮುದ್ದೀನ್ ಏಷ್ಯನ್ ವ್ಯಕ್ತಿಯೊಬ್ಬನಿಂದ ಹತ್ಯೆಯಾದರು ಎಂದು ಕುಟುಂಬ ಮಿತ್ರರಾದ ಫಹೀಂ ಖುರೇಶಿ ತಿಳಿಸಿದ್ದಾರೆ. ನದೀಮುದ್ದೀನ್ ಕೆಲಸ ಮುಗಿಸಿ ಮರಳದ್ದರಿಂದ ಸಂಸ್ಥೆಯ ಅಧಿಕಾರಿಗಳಿಗೆ ಅವರ ಕುಟುಂಬವದವರು ತಿಳಿಸಿದ್ದರು. ನಂತರ ಹುಡುಕಿದಾಗ ಪಾರ್ಕಿಂಗ್ ಏರಿಯಾದಲ್ಲಿ ನದೀಮುದ್ದೀನ್ ಕೊಲೆಯಾದ ಸ್ಥಿತಿಯಲ್ಲಿ ಪತ್ತೆಯಾಗಿದರು. ನದೀಮುದ್ದೀನ್ ಹತ್ಯೆಯ ವಿವರ ತಿಳಿದ ಕೂಡಲೇ ಲಂಡನ್‍ಗೆ ತೆರಳಲು ತುರ್ತು ಸಹಾಯ ಒದಗಿಸುವಂತೆ ಅವರ ಕುಟುಂಬ ವಿದೇಶ ಸಚಿವೆ ಸುಷ್ಮಾ ಸ್ವರಾಜ್‍ರನ್ನು ಸಂಪರ್ಕಿಸಿದೆ.