ಶತ್ರುಗಳು ಅಮೇರಿಕಾ ಆಗಿರಲಿ, ಇಸ್ರೇಲ್ ಆಗಿರಲಿ, ದುರಹಂಕಾರ ಮಟ್ಟ ಹಾಕುವೆವು; ತಯಾರಾಗಿ ಎಂದ ಇರಾನ್

0
714

ಸನ್ಮಾರ್ಗ ವಾರ್ತೆ

ಟೆಹ್ರಾನ್ : ತಮ್ಮ ಮೇಲೆ ನಡೆಯುವ ದಾಳಿಗೆ ಶಕ್ತ ಪ್ರತಿರೋಧ ನೀಡುತ್ತೇವೆ. ಶತ್ರುಗಳು, ಯುನೈಟೆಡ್ ಸ್ಟೇಟ್ಸ್ ಆಗಿರಲಿ ಅಥವಾ ಜಿಯೋನಿಸ್ಟ್ ಶಕ್ತಿಗಳಾಗಲಿ ಅವರ ವಿರುದ್ಧ ಇರಾನ್ ಜನತೆ ಸೆಟೆದು ನಿಲ್ಲುತ್ತದೆ” ಎಂದು ಇರಾನ್ ಸರ್ವೋಚ್ಚ ಧಾರ್ಮಿಕ ನಾಯಕ ಆಯತುಲ್ಲಾ ಖಾಮಿನೈ ಎಚ್ಚರಿಕೆ ನೀಡಿದ್ದಾರೆ.

ರಾಜಧಾನಿ ಟೆಹ್ರಾನ್‌ನಲ್ಲಿ ಮಾತನಾಡಿದ ಅವರು, ಪ್ರತಿರೋಧವನ್ನು ಎದುರಿಸುವಾಗ ಉಗ್ರ ಪ್ರತಿಕ್ರಿಯೆ ನೀಡಬೇಕಾಗುತ್ತದೆ. ಅದನ್ನು ಎದುರಿಸಲು ಶತ್ರುಗಳು ತಯಾರಾಗಿರಲಿ. ದುರಹಂಕಾರವನ್ನು ಮಟ್ಟ ಹಾಕಲು ಮಿಲಿಟರಿ, ಶಸ್ತ್ರಾಸ್ತ್ರಗಳು ಅಥವಾ ರಾಜಕೀಯ ಕ್ರಮಗಳನ್ನು ತೆಗೆದುಕೊಳ್ಳುವೆವು” ಎಂದು ಹೇಳಿದರು.

ಇತ್ತೀಚೆಗೆ, ಅಕ್ಟೋಬರ್ 26ರಂದು ಇಸ್ರೇಲಿ ಸೇನೆ ನಾಲ್ಕು ಗಂಟೆಗಳ ಕಾಲ ಇರಾನ್ ಮೇಲೆ ದಾಳಿ ನಡೆಸಿದ್ದು, ಇದರಲ್ಲಿ ನಾಲ್ಕು ಇರಾನ್ ಸೈನಿಕರು ಸಾವಿಗೀಡಾದರು. ಇರಾನ್ ಸೇನೆ ಈ ದಾಳಿಯನ್ನು ತಡೆಯಲು ಯಶಸ್ವಿಯಾಗಿದ್ದು, “ಟೆಹ್ರಾನ್ ಹಾಗೂ ಇತರ ಸ್ಥಳಗಳಲ್ಲಿ ಇಸ್ರೇಲ್‌ನ ದಾಳಿಯನ್ನು ಹಿಮ್ಮೆಟ್ಟಿಸಿದೆ” ಎಂದು ತಿಳಿಸಿದೆ.