ಹೊಸದಿಲ್ಲಿ,ಮೇ 11: ರಾಜೀವ್ ಗಾಂಧಿಯನ್ನು 1984ರ ಸಿಕ್ಖ್ ವಿರೋಧಿ ದಂಗೆಗೆ ಜೋಡಿಸಿದ ಬಿಜೆಪಿ ವಿರುದ್ಧ ಪಂಜಾಬ್ ಮುಖ್ಯಮಂತ್ರಿ ಕ್ಯಾಪ್ಟನ್ ಅಮರೀಂದರ್ ಸಿಂಗ್ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಸಿಕ್ಖ್ ವಿರೋಧಿ ಗಲಭೆಯನ್ನು ಎತ್ತಿ ಹಿಡಿಯುವವವರು 120 ಸಿಕ್ಖ್ ಧರ್ಮಗ್ರಂಥಗಳನ್ನು ಸುಟ್ಟುಹಾಕಿದ್ದಾರೆ ಎಂದು ಅಮರೀಂದರ್ ಸಿಂಗ್ ಹೇಳಿದರು. ಬಾದಲ್ ಸರಕಾರದ ಕಾಲದಲ್ಲಿ ಸಿಕ್ಖ್ ಗ್ರಂಥಗಳನ್ನು ಇವರು ಸುಟ್ಟು ಹಾಕಿದ್ದಾರೆ. ಇವರೇ ಈಗ ಸಿಕ್ಖ್ ಸಾಮೂಹಿಕ ಹತ್ಯೆಯನ್ನು ಚುನಾವಣಾ ಪ್ರಚಾರದ ವಿಷಯವನ್ನಾಗಿ ಮಾಡುತ್ತಿದ್ದಾರೆ. ಇದರಲ್ಲಿ ತನಿಖೆ ನಿಧಾನಗತಿಯಿಂದ ಸಾಗುತ್ತಿದೆ ಎಂದು ಅಮರೀಂದರ್ ಸಿಂಗ್ ಹೇಳಿದರು.ಪುಲ್ವಾಮ ಆಗಲಿ, ಬಾಲಕೋಟ್ ಆಗಲಿ ಜನರಿಗೆ ಬೇಕಾದ ವಿಷಯವಲ್ಲ ಮೋದಿಯ ರಾಷ್ಟ್ರೀಯತೆಯು ಅಲ್ಲ ಪಂಜಾಬ್ನ ಜನರಿಗೆ ಬೇಕಾಗಿರುವುದು. ಮೋದಿ ಹೇಳುವ ರಾಷ್ಟ್ರೀಯತೆ ದೇಶದ ಜಾತ್ಯತೀತತೆಯನ್ನು ನಾಶಪಡಿಸುತ್ತದೆ. ಪಾಕಿಸ್ತಾನದೊಂದಿಗೆ ಗಡಿ ಹಂಚಿಕೊಂಡಿರುವ ರಾಜ್ಯ ಪಂಜಾಬ್ ಆಗಿದೆ. ಪಂಜಾಬ್ನ ಜನರಿಗೆ ಯುದ್ಧ ಬೇಕಾಗಿಲ್ಲ ಎಂದು ಅಮರೀಂದರ್ ಸಿಂಗ್ ಹೇಳಿದರು. ಪಂಜಾಬ್ನ 13 ಸೀಟುಗಳಲ್ಲಿ ಕಾಂಗ್ರೆಸ್ ಗೆಲ್ಲುತ್ತದೆ. ರಾಷ್ಟ್ರೀಯ ಸಮಸ್ಯೆಗಳನ್ನು ಇಲ್ಲಿ ಚರ್ಚಿಸಲಾಗುತ್ತಿದೆ. ಮೋದಿಯನ್ನು ಬಲಶಾಲಿ ನಾಯಕನೆಂದು ನೀವು ಭಾವಿಸುತ್ತೀರಾ ಎಂದು ಪಂಜಾಬ್ ಮುಖ್ಯಮಂತ್ರಿ ಅಮರೀಂದರ್ ಸಿಂಗ್ ಪ್ರಶ್ನಿಸಿದರು.












