ಮ್ಯಾನ್ ಬುಕರ್ ಪ್ರಶಸ್ತಿ ಪಡೆದ ಮೊದಲ ಅರಬ್ ಮಹಿಳಾ ಸಾಹಿತಿಯಾಗಿ ಜುಖ ಅಲ್‍ ಹಾರ್ಸಿ

0
1025

ಲಂಡನ್,ಮೇ 22: ಮ್ಯಾನ್ ಬುಕರ್ 2019 ಅಂತಾರಾಷ್ಟ್ರೀಯ ಪ್ರಶಸ್ತಿಗೆ ಅರಬ್ ಮಹಿಳಾ ಸಾಹಿತಿ ಅಲ್‍ಹಾರ್ಸಿ ಆಯ್ಕೆಯಾಗಿದ್ದಾರೆ. ‘ಸೆಲಸ್ಟಿಯನ್ ಬಾಡೀಸ್’ ಎನ್ನುವ ಕಾದಂಬರಿ ಪ್ರಶಸ್ತಿಗೆ ಪಾತ್ರವಾಗಿದ್ದು ಪ್ರಶಸ್ತಿ 44 ಲಕ್ಷ(50,000ಪೌಂಡ್) ರೂಪಾಯಿ ನಗದು ಬಹುಮಾನ ಸಿಗಲಿದೆ.

ಕಾದಂಬರಿಯನ್ನು ಇಂಗ್ಲಿಷ್‍ಗೆ ಭಾಷಾಂತರಿಸಿದ ಮೆರ್ಲಿನ್ ಬೂತ್‍ರೊಂದಿಗೆ ಪ್ರಶಸ್ತಿ ಮೊತ್ತವನ್ನು ಅಲ್‍ಹಾರ್ಸಿ ಹಂಚಿಕೊಳ್ಳಲಿದ್ದಾರೆ. ಮ್ಯಾನ್ ಬುಕರ್ ಪ್ರಶಸ್ತಿ ಪಡೆಯುತ್ತಿರುವ ಮೊದಲ ಅರಬ್ ಮಹಿಳಾ ಸಾಹಿತಿ ಜುಖಾ ಹಾರ್ಸಿಯಾಗಿದ್ದಾರೆ ಮತ್ತು ಇಂಗ್ಲಿಷ್‍ಗೆ ಭಾಷಾಂತರಿಸಲಾದ ಮೊದಲ ಒಮನ್ ಕೃತಿ ಕರ್ತೃ ಜುಖಾ ಹಾರ್ಸಿಯವರದ್ದಾಗಿದೆ.

ಅತಿಕ್ರಮಣ ನಂತರ ಕಾಲದ ಒಮನ್ ಹಿನ್ನೆಲೆಯ ಮೂವರು ಒಮನಿ ಸಹೋದರಿಯರ ಕಥೆ ಕಾಂದಂಬರಿಯಲ್ಲಿದೆ. ಶ್ರೀಮಂತ ಅರಬ್ ಸಂಸ್ಕೃತಿಗೆ ಬಾಗಿಲು ತೆರೆದು ಸಿಕ್ಕಿದ್ದಕ್ಕೆ ಸಂತೋಷವಿದೆ ಎಂದು 40ವರ್ಷ ವಯಸ್ಸಿನ ಜೂಖಾ ಪ್ರಶಸ್ತಿ ಪಡೆದ ಬಳಿಕ ಪ್ರತಿಕ್ರಿಯಿಸಿದ್ದಾರೆ. ಇಂಗ್ಲಿಷ್‍ಗೆ ಭಾಷಾಂತರಗೊಳ್ಳುವ ಸಾಹಿತ್ಯ ಕೃತಿಗಳಿಗೆ ಮ್ಯಾನ್ ಬುಕರ್ ಪ್ರಶಸ್ತಿ ನೀಡಲಾಗುತ್ತದೆ.