ಸನ್ಮಾರ್ಗ ವಾರ್ತೆ
ಉತ್ತರ ಪ್ರದೇಶದ ಅಲೀಗಡ್ ಜಿಲ್ಲೆಯ ಚಿಲ್ಕೋರ ಗ್ರಾಮದ ನೂರಕ್ಕಿಂತಲೂ ಅಧಿಕ ಮುಸ್ಲಿಂ ಕುಟುಂಬಗಳಿಗೆ ಮನೆ ತೆರವು ನೋಟಿಸು ನೀಡಲಾಗಿದೆ. ಈದ್ ನ ಬಳಿಕ 15 ದಿನಗಳೊಳಗೆ ಮನೆಯಿಂದ ಹೊರ ಹೋಗದಿದ್ದರೆ ಮನೆಯನ್ನು ದ್ವoಸಗೊಳಿಸಲಾಗುವುದು ಎಂದು ನೋಟಿಸ್ ನಲ್ಲಿ ತಿಳಿಸಲಾಗಿದೆ.
ಈದ್ ಗಿಂತ ದಿನಗಳ ಮೊದಲು ಅಧಿಕಾರಿಗಳು ಈ ನೋಟಿಸ್ ಜಾರಿ ಮಾಡಿದ್ದಾರೆ. ಈ ಮೂಲಕ ಈದ್ ಆಚರಣೆಯ ಮೇಲೆ ಕರಿ ನೆರಳು ಬಿದ್ದಿದೆ. ಆದರೆ ಈ ನೋಟಿಸಿಗೆ ಆಧಾರವೇನು ಅನ್ನುವುದನ್ನು ಅಧಿಕಾರಿಗಳು ಬಹಿರಂಗಪಡಿಸಿಲ್ಲ.
ಇದೇ ವೇಳೆ ನೋಟಿಸು ಪಡೆದ ನಾಗರಿಕರು ಜಿಲ್ಲಾಧಿಕಾರಿಯನ್ನು ಭೇಟಿಯಾಗಿದ್ದಾರೆ. ದಶಕಗಳಿಗಿಂತಲೂ ಅಧಿಕ ಸಮಯದಿಂದ ಇಲ್ಲಿ ತಾವು ವಾಸವಾಗಿರುವುದನ್ನು ಮತ್ತು ಅದಕ್ಕೆ ಇರುವ ದಾಖಲೆಯನ್ನು ಜಿಲ್ಲಾಧಿಕಾರಿಗೆ ಒಪ್ಪಿಸಿದ್ದಾರೆ.












