ಕಟ್ಟಡ ಅವಶೇಷಗಳ ನಡುವೆ ಈದ್ ನಮಾಝ್ ನಿರ್ವಹಿಸಿದ ಗಾಝಾದ ಮಂದಿ

0
338

ಸನ್ಮಾರ್ಗ ವಾರ್ತೆ

ಈದ್ ಕೊನೆಗೊಂಡಿದ್ದರೂ ಗಾಝದ ಮಂದಿ ನಡೆಸಿದ ಪ್ರಾರ್ಥನೆಯ ಚಿತ್ರಗಳು ಈಗಲೂ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ. ಇಸ್ರೇಲ್ ಬಾಂಬ್ ನಿಂದ ಅತ್ಯಧಿಕ ನಾಶಗೊಂಡಿರುವ ಪಶ್ಚಿಮ ಗಾಝ ಮತ್ತು ಖಾನ್ ಯೂನಿಸ್ ನಲ್ಲಿ ಗಾದ ಮಂದಿ ನಮಾಝ್ ಮಾಡಿದ ಚಿತ್ರಗಳು ಕಣ್ಣನ್ನು ಮಂಜು ಗೊಳಿಸುತ್ತವೆ

ಅತ್ಯಂತ ಕಡು ಕಷ್ಟದ ದಿನಗಳನ್ನು ಗಾಜಾದ ಮಂದಿ ಕಳೆಯುತ್ತಿದ್ದರೂ ಈದ್ ನ ಸಂದರ್ಭದಲ್ಲಿ ಸಂತಸವನ್ನು ಕಂಡುಕೊಳ್ಳಲು ಅವರೆಲ್ಲರೂ ಯತ್ನಿಸುವುದು ಕಂಡುಬಂತು. ಮುಖ್ಯವಾಗಿ ಇಸ್ರೇಲ್ ಬಾಂಬು ಹಾಕಿ ಉರುಳಿಸಿದ ಕಟ್ಟಡಗಳ ನಡುವೆ ಜಾಗ ಮಾಡಿಕೊಂಡು ಇವರು ನಮಾಝ್ ನಿರ್ವಹಿಸಿದ್ದಾರೆ. ಈ ಕಟ್ಟಡಗಳ ಅವಶೇಷಗಳ ನಡುವೆಯೇ ಅವರು ನಡೆದುಕೊಂಡು ತಕ್ಬೀರ್ ಘೋಷಣೆ ಮಾಡಿದ್ದಾರೆ. ಇದೇ ವೇಳೆ ಹೊಸ ಬಟ್ಟೆ ಮತ್ತು ವಿಶೇಷ ಆಹಾರಗಳಿಲ್ಲದೆ ಅವರು ಈ ಬಾರಿ ಹಬ್ಬವನ್ನು ಆಚರಿಸಿದ್ದಾರೆ ಎಂದು ವರದಿಯಾಗಿದೆ.

ಗಾಝದ ವಿವಿಧ ಭಾಗಗಳಲ್ಲಿ ಪುಟ್ಟ ಪುಟ್ಟ ಟೆಂಟ್ ಗಳನ್ನು ಹಾಕಿಕೊಂಡಿರುವ ತಾಯಂದಿರು ತಮ್ಮ ಮಕ್ಕಳನ್ನು ಅಲ್ಲಿ ಕೂರಿಸಿ ಈದ್ ನ ವಿಶೇಷತೆಯನ್ನು ನೆನಪಿಸಿಕೊಂಡಿದ್ದಾರೆ. ಅವರು ತಮ್ಮ ಕುಟುಂಬಕರ ಜೊತೆ ಕಳೆದಿದ್ದಾರೆ ಮತ್ತು ತಮ್ಮನ್ನು ಕಳೆದು ಹೋದವರ ಸಮಾಧಿಗಳಿಗೆ ಭೇಟಿ ನೀಡಿ ನೆನಪಿಸಿಕೊಂಡಿದ್ದಾರೆ.

ಇದೇವೇಳೆ ಈದ್ ನ ದಿನವೂ ಇಸ್ರೇಲ್ ಬಾಂಬ್ ಹಾಕುವುದನ್ನು ನಿಲ್ಲಿಸಿಲ್ಲ ಎಂದು ವರದಿಯಾಗಿದೆ.