ಝಮ್ ಝಮ್ ನೀರು: ಯಾತ್ರಿಕರಿಗೆ ನಿಯಮಗಳನ್ನು ನೆನಪಿಸಿದ ಸೌದಿ ಅರೇಬಿಯಾ

0
703

ಸನ್ಮಾರ್ಗ ವಾರ್ತೆ

ಝಮ್ ಝಮ್ ನೀರನ್ನು ವಿಮಾನದ ಮೂಲಕ ಊರಿಗೆ ಕೊಂಡು ಹೋಗುವವರಿಗೆ ಅದರ ನಿಯಮಗಳನ್ನು ಮತ್ತೊಮ್ಮೆ ಸೌದಿ ಹಜ್ ಮತ್ತು ಉಮ್ರಾ ಸಚಿವಾಲಯ ನೆನಪಿಸಿದೆ. ಯಾತ್ರಿಕರು ವಿಮಾನ ನಿಲ್ದಾಣದಲ್ಲಿ ಅಧಿಕೃತವಾಗಿ ಮಾರಾಟ ಮಾಡುವ ಕೇಂದ್ರಗಳಿಂದಲೇ ಝಮ್ ಝಮ್ ನೀರನ್ನು ಪಡೆದುಕೊಳ್ಳಬೇಕು ಎಂದು ಎಚ್ಚರಿಸಲಾಗಿದೆ.

ವಿಶೇಷವಾಗಿ ತಯಾರಿಸಲಾದ ಕಣ್ವೇಯರ್ ಬೆಲ್ಟಿನ ಮೂಲಕವೇ ಬಾಟಲ್ ಗಳನ್ನು ಲಗೇಜಿಗೆ ನೀಡಬೇಕಾಗಿದೆ. ಅದೇ ವೇಳೆ ಲಗೇಜ್ ನ ಜೊತೆ ಝಮ್ ಝಮ್ ಅನ್ನು ಪ್ಯಾಕ್ ಮಾಡಬಾರದು ಎಂದು ನಿರ್ದೇಶಿಸಲಾಗಿದೆ. ಪ್ರತಿ ಯಾತ್ರಿಕರು ಕೂಡ ಒಂದು ಬಾಟಲ್ ಝಂ ಝಂ ಅನ್ನು ಮಾತ್ರವೇ ಕೊಂಡೊಯ್ಯಬಹುದಾಗಿದೆ. ಇದರಲ್ಲಿ 5 ಲೀಟರ್ ಝಮ್ ಝಮ್ ಇರಲಿದೆ.

ಮಕ್ಕ ಮದೀನಾ ಜಿದ್ದ ರಿಯಾದ್ ದಮ್ಮಮ್ ಮುಂತಾದ ಎಲ್ಲಾ ಏರ್ಪೋರ್ಟ್ ಗಳಲ್ಲೂ ಈ ನಿರ್ದೇಶನಗಳನ್ನು ಪಾಲಿಸಬೇಕು ಎಂದು ಹೇಳಲಾಗಿದೆ. ವಿಮಾನದಲ್ಲಿ ಸುರಕ್ಷಿತತೆಯನ್ನು ಕಾಪಾಡುವುದಕ್ಕಾಗಿ ಮತ್ತು ನಕಲಿ ಝಮ್ ಝಮ್ ಮಾರಾಟವನ್ನು ತಡೆಯುವುದಕ್ಕಾಗಿ ಈ ಏರ್ಪಾಡು ಮಾಡಲಾಗಿದೆ ಎಂದು ತಿಳಿಸಲಾಗಿದೆ.

ಝಮ್ ಝಮ್ ನೀರನ್ನು ಮುಸ್ಲಿಮರು ಬಹಳ ವೇ ಗೌರವಿಸ್ತಾರೆ. ಮಕ್ಕಾದ ಮಸ್ಜಿದುಲ್ ಹರಾಮ್ ಪಕ್ಕವೇ ಇರುವ ಬಾವಿಯಿಂದ ಈ ನೀರನ್ನು ಕೊಡಲಾಗುತ್ತಿದೆ ಐತಿಹಾಸಿಕವಾಗಿ ಈ ನೀರಿಗೆ ಭಾರಿ ಮಹತ್ವ ಇದೆ.