ದ್ವಿತೀಯ ಪಿಯುಸಿ ಪರೀಕ್ಷೆ: ಮೂಡಬಿದ್ರೆ ಅಲ್ ಫುರ್ಖಾನ್ ಇಸ್ಲಾಮಿಕ್ ಪಿಯು ಕಾಲೇಜಿಗೆ ಉತ್ತಮ ಫಲಿತಾಂಶ

0
586

ಸನ್ಮಾರ್ಗ ವಾರ್ತೆ

ಮೂಡಬಿದ್ರೆ: ಅಲ್ ಫುರ್ಖಾನ್ ಇಸ್ಲಾಮಿಕ್ ಪದವಿಪೂರ್ವ  ಕಾಲೇಜು ಈ ಬಾರಿಯ ದ್ವಿತೀಯ ಪಿಯುಸಿ  ಪರೀಕ್ಷೆಯಲ್ಲಿ ಅತ್ಯುತ್ತಮ ಫಲಿತಾಂಶವನ್ನು ದಾಖಲಿಸಿದೆ.

ವಾಣಿಜ್ಯ ವಿಭಾಗದ ಮಹಿನ್ ಫಾತಿಮ 600 ಕ್ಕೆ 590 ಶೇಕಡ  (98.33%) ಅಂಕಗಳಿಸಿ ರಾಜ್ಯದಲ್ಲಿ ಹತ್ತನೇ ರ್‍ಯಾಂಕ್ ಹಾಗೂ ಕಾಲೇಜಿಗೆ ಮೊದಲ ಸ್ಥಾನ ಪಡೆದುಕೊಂಡಿದ್ದಾರೆ.

ವಿಜ್ಞಾನ ವಿಭಾಗದ ಮುಹಮ್ಮದ್ ಹಿಶಾಮ್ ಎ 600 ಕ್ಕೆ 569 ಶೇಕಡ (94.83% )ಅಂಕಗಳಿಸಿ ಕಾಲೇಜಿಗೆ ಮೊದಲ ಸ್ಥಾನ ಪಡೆದುಕೊಂಡಿದ್ದಾರೆ.

ಕಾಲೇಜಿನ ಒಟ್ಟು  27 ವಿದ್ಯಾರ್ಥಿಗಳು ಶ್ರೇಷ್ಠ ದರ್ಜೆಯಲ್ಲಿ ಉತ್ತೀರ್ಣರಾದರೆ, 71  ವಿದ್ಯಾರ್ಥಿಗಳು ಪ್ರಥಮ ದರ್ಜೆಯಲ್ಲಿ ಉತ್ತೀರ್ಣರಾಗಿದ್ದಾರೆ.

ಎಲ್ಲಾ ವಿದ್ಯಾರ್ಥಿಗಳಿಗೆ ಸಂಸ್ಥೆಯ ಅಧ್ಯಕ್ಷರಾದ ಮಹಮ್ಮದ್ ಸಮೀರ್, ನಿರ್ದೇಶಕರಾದ ಮುಮ್ತಾಜ್, ಖಜಾಂಜಿ ಅಶ್ಫಾಕ್, ಅಡಳಿತಾಧಿಕಾರಿ ಶಹಾಮ್, ಪ್ರಾಂಶುಪಾಲರು , ಉಪ ಪ್ರಾಂಶುಪಾಲರು ಮತ್ತು ಅಧ್ಯಾಪಕ ವೃಂದ  ವಿದ್ಯಾರ್ಥಿಗಳಿಗೆ ಅಭಿನಂದಸಿ  ಶುಭಕೋರಿದ್ದಾರೆ.