ವಕ್ಫ್ ಕಾಯ್ದೆ ವಿರುದ್ಧ ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ ಎಸ್‌ಡಿಪಿಐ, ಮುಸ್ಲಿಂ ಲೀಗ್

0
317

ಸನ್ಮಾರ್ಗ ವಾರ್ತೆ

ವಕ್ಫ್ ತಿದ್ದುಪಡಿ ಕಾಯ್ದೆಯ ವಿರುದ್ಧ ಮುಸ್ಲಿಂ ಲೀಗ್ ಮತ್ತು ಎಸ್ ಡಿ ಪಿ ಐಗಳು ಸುಪ್ರೀಂ ಕೋರ್ಟ್‌ನಲ್ಲಿ ಪ್ರತ್ಯ ಪ್ರತ್ಯೇಕ ಅರ್ಜಿಯನ್ನ ಸಲ್ಲಿಸಿವೆ. ಈಗಾಗಲೇ ಎ ಪಿ ಸಿ ಆರ್, ಸಮಸ್ತ ಜಮೀಯ ತುಲ್ ಉಲಮ, ಮುಸ್ಲಿಂ ಪರ್ಸನಲ್ ಲಾ ಬೋರ್ಡ್ ಸಹಿತ ವಿವಿಧ ಸಂಘಟನೆಗಳು ಮತ್ತು ವ್ಯಕ್ತಿಗಳು ಈ ಕಾಯ್ದೆಯ ವಿರುದ್ಧ ಸುಪ್ರೀಂ ಕೋರ್ಟ್‌ನ ಮೆಟ್ಟಿಲೇರಿದ್ದಾರೆ.

ಈ ಕಾಯ್ದೆಯು ಮುಸ್ಲಿಮರ ಹಕ್ಕುಗಳನ್ನು ಕಿತ್ತುಕೊಂಡಿದೆ, ಧಾರ್ಮಿಕ ಕಾರ್ಯಕ್ರಮಗಳಿಗಾಗಿ ಅಲ್ಲಾಹನ ಹೆಸರಲ್ಲಿ ದಾನ ಮಾಡಿರುವ ಭೂಮಿಯ ರಕ್ಷಣೆ ನಿರ್ವಹಣೆ ಮತ್ತು ಒದಗಣೆಗೆ ಈ ಕಾಯ್ದೆಯಿಂದ ಭಾರಿ ಹಾನಿಯಾಗಿದೆ ಎಂದು ಮುಸ್ಲಿಂ ಲೀಗ್ ಹೇಳಿದೆ. ಈ ಕಾಯ್ದೆಯು ಸಂವಿಧಾನದ 14 15 25 ಮತ್ತು 26ನೇ ಪರಿಚ್ಛೇದವನ್ನು ಉಲ್ಲಂಘಿಸುತ್ತದೆ ಎಂದು ಕೂಡ ಮುಸ್ಲಿಂ ಲೀಗ್ ತನ್ನ ಅರ್ಜಿಯಲ್ಲಿ ಹೇಳಿದೆ.

ಇದೇ ವೇಳೆ ಎಸ್ ಡಿ ಪಿ ಐ ರಾಷ್ಟ್ರೀಯ ಅಧ್ಯಕ್ಷ ಮೊಹಮ್ಮದ್ ಶಾಫಿಯವರು ಕೂಡ ಈ ಕಾಯ್ದೆಯನ್ನು ಟೀಕಿಸಿದ್ದು ಸಂವಿಧಾನದ 14 15 25 ಮತ್ತು 26ನೇ ಪರಿಚ್ಚೇದವನ್ನು ಈ ಕಾಯ್ದೆ ಉಲ್ಲಂಘಿಸುತ್ತದೆ. ಸುಪ್ರೀಂ ಕೋರ್ಟು ನಮಗೆ ನ್ಯಾಯ ನೀಡುತ್ತದೆ ಎಂಬ ವಿಶ್ವಾಸ ಇದೆ ಎಂದವರು ಹೇಳಿದ್ದಾರೆ.