ಸನ್ಮಾರ್ಗ ವಾರ್ತೆ
ಇಸ್ರೇಲ್ನ ಜೆರುಸಲೇಮ್ ನಲ್ಲಿ ಭಾರಿ ಬೆಂಕಿ ಅನಾಹುತ ಸಂಭವಿಸಿದೆ. ಏಪ್ರಿಲ್ 30ರಂದು ಈ ಬೆಂಕಿ ಅನಾಹುತ ಸಂಭವಿಸಿದ್ದು ಐದು ಸ್ಥಳಗಳಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಆದರೆ ತೀವ್ರ ಬಿಸಿಲಿನಿಂದಾಗಿ ಬೆಂಕಿ ವ್ಯಾಪಕವಾಗಿ ಹರಿದಾಡಿದೆ ಎಂದು ವರದಿಯಾಗಿದೆ.
ರಷ್ಟು ಫೈಯರ್ ಎಂಜಿನ್ಗಳು ಸ್ಥಳಕ್ಕೆ ಧಾವಿಸಿ ಬೆಂಕಿ ನಂದಿಸುವ ಶ್ರಮದಲ್ಲಿದೆ. ಹಾಗೆಯೇ 12 ಏರ್ ಕ್ರಾಫ್ಟ್ಗಳು ಕೂಡ ಬೆಂಕಿ ನಂದಿಸುವ ಕೆಲಸದಲ್ಲಿ ನಿರತವಾಗಿದೆ. ಎರಡನೇ ದಿನವೂ ಬೆಂಕಿಯನ್ನು ಸಂಪೂರ್ಣ ನಂದಿಸುವ ಸಾಧ್ಯವಾಗಿಲ್ಲ ಮತ್ತು ಹಲವು ರಾಷ್ಟ್ರೀಯ ಹೆದ್ದಾರಿಗಳನ್ನು ಮುಚ್ಚಲಾಗಿದೆ.
ಈ ನಡುವೆ ಬೆಂಕಿ ಅನಾಹುತಕ್ಕೆ ಸಂಬಂಧಿಸಿದಂತೆ 18 ಮಂದಿಯನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ ಎಂದು ಪ್ರಧಾನ ಮಂತ್ರಿ ನೆತನ್ಯಾಹು ಹೇಳಿದ್ದಾರೆ. ಏಪ್ರಿಲ್ 30 ರಂದು ಜೆರುಸಲೇಮ್ ಮತ್ತು ಟೆಲ್ ಅವಿವ್ ಪ್ರಧಾನ ರಸ್ತೆಯಲ್ಲಿ ಬೆಂಕಿ ಕಾಣಿಸಿಕೊಂಡಿತ್ತು. ಹಾಗೆಯೇ ಸಾವಿರಾರು ಮಂದಿಯನ್ನು ಸ್ಥಳಾಂತರಗೊಳಿಸಲಾಗಿದೆ. 23 ಮಂದಿ ಗಾಯಗೊಂಡಿದ್ದಾರೆ ಎಂದು ಕೂಡ ವರದಿಯಾಗಿದೆ.












