ತಿರುವನಂತಪುರಂ ಜೂ.11: ಕೇರಳಾದ್ಯಂತ ಭಾರೀ ಮಳೆ ಸುರಿಯುತ್ತಿದ್ದು ಒಂಬತ್ತು ಜಿಲ್ಲೆಗಳಲ್ಲಿ ಯೆಲ್ಲೊ ಅಲರ್ಟ್ ಘೋಷಿಸಲಾಗಿದೆ. ಮೀನುಗಾರರು ಸಮುದ್ರಕ್ಕೆ ಹೋಗಬಾರದೆಂದು ಹವಾಮಾನ ನಿರೀಕ್ಷಣಾ ಕೇಂದ್ರ ಮುನ್ನೆಚ್ಚರಿಕೆಯನ್ನೂ ನೀಡಿದೆ. ಐದು ದಿವಸ ಕೇರಳದಲ್ಲಿ ಭಾರೀ ಗಾಳಿ ಮಳೆ ಸುರಿಯುವ ಸಾಧ್ಯತೆಯಿದೆ.ತಿರುವನಂತಪುರಂ, ಕೊಲ್ಲಂ,ಆಲಪ್ಪುಝ,ಎರ್ನಾಕುಳಂ,ಇಡುಕ್ಕಿ,ಮಲಪ್ಪುರಂ,ಕೋಝಿಕ್ಕೋಡ್, ವಯನಾಡ್ ,ಕಣ್ಣೂರ್ ಜಿಲ್ಲೆಗಳಲ್ಲಿ ಯೆಲ್ಲೊ ಅಲರ್ಟ್ ಘೋಷಿಸಲಾಗಿದ್ದು ಮಲಪ್ಪುರಂ, ಕೋಝಿಕ್ಕೋಡ್, ಕಣ್ಣೂರ್ ಜಿಲ್ಲೆಗಳಲ್ಲಿ ಆರೆಂಜ್ ಅಲರ್ಟ್ ಘೋಷಿಸಲಾಗಿದೆ.
ಲಕ್ಷದ್ವೀಪ ಸಮೀಪ ಸಮುದ್ರದಲ್ಲಿ ರೂಪುಗೊಂಡಿರುವ ನಿಮ್ನ ಒತ್ತಡವು ಹನ್ನೆರಡು ಗಂಟೆಗಳೊಳಗೆ ಬಿರುಗಾಳಿಯ ರೂಪ ಪಡೆಯಬಹುದೆಂದು ಹವಾಮಾನ ಕೇಂದ್ರ ಮುನ್ನೆಚ್ಚರಿಕೆಯಲ್ಲಿ ತಿಳಿಸಿದೆ. ಮಂಗಳವಾರ ಕರ್ನಾಟಕ, ಕೇರಳದ ಕರಾವಳಿ ಪ್ರದೇಶಗಳಲ್ಲಿ ಹಾಗೂ ಲಕ್ಷದ್ವೀಪಗಳಲ್ಲಿ ಗಂಟೆಗೆ 140 ಕಿಲೊಮೀಟರ್ ವೇಗದಲ್ಲಿ ಗಾಳಿ ಬೀಸಬಹುದು. ಗುಜರಾತ್, ಕಚ್ ಕರಾವಳಿಯಲ್ಲಿವರೆಗೂ ಇದು ಸಾಗಲಿದೆ.












