ನಿಯಾಝುರ್ರಹ್ಮಾನ್ ಪೆರ್ಲ
ಇಸ್ಲಾಮೀ ನವೋತ್ಥಾನ / ಸುಧಾರಣಾ ರಂಗಗಳಲ್ಲಿ ಹಲವು ಹಂತಗಳಲ್ಲಿ ವಿವಿಧ ಕಾರ್ಯ ಚಟುವಟಿಕೆಗಳು ನಡೆದಿವೆ. ಹಲವು ರೀತಿಯ ಚಿಂತನೆಗಳು, ಧೋರಣೆಗಳು, ಸಿದ್ಧಾಂತ ಗಳು ಆ ಮೂಲಕ ಹಂಚಲ್ಪಟ್ಟಿವೆ. ಪ್ರಾಯೋಗಿಕ ಕ್ಷೇತ್ರಗಳಲ್ಲಿ ಹಲವಾರು ಪ್ರಯೋಗಗಳು ನಡೆಸಲ್ಪ ಟ್ಟಿವೆ. ನವೋತ್ಥಾನದ ವಿವಿಧೋನ್ಮುಖ ಯೋಜನೆಗಳು ಇಸ್ಲಾಮೀ ಸಾಮಾಜಿಕ ಚರಿತ್ರೆಯಲ್ಲಿ ಧಾರಾಳ ಕೊಡುಗೆಗಳನ್ನು ನೀಡಿವೆ. ಆದರೂ ಮುಂದಕ್ಕಿರುವ ಪ್ರಯಾಣದಲ್ಲಿ ಇನ್ನೂ ಹೆಚ್ಚಿನ ಚಿಂತನೆಗಳು, ಆವಿಷ್ಕಾರಗಳು ಮತ್ತು ಮಾಧ್ಯಮಗಳ ಆವಶ್ಯಕತೆಯಿದೆ. ಪ್ರಸಕ್ತ ಕಾಲದಲ್ಲಿ ನಾವು ಅನುಭವಿಸುತ್ತಿರುವ ಸಮಸ್ಯೆಗಳಿಂದ ಹೊರಬರಲು ಇದು ಆವಶ್ಯಕವಾಗಿದೆ. ಇಸ್ಲಾಮೀ ಸಮೂಹದ ಮೂಲಭೂತ ಗುರಿಯನ್ನು ಹೊಂದಲು ಈ ವರೆಗಿನ ಕಾರ್ಯ ಚಟುವಟಿಕೆಗಳಿಂದ ಮಾತ್ರವೇ ಸಾಧ್ಯವಿಲ್ಲ. ನಾಗರಿಕ ವಲಯದಲ್ಲಿ ಐಕ್ಯತೆಯೆಂಬ ಗುರಿಯನ್ನು ಮುಟ್ಟಲು ಇಸ್ಲಾಮೀ ಸಮಾಜಕ್ಕೆ ಸಾಧ್ಯವಾಗುತ್ತಿಲ್ಲ. ನವೋತ್ಥಾನದ ಹಾದಿಯಲ್ಲಿ ಮುನ್ನಡೆಯಲು ಸಾಧ್ಯವಾಗುತ್ತಿಲ್ಲ. ನವೋತ್ಥಾನದ ಇಸ್ಲಾಮೀ/ಇಸ್ಲಾಮೇತರವೂ ಆದ ಹಾದಿಯಲ್ಲಿ ಉನ್ನತ ಮಟ್ಟಕ್ಕೇರಲು ನಮಗಿನ್ನೂ ಸಾಧ್ಯವಿಲ್ಲ.
ಸತ್ಯದ ಸಂಸ್ಥಾಪನೆ, ನ್ಯಾಯದ ಜಾರಿ, ಮಾನವನ ಘನತೆಯನ್ನು ಎತ್ತಿ ಹಿಡಿಯುವ, ಭೂಮಿಯಲ್ಲಿ ಅಲ್ಲಾಹನ ಪ್ರಾತಿನಿಧ್ಯವನ್ನು ವಹಿ ಸುವ, ನಾಗರಿಕ ನಿರ್ಮಿತಿಯಲ್ಲಿ ಭಾಗೀದಾರಿಕತೆ ಯಂತಹ ಮೌಲ್ಯಗಳನ್ನೆಲ್ಲ ಹೊಂದಲು ಇಂದೂ ನಮಗೆ ಸಾಧ್ಯವಾಗುತ್ತಿಲ್ಲ. ಲೋಕ ಜನತೆಯನ್ನು ಕತ್ತಲೆಡೆಯಿಂದ ಬೆಳಕಿನೆಡೆಗೆ, ಇತರ ದರ್ಶನಗಳ ಅತಿಕ್ರಮಣಗಳಿಂದ ಇಸ್ಲಾಮಿನ ನೀತಿಯೆಡೆಗೆ ಇಹಲೋಕದ ಸಂಕುಚಿತತೆಯಿಂದ ಇಹ-ಪರಲೋಕದ ವಿಶಾಲತೆಯೆಡೆಗೆ, ಮಾನವನ ದಾಸ್ಯತನದಿಂದ ಅಲ್ಲಾಹನ ದಾಸ್ಯತನದೆಡೆಗೆ ಮನುಷ್ಯನನ್ನು ಕರೆಯಬೇಕಾದ `ಆಧುನಿಕ ಮುಸ್ಲಿಮ್’ ಇಂದು ಹಲವು ರೀತಿಯ ಪರೀಕ್ಷೆಗಳ ಸಮಸ್ಯೆಗಳ ಸುಳಿಯಲ್ಲಿ ಸಿಲುಕಿದ್ದಾನೆ. ಅದರಾಚೆಗೆ ಚಿಂತನಾ ರಂಗದ ಸಮಸ್ಯೆಗಳು, ಕರ್ಮ ರಂಗದ ಬಲಹೀನತೆಗಳು, ಸ್ಪಷ್ಟ ಧೋರಣೆಗಳ ನ್ನು ಹೊಂದಲು ಇರುವ ಸಾಕ್ಷ್ಯಾಧಾರಗಳ ಅಭಾವ, ನಿಲುವುಗಳಲ್ಲಿನ ಚಂಚಲತೆಯೆಲ್ಲವೂ ಇನ್ನೂ ಹೆಚ್ಚಿನ ಸಮಸ್ಯೆಗಳನ್ನೂ ಗೊಂದಲಗಳನ್ನೂ ಸೃಷ್ಟಿಸುತ್ತಿವೆ.
ಈ ಸಮಸ್ಯೆಗಳನ್ನು ನಿಭಾಯಿಸಲು ಪರಿಹಾರ ಸೂತ್ರವನ್ನು ಕಂಡುಕೊಳ್ಳಲೇಬೇಕಾಗಿದೆ. ಆಧುನಿಕ ಮುಸ್ಲಿಮನ ಬುದ್ಧಿಗೆ ರೂಪು ಕೊಡಲು, ಧೋರಣೆ ಯನ್ನು ನಿರ್ಮಿಸಲು, ವ್ಯಕ್ತಿತ್ವವನ್ನು ಮರಳಿ ಪಡೆಯಲು ತನ್ನ ಪಾತ್ರವನ್ನು ನಿರ್ವಹಿಸಲು ಸಾಧ್ಯವಾಗುವ ರೀತಿಯಲ್ಲಿ ಆತನಿಗೆ ಬೌದ್ಧಿಕ ಪೆÇೀಷಣೆಯನ್ನು ನೀಡಬೇಕಾಗಿದೆ. ಪ್ರವಾದಿಯ ವಿಯೋಗಾನಂತರದಿಂದ ಮೊದಲ್ಗೊಂಡು ಈ ವರೆಗೆ ಹಾದು ಬಂದ ನವೋತ್ಥಾನ / ಸುಧಾ ರಣಾ ಚಟುವಟಿಕೆಗಳ ಬಗ್ಗೆ ಸಮಗ್ರ ಅಧ್ಯಯನ ಮತ್ತು ವಿಶ್ಲೇಷಣೆಗಳು ನಡೆಯಬೇಕಾಗಿದೆ. ನವೋ ತ್ಥಾನವನ್ನು ತ್ವರಿತಗೊಳಿಸಿದ, ಅದಕ್ಕೆ ಸಹಾಯವನ್ನು ಒದಗಿಸಿದ ಅಂಶಗಳ ಬಗ್ಗೆ ಅರ್ಥೈಸಬೇಕಾಗಿದೆ. ಅವುಗಳೆಲ್ಲದರ ವಿಧಾನ, ನಿರ್ವಹಣಾ ರೀತಿಗಳ ಬಗ್ಗೆ ಅಧ್ಯಯನ ನಡೆಸಬೇಕಾಗಿದೆ. ಗತಕಾಲದ ಅನುಭವಗಳಿಂದ ಭವಿಷ್ಯವನ್ನು ರೂಪಿಸಬೇಕಾ ಗಿದೆ. ಚರಿತ್ರೆಯ, ಪರಂಪರೆಯ ಮುಂದುವರಿಕೆಗಳಿಂದಲೇ ವರ್ತಮಾನದ- ಭವಿಷ್ಯದ ಸಾಧ್ಯತೆ ಗಳ ಭಾವನೆಗಳನ್ನು ಪರಿಕಲ್ಪಿಸಲು ಸಾಧ್ಯ. ತನ್ನ ಮತ್ತು ಗತಕಾಲದ ಮಧ್ಯೆ ರಚನಾತ್ಮಕ ಸಂಬಂಧವನ್ನು ಸ್ಥಾಪಿಸಲು ಅದು ಅವಶ್ಯಕವೂ ಆಗಿದೆ.
ನವೋತ್ಥಾನವು ಎಲ್ಲಾ ಪ್ರವಾದಿಗಳ ಮೂಲ ಭೂತವೂ ಪ್ರಾಥಮಿಕವೂ ಆದ ಗುರಿಯಾಗಿತ್ತು. ಆಯಾ ಕಾಲದಲ್ಲಿ ಜನತೆಯು ಕೆಡಿಸಿಬಿಟ್ಟ ಅಂಶಗಳನ್ನು ಸರಿಪಡಿಸುವ ಸಲುವಾಗಿಯೇ ಪ್ರವಾದಿಗಳು ಆಗಮಿಸಿರುವುದು. ಜನತೆಯು ದುರ್ಮಾರ್ಗಿಗಳಾಗುವುದಕ್ಕೆ ಹಲವು ಕಾರಣಗಳಿವೆ. ದೀರ್ಘಕಾಲದ ಪ್ರವಾದಿಗಳ ಅಭಾವ, ಹೃದಯ ಕಾಠಿಣ್ಯ, ಆಶಯಗಳ ಏರುಪೇರು, ಚಿಂತನಾ ವೈಪರೀತ್ಯದಿಂದ ಉಂಟಾಗಬಹುದಾದ ವಿಶ್ವಾಸ ಚ್ಯುತಿ ಎಂಬವುಗಳೇ ಅವುಗಳಲ್ಲಿ ಮುಖ್ಯ. ಈ ಹಂತಗಳಲ್ಲಿ ಸುಧಾರಕರ ಆವಶ್ಯಕತೆಯು ಬಂದು ಮುಟ್ಟುತ್ತದೆ. ಅವರು ಆಶಯ ಧೋರಣೆಗಳಿಗೆ ಸ್ಪಷ್ಟತೆಯ ರೂಪವನ್ನು ನೀಡುತ್ತಾರೆ. ಚಿಂತನಾ ದೌರ್ಬಲ್ಯಗಳನ್ನು ಹೋಗಲಾಡಿಸುತ್ತಾರೆ. ವಿಶ್ವಾಸ ವನ್ನು ಶುದ್ಧೀಕರಿಸುತ್ತಾರೆ. ಮಿಥ್ಯೆ ಕಲ್ಪನೆಗಳನ್ನು ತೊಡೆದು ಹಾಕುವ ಮೂಲಕ ಅದನ್ನು ಸರಿಪಡಿಸುತ್ತಾರೆ. ಸನ್ಮಾರ್ಗವನ್ನು ಹೊಂದಲು ಜನತೆಗೆ ಸಹಾಯವನ್ನು ಒದಗಿಸುತ್ತಾರೆ. ನವೋತ್ಥಾನದ ಪ್ರಥಮ ಹೊಣೆಗಾರಿಕೆಯು ಪ್ರವಾದಿಗಳ ಮೇಲೆ ಅರ್ಪಿತವಾಗಿದ್ದರೂ ಅವರ ನಂತರ ಅದನ್ನು ನಿರ್ವಹಿಸಬೇಕಾದವರು ಮುಸ್ಲಿಮರೇ ಆಗಿದ್ದಾರೆ. ಪ್ರವಾದಿ ಪರಂಪರೆಯು ಕೊನೆಗೊಂಡಿರುವುದರಿಂದ ಇದು ಮುಸ್ಲಿಮರ ಸ್ಥಿರವಾದ ಹೊಣೆಗಾರಿಕೆಯಾಗಿ ಮಾರ್ಪಟು ಹೊಂದಿದೆ.
ಇತರ ಸಮೂಹಗಳಲ್ಲಿ ವಿಮೋಚನೆ ಮತ್ತು ಸುಧಾರಣೆ ಎಂಬುದು ಅಗೋಚರವಾದ ದೈವಿಕ ಕ್ರಮವೆಂದು ಅರ್ಥೈಸಲಾಗುತ್ತದೆ. ಅದು ದೇವನ ಹೊಣೆಗಾರಿಕೆ. ಮನುಷ್ಯ ವಿಧೇಯ ಮಾತ್ರ. ಸುಧಾರಣೆಯಲ್ಲಿ ಮನುಷ್ಯನಿಗೆ ನೇರ ಭಾಗೀಧಾರಿಕೆ ಯೇನೂ ಇಲ್ಲ. ಜನತೆಯು ಪಥಭ್ರಷ್ಟತೆಯನ್ನು ಹೊಂದುವಾಗ ಅದೃಶ್ಯನಾದ ವಿಮೋಚಕನು ರಂಗ ಪ್ರವೇಶಗೈಯುತ್ತಾನೆ. ಕ್ರೈಸ್ತರು ಏಸುಕ್ರಿಸ್ತರನ್ನು ಈ ರೀತಿಯೇ ವೀಕ್ಷಿಸುತ್ತಿರುವುದು. ಪರಲೋಕ ಪ್ರಧಾನವಾದ ವಿಷಯಗಳಲ್ಲಿ ಮಾತ್ರವೇ ಅವರ ವಿಮೋಚನಾ ರಂಗವೆಂದು ನಂಬಲಾಗುತ್ತದೆ. ಈ ಚಿಂತನೆಯು ಯಾವುದೋ ಒಂದು ರೀತಿಯಲ್ಲಿ ಮುಸ್ಲಿಮರೆಡೆಯಲ್ಲಿಯೂ ಚಾಲ್ತಿಯಲ್ಲಿದೆ. ಅಲ್ಲಾಹನು ಯಾವುದೋ ಒಂದು ರೀತಿಯಲ್ಲಿ ನಮಗೆ ಸಂಬಂಧಿಸಿದ ಎಲ್ಲಾ ವಿಷಯಗಳಲ್ಲಿ ಓರ್ವ ವಿಮೋಚಕನಿಗೆ ಹೊಣೆ ವಹಿಸಿ ಕೊಟ್ಟಿ ದ್ದಾನೆ ಎಂಬ ಮಟ್ಟಿನಲ್ಲಿದೆ ಸಾಮಾನ್ಯ ಮುಸ್ಲಿಮರ ಧೋರಣೆ. ಮೆಹ್ದಿಯ ಬಗ್ಗೆ ಇರುವ ಶುಭ ನಿರೀಕ್ಷೆ ಇದರಂಗವಾಗಿದೆ. ಈ ವರೆಗೆ ಸರಿ ಸುಮಾರು ಐವತ್ತು ಮಂದಿ ಮೆಹ್ದಿಯೆಂದು ವಾದಿಸಿಕೊಂಡು ರಂಗಪ್ರವೇಶಗೈದಿದ್ದಾರೆ. ವಾಸ್ತವ ದಲ್ಲಿ ಇಸ್ಲಾಮೀ ಧೋರಣೆಯ ಪ್ರಕಾರ ಇಸ್ಲಾಮೀ ನವೋತ್ಥಾನವೆಂಬುದು ಯಾವುದೇ ಓರ್ವ ವ್ಯಕ್ತಿ ಯನ್ನು ಮಾತ್ರವೇ ಅವಲಂಬಿಸಿಕೊಂಡು ಮುನ್ನಡೆಯುವ ಪ್ರಕ್ರಿಯೆಯಲ್ಲ.
ಇಸ್ಲಾಮೀ ಸಮಾಜದ ಎಲ್ಲಾ ಸದಸ್ಯರಿಗೂ ಅದರಲ್ಲಿ ಹೊಣೆಗಾರಿಕೆಯಿದೆ. “ನೀವೂ ನಿಮ್ಮ ಪ್ರಭುವೂ ಹೋಗಿ ಯುದ್ಧ ಮಾಡಿರಿ. ನಾವಿಲ್ಲಿ ಕುಳಿತಿರುತ್ತೇವೆ” (ಅಲ್ಮಾಇದ: 24) ಎಂಬ ನಿಲುವನ್ನು ಇಸ್ಲಾಮ್ ಅಂಗೀಕರಿಸುವುದಿಲ್ಲ. ನೀವೆಲ್ಲರೂ ನೀವು ಮನ್ನಡೆಸಬೇಕಾದವರ ಬಗ್ಗೆ ಖಂಡಿತವಾಗಿಯೂ ಉತ್ತರಿಸಬೇಕಾಗಿದೆ ಎಂಬ ಪ್ರವಾದಿ ನುಡಿಯು ಇಲ್ಲಿ ಸ್ಮರಣೀಯವಾಗಿದೆ. ವ್ಯಕ್ತಿ ಎಂಬ ನೆಲೆಯಲ್ಲಿ ಸಮಾಜದಲ್ಲಿ ವಹಿಸುವ ಸ್ಥಾನವು ಏನೇ ಇದ್ದರೂ ಸೂಚಿಸಿದ ವಿಷಯದಲ್ಲಿ ಉತ್ತರಿಸಲು ಬಾಧ್ಯಸ್ಥ ನಾಗಿರುತ್ತಾನೆ. ಹೊಣೆಗಾರಿಕೆ ಯಿಂದ ನುಣುಚಿಕೊಂಡರೆ ಇವರೂ ನಶಿಸಿದರು, ಅವರೂ ನಶಿಸಿದರು. ಎಲ್ಲರೂ ನಶಿಸಿದರು ಎಂದು ಪ್ರವಾದಿ(ಸ)ಯವರು ನುಡಿದ ರೀತಿ ಯಲ್ಲಿಯೇ ಸಂಭವಿಸಲ್ಪಡುತ್ತದೆ. ಎಲ್ಲರೂ ಆಡಳಿತ ಗಾರರೇ ಆಗಿದ್ದಾರೆ. ಆದುದರಿಂದಲೇ ತಾವು ಯಾರನ್ನು ಆಳುತ್ತೇವೆಯೋ ಅವರ ಬಗ್ಗೆ ಇರುವ ಪ್ರಶ್ನೆಗಳಿಗೆ ಉತ್ತರವನ್ನು ಕೊಡಬೇಕಾ ದೀತು. ಮತ್ತೊಂದು ರೀತಿಯಲ್ಲಿ ಹೇಳುವುದಾದರೆ ಪ್ರತಿಯೊಬ್ಬರೂ ಸುಧಾರಕರಾಗಬೇಕಾಗಿದೆ. ಅದರ ಜವಾಬ್ದಾರಿಯೂ ಇದೆ. ಸ್ವಯಂ ಸುಧಾರಣೆಯ ಜವಾಬ್ದಾರಿಯನ್ನು ಒಟ್ಟು ಸಮುದಾಯವು ವಹಿಸಬೇಕಾಗಿದೆ.
ಯಾವುದೇ ಒಂದು ಸಮಾಜದ ಉನ್ನತ ಭಾಗೀದಾರಿಕೆಯ ಪ್ರಜ್ಞೆಯು ಆ ಸಮಾಜದ ಪ್ರತಿಯೋರ್ವ ಸದಸ್ಯನಲ್ಲಿ ಸಮಾನ ಮಟ್ಟದಲ್ಲಿ ಜವಾಬ್ದಾರಿಕೆಯ ಪ್ರಜ್ಞೆಯನ್ನು ಮೂಡಿಸುತ್ತದೆ. ನವೋತ್ಥಾನ ಮತ್ತು ಸುಧಾರಣೆಗೆ ತನ್ನ ಸದಸ್ಯನನ್ನು ಪ್ರಾಪ್ತಿಗೊಳಿಸುತ್ತದೆ. ಪುನರ್ ನಿರ್ಮಾಣದ ಸಾಮಗ್ರಿಗಳನ್ನು ಹೊಂದಲು ಪ್ರೇರೇಪಿಸುತ್ತದೆ. ವಿನಾಶಕಾರೀ ಪ್ರವೃತ್ತಿಗಳಿಂದ ದೂರ ಉಳಿಯಲು ಕಾರಣವಾಗುತ್ತದೆ. ಅನಾಚಾರದ ಬೀಜಗಳು ನೆಲೆ ನಿಲ್ಲುವವರೆಗೆ ವ್ಯಕ್ತಿ ಎಂಬ ನೆಲೆಯಲ್ಲಿ ತನಗೂ ರಕ್ಷಣೆಯ ನ್ನು ಹೊಂದಲು ರಹದಾರಿಯಿಲ್ಲ ವೆಂಬ ಪ್ರಜ್ಞೆಯನ್ನು ಗಟ್ಟಿಗೊಳಿಸುತ್ತದೆ. ಈ ಎಲ್ಲಾ ವಿಧದಲ್ಲಿ ನವೋತ್ಥಾನವನ್ನು ವೈಯಕ್ತಿಕ ಜವಾಬ್ದಾರಿಯಾಗಿ ಬದಲಾಯಿಸುತ್ತದೆ. ತನ್ನ ಎಲ್ಲಾ ಸದಸ್ಯರನ್ನು ಕರ್ಮೋತ್ಸುಕರಾಗಿಸುವ ರೀತಿಯಲ್ಲಿ ನವೋತ್ಥಾನ ಆಂದೋಲನಗಳು ಸಮರ್ಪಕ ಯೋಜನೆಯನ್ನು ರೂಪಿಸಬೇಕಾಗಿದೆ.
ಇತಿಹಾಸದ ಸಂದಿಗ್ಧ ಹಂತದಲ್ಲಿ ಇಸ್ಲಾಮೀ ಸಮಾಜವನ್ನು ರಕ್ಷಿಸಲು ಧೀರರಾದ ನವೋತ್ಥಾನ ನಾಯಕರು ಹುಟ್ಟಿಬರಬಹುದು. ವ್ಯಕ್ತಿಗಳು ಪ್ರತ್ಯೇಕವಾಗಿ ಏನನ್ನೂ ಮಾಡಬೇಕಾಗಿಲ್ಲ ಎಂಬ ಎಣಿಕೆಯು ಮಿಥ್ಯೆ ಕಲ್ಪನೆಯಾಗಿದೆ. ಇತರ ಸಮಾಜಗಳಲ್ಲಿ ಅಂತಹ ಕಲ್ಪನೆಯು ಇರಬಹುದು. ಆದರೆ ಇಸ್ಲಾಮೀ ಸಮಾಜದಲ್ಲಿ ಅಂತಹ ಕಲ್ಪನೆ ಗಳಿಗೆ ಅವಕಾಶವಿಲ್ಲ. ರಕ್ಷಿಸಲು ಹುಟ್ಟಿ ಬರುವ ವೀರ ನಾಯಕರನ್ನು ನಿರೀಕ್ಷಿಸದೇ ಸಮಾಜದ ಪ್ರತಿಯೋರ್ವ ಸದಸ್ಯನೂ ಸ್ವಯಂ ಸಾಮಾಜಿಕ ವಾಗಿ ಎದ್ದೇಳಬೇಕಾಗಿದೆ. ಏನೆಲ್ಲಾ ಸಮಸ್ಯೆಗಳು, ಸಂಕಷ್ಟಗಳು, ಗೊಂದಲಗಳು ಮುಸ್ಲಿಮ್ ಸಮಾಜದಲ್ಲಿ ಮನೆ ಮಾಡಿವೆ? ಸಮಾಜದ ಪ್ರತಿ ಯೋರ್ವ ಸದಸ್ಯನೂ ತಾನು ಕೈಯಾಡಿಸಬೇಕಾದ ಕ್ಷೇತ್ರವನ್ನು ಗುರುತಿಸಿಕೊಂಡು ಅಲ್ಲಿ ಸ್ವಯಂ ಇಚ್ಛೆಯಿಂದ ಭಾಗೀಧಾರರಾಗುವ ಆಂದೋಲನ ಸಂಸ್ಕøತಿಯು ಹುಟ್ಟಿ ಬರಬೇಕಾಗಿದೆ. ಅಲ್ಲದಿದ್ದರೆ ಸುಧಾರಕರು ಹುಟ್ಟಿಬರುವ ಕನಸನ್ನು ಹೊತ್ತು ಕೊಂಡ ಮಂಪರಿನಲ್ಲಿಯೇ ಸಮುದಾಯವು ದಿನದೂಡಬೇಕಾದೀತು.
ಸ್ವಲಾಹುದ್ದೀನ್ ಅಯ್ಯೂಬಿಯವರು ಇಸ್ಲಾಮೀ ಚರಿತ್ರೆಯ ಸಾಟಿಯಿಲ್ಲದ ವ್ಯಕ್ತಿತ್ವವಾಗಿದ್ದಾರೆ. ಶೀತಲ ಸೇನೆಯಿಂದ ಬೈತುಲ್ ಮುಕ್ದಿಸ್ ಅನ್ನು ವಿಮೋಚನೆಗೊಳಿಸಿರುವುದು ಅವರೇ ಆಗಿದ್ದಾರೆ. ಬರೇ ಸೈನಿಕವಾಗಿ ಮಾತ್ರವಲ್ಲ ಚಿಂತನೆಯಲ್ಲೂ ಧಾರ್ಮಿಕವಾಗಿಯೂ ಅವರು ನವೋತ್ಥಾನದ ದೌತ್ಯವನ್ನು ನಿರ್ವಹಿಸಿದರು. ಇಸ್ಲಾಮೀ ಮೌಲ್ಯ ಗಳು ಅವರ ಎಲ್ಲಾ ನಡೆಯಲ್ಲೂ ಪ್ರತಿಫಲಿಸಿತು. ಸೆರೆಹಿಡಿಯಲ್ಪಟ್ಟವರ ಜತೆಗಿನ ನಡೆ, ಮರಣ ದಂಡನೆಯಲ್ಲಿನ ವಿನಾಯಿತಿ, ಅವರ ಹಕ್ಕುಗಳನ್ನು ಮರಳಿ ನೀಡಿರುವ ರೀತಿ ಮುಂತಾದ ನಡೆಗಳು ಅದಕ್ಕಿರುವ ಉದಾಹರಣೆಗಳಾಗಿವೆ. ಆದರೆ ಎರಡು ಶತಮಾನಗಳ ತನಕ ನೆಲೆನಿಂತ ಶೀತಲ ಯುದ್ಧ ವನ್ನು ಅವರ ಕೇವಲ ವೀರ ಪೌರುಷವಾಗಿಯೋ ಅತೀಂದ್ರೀಯ ಘಟನೆಗಳಾಗಿಯೋ ಕಾಣಬಾರದು. ಬದಲಾಗಿ ದೀರ್ಘಕಾಲೀನವಾಗಿ ಮುಂದುವರಿದ ನವೋತ್ಥಾನದ ಸ್ವಾಭಾವಿಕವೂ ಅಂತಿಮವೂ ಆದ ಫಲಿತಾಂಶವಾಗಿ ಅದನ್ನು ಕಾಣಬೇಕಾಗಿದೆ. ಒಂದು ಶತಮಾನದ ತನಕ ನಿರಂತವಾಗಿ ಮುಂದುವರಿದ ತ್ಯಾಗ ಪರಂಪರೆಗಳು ಕುದ್ಸ್ನ ವಿಮೋಚ ನೆಯಲ್ಲಿ ಪರ್ಯಾವಸಾನಗೊಂಡಿರುವುದು ಇಸ್ಲಾಮೀ ಸಮಾಜವು ಸಂಪೂರ್ಣವಾಗಿ ಅದರಲ್ಲಿ ತನ್ನ ಭಾಗೀಧಾರೀಕೆಯನ್ನು ಅರ್ಪಿಸಿತು. ಇದು ಸ್ವಲಾಹುದ್ದೀನ್ ಅಯ್ಯೂಬಿಯವರು ಸಮಾಜದ ಎಲ್ಲಾ ನವೋತ್ಥಾನ ಯತ್ನಗಳನ್ನು ಒಟ್ಟುಗೂಡಿಸಿ ಕೊಂಡು ಫಲವನ್ನು ಕೊಯ್ದದ್ದಾಗಿದೆ. ಈ ಸಲು ವಾಗಿ ಎಲ್ಲಾ ನವೋತ್ಥಾನ ಕಾರ್ಯ ಚಟುವಟಿಕೆ ಗಳನ್ನು ಅವರು ಬಳಸಿದರು. ಕುದ್ಸ್ನ ವಿಮೋ ಚನೆಯ ಪೂರ್ವಭಾವಿಯಾಗಿ ಶೈಕ್ಷಣಿಕವೂ, ರಾಜಕೀಯವೂ, ಆಡಳಿತಾತ್ಮಕವೂ ಆದ ರಂಗಗಳಲ್ಲಿ ಹಲವು ರೀತಿಯ ತಿದ್ದುಪಡಿಗಳನ್ನು ತರಲಾಗುತ್ತದೆ.
ಉದಾಹರಣೆಗೆ ನೂರುದ್ದೀನ್ ಸಂಕಿ (ಹಿಜರೀ 511-569/1118-11174) ಮತ್ತು ಹಿಂಗಾಮಿಗಳು ನಡೆಸಿದ ಚಟುವಟಿಕೆಗಳು ಅಯ್ಯೂಬಿಯವರಿಗೆ ಸಹಾಯಕ ಚಟುವಟಿಕೆಗಳಾಗಿ ಪರಿಣಮಿಸಿತು. ರಾಜಕೀಯ, ಆರ್ಥಿಕ, ಸಾಮಾಜಿಕ, ಆಡಳಿತಾತ್ಮಕ. ಚಿಂತನಾ, ಬೌದ್ಧಿಕ, ಶೈಕ್ಷಣಿಕ ರಂಗಗಳ ವಿವಿಧ ರೀತಿಯ, ವಿವಿಧ ಹಂತದ ಸುಧಾರಣೆಗಳು ನವೋತ್ಥಾನವನ್ನು ತ್ವರಿತ ಗೊಳಿಸಿದೆ. ಸಮಾಜದ ಒಟ್ಟು ಸಾಮಥ್ರ್ಯವನ್ನು ಇದಕ್ಕಾಗಿ ಬಳಸಲಾಗಿದೆ. ಈ ಎಲ್ಲಾ ಕಾರಣಗಳಿಂದಲೇ ಇಸ್ಲಾಮೀ ಸಮಾಜವು ಅಸ್ತಿತ್ವನ್ನು, ಗತ ವೈಭವವನ್ನು ಮರಳಿ ಪಡೆದಿರುವುದು. ನೇತೃತ್ವ ಗುಣವನ್ನು ಹೊಂದಿರುವ ವ್ಯಕ್ತಿಗಳು ಇಸ್ಲಾಮೀ ಸಮಾಜದಲ್ಲಿ ಈ ಮೊದಲೇ ತಯಾರಾದುದಲ್ಲ. ಅವರನ್ನು ತಯಾರುಗೊಳಿಸಿರುವುದಕ್ಕೆ ಇತಿಹಾಸವೇ ಸಾಕ್ಷಿ.
ಆಧ್ಯಾತ್ಮ, ವೈಯಕ್ತಿಕ ರಕ್ಷಣಾ ಪ್ರಜ್ಞೆ ಎಂಬವುಗಳಿಗೆ ಬದಲಾಗಿ ಸಾಮಾಜಿಕವೂ ರಚನಾತ್ಮಕವೂ, ನಿರ್ಮಾಣಾತ್ಮಕವೂ ಆದ ನೆಲೆಗಳಿಗೆ ಸಮಾಜವನ್ನು ಅಭಿವೃದ್ಧಿ ಪಡಿಸಲು ಸಾಧ್ಯ ಎಂದು ಸಾಬೀತು ಪಡಿಸಿರುವ ಕುದ್ಸ್ ವಿಮೋಚನೆಯು ಸಂಕ್ಷಿಪ್ತವಾಗಿ ಇಸ್ಲಾಮೀ ಸಮಾಜದ ಪ್ರತಿ ಯೋರ್ವ ಸದಸ್ಯನನ್ನು ಭಾಗೀದಾರಿಕೆಯ ಪ್ರಜ್ಞೆಯನ್ನು ಮೂಡಿಸಿ ಸಕ್ರಿಯಗೊಳಿಸುವಾಗಲೇ ಇಸ್ಲಾಮೀ ನವೋತ್ಥಾನ ಪ್ರಕ್ರಿಯೆಯು ಅರ್ಥ ಪೂರ್ಣವಾಗುವುದು ಎಂಬ ಸಂದೇಶವನ್ನು ನೀಡುತ್ತಿದೆ. ಒಟ್ಟಿನಲ್ಲಿ ಇಸ್ಲಾಮೀ ನವೋತ್ಥಾನವು ಧೀರ ನಾಯಕರನ್ನು ಧ್ಯಾನಿಸಿ, ಆಗಮನ ನಿರೀಕ್ಷೆ ಇಟ್ಟುಕೊಂಡ ಕೇವಲ ವ್ಯಕ್ತಿ ನಿಷ್ಠವಾದ ಪ್ರಕ್ರಿಯೆಯಲ್ಲ ಎಂಬುದನ್ನು ಮನಗಾಣ ಬೇಕಾಗಿದೆ.












