ಪತ್ರಕರ್ತರು, ರೈತರನ್ನು ಯೋಗಿ ಸರಕಾರ ಭಯೋತ್ಪಾದಕರನ್ನಾಗಿಸುತ್ತಿದೆ- ಪ್ರಿಯಾಂಕಾ ಗಾಂಧಿ

0
792

ಹೊಸದಿಲ್ಲಿ, ಜೂ. 12: ಪತ್ರಕರ್ತರು ಮತ್ತು ರೈತರನ್ನು ಉತ್ತರ ಪ್ರದೇಶ ಸರಕಾರ ಭಯೋತ್ಪಾದಕರನ್ನಾಗಿ ಚಿತ್ರಿಸುತ್ತಿದೆ ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ಹೇಳಿದರು. ಜನಸಾಮಾನ್ಯರಿಗೆ ಸಂಬಂಧಿಸಿ ಹಲವಾರು ವಿಷಯಗಳಿಗೆ ಪರಿಹಾರ ಮಾಡಿಕೊಡದೆ ಭಯೋತ್ಪಾದನೆಯ ದಂಡವನ್ನು ಬಳಸಿ ಪತ್ರಕರ್ತರನ್ನು ಮತ್ತು ರೈತರು ಮತ್ತು ರೈತರ ಪ್ರತಿನಿಧಿಗಳನ್ನು ಯೋಗಿ ಸರಕಾರ ನಿಭಾಯಿಸುತ್ತಿದೆ ಎಂದು ಪ್ರಿಯಾಂಕಾ ಟ್ವೀಟ್ ಮಾಡಿದರು. ಮುಖ್ಯಮಂತ್ರಿಯ ಅವಹೇಳನಕಾರಿ ವೀಡಿಯೊ ಶೇರ್ ಮಾಡಿದ್ದಾರೆ ಎಂದು ಯೋಗಿ ಸರಕಾರ ಬಂಧಿಸಿದ್ದ ಪತ್ರಕರ್ತ ಪ್ರಶಾಂತ್ ಕನೂಜಿಯನ್ನು ಸುಪ್ರೀಂಕೋರ್ಟು ಬಿಡುಗಡೆಗೊಳಿಸಲು ಆದೇಶಿಸಿದ್ದು ಕೋರ್ಟು ತೀರ್ಪಿನ ಕುರಿತು ಪ್ರಿಯಾಂಕಾ ಈ ರೀತಿ ಪ್ರತಿಕ್ರಿಯೆ ವ್ಯಕ್ತಪಡಿಸಿದರು.