ಸನ್ಮಾರ್ಗ ವಾರ್ತೆ
ಅರ್ಜೆಂಟೀನಾದ ಕ್ಲಬ್ ಫುಟ್ಬಾಲ್ ಪಂದ್ಯಾಟಕ್ಕಿಂತ ಮೊದಲು ಫೆಲೆಸ್ತೀನ್ ಪತಾಕೆಯನ್ನು ಹಾರಿಸುತ್ತಾ ಮತ್ತು ಶವ ಮಂಚಕ್ಕೆ ಇಸ್ರೇಲ್ ನ ಪತಾಕೆಯನ್ನು ಅಂಟಿಸಿ ಕೊಂಡೊಯ್ದ ಘಟನೆ ನಡೆದಿದೆ. ಯೆಹೂದಿಗಳಿಂದ ಬೆಂಬಲಿತವಾದ ಅಟ್ಯಾಂಡ್ ಕ್ಲಬ್ ತಂಡದ ವಿರುದ್ಧ ಅತ್ಲೇಟಿಕೋ ಆಲ್ ಬಾಯ್ಸ್ ಕ್ಲಬ್ ನ ಬೆಂಬಲಿಗರು ಈ ಪ್ರತಿಭಟನೆ ನಡೆಸಿದ್ದಾರೆ. ಜೊತೆಗೆ ಸ್ವತಂತ್ರ ಫೆಲೆಸ್ತೀನ್ ಎಂಬ ಶೀರ್ಷಿಕೆಯಲ್ಲಿ ಬರೆದ ಕರಪತ್ರವನ್ನೂ ಹಂಚಿದ್ದಾರೆ.
ಅರ್ಜೆಂಟೀನಾ ಫುಟ್ಬಾಲ್ ಲೀಗ್ ನ ಸೆಕೆಂಡ್ ಡಿವಿಷನ್ ಪಂದ್ಯಾಟದ ಸಂದರ್ಭದಲ್ಲಿ ಈ ಘಟನೆ ನಡೆದಿದೆ.
ಅಥ್ಲೆಟಿಕೋ ಆಲ್ ಬಾಯ್ಸ್ ಕ್ಲಬ್ಬಿನ ಬೆಂಬಲಿಗರು ಸ್ಟೇಡಿಯಂ ನ ಹೊರಗಡೆ ನಡೆಸಿದ ರ್ಯಾಲಿಯ ಸಂದರ್ಭದಲ್ಲಿ ಈ ರೀತಿ ಈ ರೀತಿ ವರ್ತಿಸಿದ್ದಾರೆ. ಇಸ್ರೇಲ್ ಮತ್ತು ಕ್ಲಬ್ ಅಟ್ಲಾಂಟ್ ಟೀಮ್ ಎರಡು ಕೂಡ ಒಂದೇ ಎಂದು ರ್ಯಾಲಿಯಲ್ಲಿ ಭಾಗವಹಿಸಿದವರು ಘೋಷಿಸಿದರು.
ಇದೇ ವೇಳೆ ಎರಡೂ ತಂಡಗಳ ಆಟ ಬಹಳ ಬಿರುಸಿನಿಂದ ನಡೆದಿದ್ದು ಪಂದ್ಯ ಡ್ರಾದಲ್ಲಿ ಮುಕ್ತಾಯಗೊಂಡಿದೆ. ಲೀಗ್ ನಲ್ಲಿ ಅಟ್ಲಾಂಟ್ ತಂಡ ಮೊದಲ ಸ್ಥಾನದಲ್ಲಿದೆ.












