ಕಣ್ವರ್ ಯಾತ್ರೆ: ಆಹಾರದ ಪಟ್ಟಿ ಮತ್ತು ಮಾಲಕನ ಹೆಸರು ಪ್ರದರ್ಶಿಸುವಂತೆ ವ್ಯಾಪಾರಿಗಳಿಗೆ ಸೂಚನೆ

0
3432

ಸನ್ಮಾರ್ಗ ವಾರ್ತೆ

ಜುಲೈ 11ರಂದು ಕಣ್ವರ್ ಯಾತ್ರೆ ಆರಂಭವಾಗಲಿದ್ದು ಉತ್ತರಪ್ರದೇಶದ ಮೀರತ್ ಜಿಲ್ಲೆಯ ಆಡಳಿತವು ವ್ಯಾಪಾರಿಗಳಿಗೆ ಕೆಲವು ಸೂಚನೆಗಳನ್ನು ನೀಡಿದೆ. ಯಾತ್ರೆ ಸಾಗುವ ದಾರಿಯ ಉದ್ದಕ್ಕೂ ಇರುವ ಎಲ್ಲಾ ವ್ಯಾಪಾರಿಗಳು ತಮ್ಮ ಆಹಾರದ ಪಟ್ಟಿಯನ್ನು ಮತ್ತು ಅದರ ಬೆಲೆಯನ್ನು ಬಹಿರಂಗವಾಗಿ ತೂಗು ಹಾಕಬೇಕು ಎಂದು ಆದೇಶ ನೀಡಿದೆ. ಮಾತ್ರ ಅಲ್ಲ ಅಂಗಡಿಯ ಮಾಲಕನ ಹೆಸರನ್ನು ಕೂಡ ತೂಗು ಹಾಕಬೇಕು ಎಂದು ಆದೇಶಿಸಿದೆ.

ಅಲ್ಲದೆ ಎಲ್ಲಾ ಶಾಪ್ ಗಳು ಕ್ಯೂಆರ್ ಕೋಡ್ ಅನ್ನು ಪ್ರದರ್ಶಿಸಬೇಕು ಎಂದು ಜಿಲ್ಲಾಡಳಿತ ತಾಕೀತು ಮಾಡಿದೆ. ಈ ಮೂಲಕ ಅಂಗಡಿಯ ಮಾಲಕ ಯಾರು ಅನ್ನುವುದನ್ನು ಕೂಡ ಪತ್ತೆ ಹಚ್ಚುವ ಉದ್ದೇಶವನ್ನು ಹೊಂದಲಾಗಿದೆ ಎಂದು ಹೇಳಲಾಗಿದೆ.

ಶಿವನ ಭಕ್ತರು ಪ್ರತಿ ವರ್ಷ ಕನ್ವರ್ ಯಾತ್ರೆಯನ್ನು ಕೈಗೊಳ್ಳುತ್ತಾರೆ.