ಟ್ರಂಪ್ ಗೆಲ್ಲುವುದನ್ನು ಇಸ್ರೇಲು ಕಾಯುತ್ತಿತ್ತಾ?

0
955

✍️ ವಿ.ಎಂ. ಇಬ್ರಾಹೀಮ್

ಇರಾನ್ ಆತ್ಮಾಭಿಮಾನವನ್ನು ಬಹು ಕಾಲದಿಂದಲೂ ಕಾಪಾಡಿಕೊಂಡು ಬಂದಿತ್ತು. ಅದಕ್ಕೆ ಇತ್ತೀಚೆಗಷ್ಟೇ ಡೊನಾಲ್ಡ್ ಟ್ರಂಪ್ ಘೋಷಿಸಿದ್ದ ಪೊರ್ಡೊ ಪರಮಾಣು ಸಂಸ್ಕರಣೆ ಪ್ಲಾಂಟ್ ಪ್ರತೀಕವಾಗಿದೆ. ಅದು ಪತನಗೊಳ್ಳುವುದು ಇಸ್ರೇಲ್ ಬಹುಕಾಲದಿಂದ ಬಯಸುತ್ತಿತ್ತು. 2007-2013ರಲ್ಲಿ ಎಹೂದ್ ಒಲ್ಮರ್ಟ್ ಮತ್ತು ಬೆಂಜಮಿನ್ ನೆತನ್ಯಾಹುರ ಸಚಿವ ಸಂಪುಟದಲ್ಲಿ ರಕ್ಷಣಾ ಸಚಿವನಾಗಿದ್ದೇ ಇರಾನಿನ ಪರಮಾಣು ಶಕ್ತಿ ಇಲ್ಲದೆ ಗೊಳಿಸುವುದಕ್ಕಾಗಿತ್ತು ಎಂದು ಮಾಜಿ ಪ್ರಧಾನಿ ಯಹೂದ್ ಬಾರಕ್ ತನ್ನ ಆತ್ಮ ಕಥೆಯಲ್ಲಿ ಬರೆದಿದ್ದಾರೆ.

ರವಿವಾರ ಬೆಗ್ಗೆ ಇಸ್ರೇಲಿನ ಬಯಕೆ ಸಫಲವಾಗಿದೆ. ಎಲ್ಲ ಅಂತಾರಾಷ್ಟ್ರೀಯ, ರಾಜತಾಂತ್ರಿಕ ಶಿಷ್ಟಾಚಾರ ತುಳಿದು ಬಾರಕ್ ಬರೆದುದಕ್ಕೆ ಅಡಿಗೆರೆ ಎಳೆಯಲಾಯಿತು. ಜುಲೈ 13ಕ್ಕೆ ಇಸ್ರೇಲ್ ಮಾಡಿದಂತೆ ಅಂದಿನ ಇಸ್ರೇಲಿನ ಸೈನಿಕ ಮುಖ್ಯಸ್ಥ ಗಬಿ ಆಶ್ಕಕನಾಸ್ ರೊಂದಿಗೆ ತಾನು ಹೇಳಿದಾಗ ಬಂಕರ್ ಬ್ಲಸ್ಟರ್ ಬಾಂಬುಗಳಿಲ್ಲ ಎಂದು ಅವರು ಹೇಳಿದ್ದರು. ಈ ಮಿತಿಯನ್ನು ಬದಲಿಸಲು ನಂತರ 2011-12ರಲ್ಲಿ ಶಾಂತಿ ಪ್ರಕ್ರಿಯೆಯ ಮೂಲಕ ಇರಾನಿನ ಪರಮಾಣು ಕಾರ್ಯಕ್ರಮ ನಿಲ್ಲಿಸಲು ಅಂದಿನ ಅಮೆರಿಕ ಅಧ್ಯಕ್ಷ ಬಾರಕ್ ಒಬಾಮ ಮುಂದಾಗ ಇಂತಹ ಸರ್ಜಿಕಲ್ ಸ್ಟ್ರೈಕ್ ಮಾಡಲು ಪ್ರಯತ್ನ ನಡೆಸಿದರೂ ನಡೆಯಲಿಲ್ಲ.

ಅಮೆರಿಕಕ್ಕೆ ಇರಾನ್ ಮೇಲೆ ದಾಳಿ ಮಾಡುವ ಯೋಜನೆಗಳಿಲ್ಲ ಎಂದು ಬಾರಕ್ ಅಮೆರಿಕದ ಅಧಿಕಾರಿಗಳಿಂದ ತಿಳಿದುಕೊಂಡಿದ್ದರು. ನಮಗೆ ಇರಾನಿನ ರಕ್ಷಣಾ ಕ್ಷೇತ್ರಕ್ಕೆ ಹೋಗಿ ದಾಳಿ ನಡೆಸುವ ಶಕ್ತಿ ಇದೆಯೇ ಎಂದು ಒಬಾಮ ಹೇಳಿದರು. ಅದಕ್ಕೆ ಮೊದಲೇ ಅತಿಕ್ರಮಣ ಮಾಡಲೇ ಬೇಕೆ, ಇರಾನಿನ ರಕ್ಷಣಾ ಶಕ್ತಿ ಹೆಚ್ಚಿಸುವ ಕ್ಷೇತ್ರ ಪೊರ್ದೊ ಎಂದು ಇಸ್ರೇಲಿನ ಈ ಮಾಜಿ ಪ್ರಧಾನಿ ಹೇಳುತ್ತಾರೆ. ಆದರೆ, ಪರಮಾಣು ಒಪ್ಪಂದದ ಭಾಗವಾಗಿ ಜಂಟಿ ಸಮಗ್ರ ಕ್ರಿಯಾ ಯೋಜನೆಗೆ ರೂಪು ಕೊಡುವುದರೊಂದಿಗೆ ಪೋರ್ದೋದ ಪರಮಾಣು ಸಂಸ್ಕೃರಿಸುವುದನ್ನೇ ಇರಾನ್ ಕೈಬಿಟ್ಟಿತು. ಆದರೆ ಬಾರಕ್ ಅಥವಾ ಇಸ್ರೇಲಿಗೆ ಹಾಗೆ ಬಿಡಲು ಸಿದ್ಧವಿರಲಿಲ್ಲ. ರಕ್ಷಣಾ ಮಂತ್ರಿ ಸ್ಥಾನದಲ್ಲಿ 2010ರ ನಂತರ ಎರಡು ವರ್ಷ ಪರಮಾಣು ಯೋಜನೆಯು ಮುಂದೆ ಸಾಗಿತು.

ಇರಾನ್ ಪರಮಾಣು ಯೋಜನೆಯನ್ನು ಸಂಪೂರ್ಣ ನಾಶಪಡಿಸಲು ಇರಾನಿನ ಎಲ್ಲೆಲ್ಲ ಮರ್ಮ ಕೇಂದ್ರಕ್ಕೆ ಹಾನಿ ಮಾಡಲು ಬಯಸಿದ್ದೂ ಇದೆ. ಆ ನಂತರ ಹೆಚ್ಚಿನ ಸಾಹಸಕ್ಕೆ ಇರಾನ್ ಮುಂದಾಗಲಿಲ್ಲ ಎಂದು ಬಾರಕ್ ರಬಿನ್ ಹೇಳಿದ್ದಾರೆ. ಆದರೆ ದಾಳಿ ಮಾಡಿದರೆ ಹೆಚ್ಚಿನ ಭಯೋತ್ಪಾದನಾ ದಾಳಿನಡೆಯದು ಹಾಗೂ ನಡೆದರೆ ಹೆಚ್ಚೆಂದರೆ ಹಿಝ್ಬುಲ್ಲವನ್ನು ಬಳಸಿ ಮಿಸೈಲು ದಾಳಿಗಳು ನಡೆಯ ಬಹುದೆಂದು ಅವರ ಅಭಿಪ್ರಾಯವಾಗಿತ್ತು. ತಮ್ಮ ಕಾಲದ ಸಚಿವ ಸಂಪುಟವನ್ನು ಐಡಿಎಫ್ ಚೀಫ್ ಸ್ಟಾಫ್ ಹೆದರಿಸಿ ಹಿಂಜರಿಯುವಂತೆ ಮಾಡುತ್ತಿದ್ದರು. ಅವರನ್ನು ತೆಗೆದು ಹಾಕಿ ಬೆನ್ನಿ ಗಾಟ್ಸ್ರನ್ನು ಮಿಲಿಟರಿ ಚೀಫ್ ಆಗಿ ನೇಮಕಗೊಳಿಸಲಾಯಿತು. ಅವರು ಯುದ್ಧಕ್ಕೆ ಸಹಾಯಕವಾದ ವರದಿ ಕೊಟ್ಟರು. ಈಗ ಇಂಟಲಿಜೆನ್ಸ್ ಮುಖ್ಯಸ್ಥ ಟುಲ್ಸಿ ಗಬ್ಬಾಲ್ಡ್ನಿಂದ ಟ್ರಂಪ್ ಇರಾನ್ ವಿರುದ್ಧ ನಿರ್ಬಂಧಿಸಿ ಹೇಳಿಕೆ ಪಡೆದುಕೊಂಡಂತೆ. ಮತ್ತಷ್ಟು ಪ್ರಯತ್ನ ಮುಂದುವರಿಸಬೇಕೆAದಿದ್ದಾಗ ಅಮೆರಿಕ ಕೈಬಿಟ್ಟಿತು.

ಇರಾಕ್ ಹೆದರಿಕೆಯಲ್ಲಿ ಅಮೆರಿಕ ಇತ್ತು:

ಇರಾನನ್ನು ಆಕ್ರಮಿಸುವ ಕುರಿತು ಅಮೆರಿಕದ ನೀತಿಯನ್ನು 2008ರಲ್ಲಿ ಅಧ್ಯಕ್ಷ ಜಾರ್ಜ ಬುಶ್ ಜೆರುಸಲೇಮಿನ ಒಂದು ಮುಚ್ಚಿದ ಕೋಣೆ ಚರ್ಚೆಯಲ್ಲಿ ಯಹೂದ್ ಒಲ್ಮರ್ಟ್ ಮತ್ತು ಬಾರಕ್ ರಿಗೆ ಮನವರಿಕೆ ಮಾಡಿಕೊಟ್ಟಿದ್ದರು. ಅಮೆರಿಕ ಅಧ್ಯಕ್ಷ ಎಂಬ ನೆಲೆಯಲ್ಲಿ ನಾನು ನಿಮ್ಮೊಂದಿಗೆ ಹೇಳುತ್ತಿದ್ದೇನೆ. ನ್ಯೂಕ್ಲಿಯರ್ ಪ್ಲಾಂಟಿನ ಮೇಲೆ ದಾಳಿ ನಡೆಸುವುದಕ್ಕೆ ನಾವು ಒಪ್ಪುವುದಿಲ್ಲ. ನಂತರ ಬಂದ ಒಬಾಮ ಕೂಡ ಇದೇ ನೀತಿಯಲ್ಲಿ ಗಟ್ಟಿಯಾಗಿದ್ದರು.

ಅಮೆರಿಕದ ಈ ನೀತಿಗೆ ಎರಡು ಕಾರಣಗಳಿದ್ದವು. ಒಂದನೆಯದು 2007 ನವೆಂಬರ್ ಹದಿನಾರಂದು ಅಮೆರಿಕದ ಇಂಟಲಿಜೆನ್ಸ್ ಯುಎಸ್ ನೇಶನಲ್ ಎಸ್ಟಿಮೇಟ್ ಎಂಬ ವರದಿ ಇದಕ್ಕೆ ಕಾರಣವಾಗಿತ್ತು. 2003ರ ಕೊನೆಯಲ್ಲಿ ಟೆಹ್ರಾನ್ ಪರಮಾಣು ಕಾರ್ಯಕ್ರಮ ನಿಲ್ಲಿಸಿದೆ ಎಂದು ಆ ವರದಿ ಹೇಳಿತ್ತು. ಇದನ್ನು ಸ್ವೀಕರಿಸುವುದು ಅಮೆರಿಕದ ಅಧ್ಯಕ್ಷರಿಗೆ ನಿರ್ಬಂಧವಾಗಿತ್ತು. ವಿಶೇಷವಾಗಿ 2003ರಲ್ಲಿ ಸಾಮೂಹಿಕ ವಿನಾಶದ ಆಯುಧ ಇದೆ ಎಂಬ ಇಂಟೆಲಿಜೆನ್ಸ್ ವರದಿ ಬಂತು. ಹೀಗೆ ಇರಾಕ್ ಮೇಲೆ ದಾಳಿ ಮಾಡಿ ಸೋಲೇ ಉಂಡಿತು. ಆನಂತರ ಮಧ್ಯ ಪ್ರಾಚ್ಯದತ್ತ ತಲೆ ಹಾಕಲು ಅವರು ಹೆದರಿದರು.

ಒಮನ್‌ನ ಮಧ್ಯಸ್ಥಿಕೆಯಲ್ಲಿ ಎರಡು ದೇಶಗಳ ನಡುವೆ ಚರ್ಚೆ ನಡೆದಿತ್ತು. ಅಮೆರಿಕದ ಹತ್ತಿರದ ಮಿತ್ರ ಆದರೂ ಚರ್ಚೆಯ ವಿವರವನ್ನು ಅಮೆರಿಕ ಇಸ್ರೇಲಿಗೆ ಗೊತ್ತಾಗದಂತೆ ಕಾಪಾಡಿತು. 2013ರಲ್ಲಿ ಮಧ್ಯಂತರ ಪರಮಾಣು ಒಪ್ಪಂದಕ್ಕೆ ಬಂದ ನಂತರವೇ ಆ ಚರ್ಚೆಯು ಏನಾಗಿತ್ತೆಂದು ಇಸ್ರೇಲಿಗೆ ಗೊತ್ತಾದ್ದು.

ಟ್ರಂಪ್ ಬಂದರು:

ದೇಶದ ವಾತಾವರಣ, ಸಂವಿಧಾನದ ಶಿಷ್ಟಾಚಾರಗಳ ಬಾಧ್ಯತೆಗಳಿಲ್ಲದ ಡೊನಾಲ್ಡ್ ಟ್ರಂಪ್ ಎರಡನೇ ಬಾರಿಗೆ ಅಧಿಕಾರಕ್ಕೆ ಬಂದಾಗ ಇಸ್ರೇಲಿಗೆ ಇದು ಅನುವು ಆಯಿತು. ಬಂಕರ್ ಬಸ್ಟರ್, ಪರಮಾಣು ಕಾರ್ಯಕ್ರಮದ ಪ್ರಾಥಮಿಕ ನಿಯಮದಿಂದ ಹಿಡಿದು ಎಲ್ಲ ಮಾನವೀಯ, ರಾಜತಾಂತ್ರಿಕ, ಅಂತಾ ರಾಷ್ಟ್ರೀಯ ಕಾನೂನುಗಳನ್ನು ತುಳಿದು ಇರಾನಿಗೆ ದಾಳಿ ಮಾಡಿ ಪರಮಾಣು ಕೇಂದ್ರವನ್ನು ನಾಶಪಡಿಸಿದ್ದಕ್ಕೆ ನೆತನ್ಯಾಹು ಹೊಗಳಿದ್ದು ಸುಮ್ಮಗಲ್ಲ. ಜಗತ್ತಿನಲ್ಲಿ ಬೇರೆ ಯಾವ ಶಕ್ತಿಗೂ ಸಾಧ್ಯವಾಗದ್ದು ಅಮೆರಿಕ ಮಾಡಿದ್ದು ಎಂದು ನೆತನ್ಯಾಹು ಹೊಗಳಿದ್ದಾರೆ. ಈ ಹಿಂದೆ ಯಾವ ತಂಡವೂ ಮಾಡದ ಕೆಲಸವನ್ನು ನಾವು ಮಾಡಿದೆವು ಎಂದು ಟ್ರಂಪ್ ಕೂಡ ಹೇಳಿದರು. ಅಂತಾರಾಷ್ಟ್ರೀಯ ಕಾನೂನು ನ್ಯಾಯದ ಸಮರ್ಥನೆ ಎಲ್ಲವನ್ನು ಪುಡಿಗುಟ್ಟಿ ಹೊಸ ಹೊಸ ಕ್ರಮದೊಂದಿಗೆ ನಾವು ಮುಂದೆ ಸಾಗುತ್ತೇವೆ ಎಂದು ಇಬ್ಬರ ನಿಲುವು ಆಗಿದೆ.