ಸನ್ಮಾರ್ಗ ವಾರ್ತೆ
ಎಂಜಿನ್ಗೆ ತೈಲ ಪೂರೈಕೆಯನ್ನು ನಿಯಂತ್ರಿಸುವ ಸ್ವಿಚ್ ಆಫ್ ಆಗಿರುವುದೇ ಅಹಮದಾಬಾದ್ ವಿಮಾನ ದುರಂತಕ್ಕೆ ಕಾರಣ ಎಂಬ ವರದಿ ಬಹಿರಂಗಗೊಂಡಿರುವಂತೆಯೇ ಇದೀಗ 2018ರಲ್ಲಿ ಈ ಬಗ್ಗೆ ಅಮೆರಿಕ ಸೂಚನೆ ನೀಡಿತ್ತು ಎಂಬ ಮಾಹಿತಿ ಹೊರ ಬಿದ್ದಿದೆ. ಬೋಯಿಂಗ್ 737 ವಿಮಾನಗಳ ಸ್ವಿಚ್ಗೆ ಸಂಬಂಧಿಸಿ ಅಮೆರಿಕ ಏಳು ವರ್ಷಗಳ ಹಿಂದೆಯೇ ಭಾರತಕ್ಕೆ ಎಚ್ಚರಿಕೆ ನೀಡಿತ್ತು. ಕೆಲವು ವಿಮಾನಗಳಲ್ಲಿ ಸ್ವಿಚ್ ಸಮಸ್ಯೆ ಉಂಟಾಗಬಹುದು ಎಂದು ಅಮೆರಿಕ ಹೇಳಿತ್ತು.
2018 ಡಿಸೆಂಬರ್ ನಲ್ಲಿ ಅಮೆರಿಕವು ಈ ಕುರಿತಂತೆ ಮಾಹಿತಿಯನ್ನು ಬಿಡುಗಡೆ ಮಾಡಿತ್ತು. ಬೋಯಿಂಗ್ 737 ವಿಮಾನಗಳ ಪೈಕಿ ಕೆಲವು ವಿಮಾನಗಳ ತೈಲ ನಿಯಂತ್ರಣ ಸ್ವಿಚ್ನ ಲಾಕಿಂಗ್ ಫೀಚರ್ನಲ್ಲಿ ಸಮಸ್ಯೆ ಇದೆ ಎಂದು ಎಚ್ಚರಿಕೆ ನೀಡಿತ್ತು. ಇದು ಸುರಕ್ಷಿತವಲ್ಲ ಎಂದು ಫೆಡರಲ್ ಎವಿಯೇಷನ್ ಸ್ಪಷ್ಟ ಪಡಿಸಿತ್ತು. ಅಹ್ಮದಾಬಾದ್ ನಲ್ಲಿ ಅಪಘಾತಕ್ಕೀಡಾದ ಬೋಯಿಂಗ್ 737 ವಿಮಾನದಲ್ಲೂ ಇದೆ ಸ್ವಿಚ್ ಅನ್ನು ಉಪಯೋಗಿಸಲಾಗಿತ್ತು ಎಂಬುದು ಗಮನಾರ್ಹ.












