ಕುವೈಟ್‍ನಲ್ಲಿ ಇನ್ನು ಮದುವೆಯ ರಿಜಿಸ್ಟ್ರೇಶನ್ ಆನ್‍ಲೈನ್ ನಲ್ಲಿ

0
693

ಕುವೈಟ್ ಸಿಟಿ, ಜೂ.155: ಕುವೈಟಿನಲ್ಲಿ ಆನ್‍ಲೈನ್ ಮೂಲಕ ಮದುವೆ ನೋಂದಣಿ ಮಾಡಿಸಿಕೊಳ್ಳಬಹುದು. ಕಾನೂನು ಸಚಿವಾಲಯ ಇದಕ್ಕಾಗಿ ಹೊಸವ್ಯವಸ್ಥೆ ಮಾಡಿದ್ದು ವಾಟ್ಸಪ್‍ನಲ್ಲಿ ಸುಲಭದಲ್ಲಿ ಮದುವೆ ನೋಂದಾಯಿಸಿಕೊಳ್ಳಬಹುದು. ಸೌದಿ ಅರೇಬಿಯ ಈಗಾಗಲೇ ಮದುವೆ ನೋಂದಣಿಯ ವೆಬ್‍ಪೋರ್ಟಲ್ ಆರಂಭಿಸಿದೆ. ಇದರ ಬೆನ್ನಿಗೆ ಕುವೈಟ್ ಕೂಡ ಇಂತಹ ಪ್ರಯತ್ನಕ್ಕೆ ಮುಂದಾಯಿತು. ಈ ಹಿಂದೆ ಕೋರ್ಟಿಗೆ ಹೋಗಿ ಪತ್ರಗಳ ಮೂಲಕ ಮದುವೆಯನ್ನು ನೋಂದಾಯಿಸಿಕೊಳ್ಳಬೇಕಾಗಿತ್ತು. ಮದುವೆ ರಿಜಿಸ್ಟ್ರೇಶನ್ ಮಾಡಿಸಿಕೊಳ್ಳಲು ಕೋರ್ಟಿಗೆ ಬಂದು ಕಷ್ಟ ಆಗುವುದನ್ನು ಆನ್ ಲೈನ್ ರಿಜಿಸ್ಟ್ರೇಶನ್ ಮೂಲಕ ತಪ್ಪಿಸುವುದು ಕೂಡ ಅಧಿಕಾರಿಗಳ ಉದ್ದೇಶವಾಗಿದೆ.

ಹೊಸ ಸುಧಾರಣೆ ಎಂದಿನಿಂದ ಆರಂಭವಾಗುತ್ತದೆ ಎಂದು ಸ್ಪಷ್ಟವಾಗಿಲ್ಲ. ಕಾನೂನು ಸಚಿವಾಲಯ ಸಿದ್ಧತೆ ನಡೆಸುತ್ತಿದೆ. ಇ ಗವರ್‍ನೆಸ್‍ಗೆ ಬದಲಾವಣೆಯಾಗಲು ಕುವೈಟ್ ಪ್ರಕ್ರಿಯೆ ಆರಂಭಿಸಿದ್ದು ದೇಶದ ಎಲ್ಲ ಸರಕಾರಿ ಇಲಾಖೆಗಳು ಮತ್ತು ಸಾರ್ವಜನಿಕರಿಗೆ ಸಂಬಂಧಿಸಿದ ಎಲ್ಲ ವ್ಯವಹಾರಗಳನ್ನು ಇ-ಗವರ್ನರಿಂಗ್ ಸ್ಮಾರ್ಟ್ ಸಿಸ್ಟಂ ಮೂಲಕ ನಿರ್ವಹಿಸುವ ಉದ್ದೇಶವನ್ನು ದೇಶ ಹೊಂದಿದೆ.