ಕೊಲ್ಕತಾ, ಜೂ.17: ಬಾಂಗ್ಲಾದೇಶದ ಪ್ರಸಿದ್ಧ ಸಿನೆಮಾ ತಾರೆ ಅಂಜು ಘೋಷ್ ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ. ಕೊಲ್ಕತಾದ ಪಾರ್ಟಿ ಕಚೇರಿಯಲ್ಲಿ ರಾಜ್ಯ ಬಿಜೆಪಿ ಅಧ್ಯಕ್ಷ ದಿಲೀಪ್ ಘೋಷ್ರಿಂದ ಬಿಜೆಪಿ ಸದಸ್ಯತನವನ್ನು ಸ್ವೀಕರಿಸಿದರು. ದಿಲೀಪ್ ಘೋಷ್ ಪಾರ್ಟಿಯ ಧ್ವಜವನ್ನು ನಟಿಗೆ ನೀಡಿದರು. ಅಂಜು ಘೋಷ್ ಈವರೆಗೂ ಭಾರತೀಯ ಪೌರತ್ವವನ್ನು ಸ್ವೀಕರಿಸಿಲ್ಲ. ಭಾರತ ಪ್ರಜೆಯಲ್ಲದ ಓರ್ವರು ಬಿಜೆಪಿ ಸದಸ್ಯತನವನ್ನು ಸ್ವೀಕರಿಸಲು ಹೇಗೆ ಸಾಧ್ಯ ಎನ್ನುವ ಪ್ರಶ್ನೆಗೆ ನಟಿ ಉತ್ತರಿಸಿಲ್ಲ.
ಅಂಜು ಘೋಷ್ ಅಭಿನಯಿಸಿದ ಮತ್ತು 1989ರಲ್ಲಿ ಬಿಡುಗಡೆಯಾಧ ಬೇದರ್ ಮೆಯೆ ಜೋಸ್ನಾ ಎನ್ನುವ ಬಂಗಾಳಿ ಭಾಷೆಯ ಸಿನೆಮಾ ಬಾಂಗ್ಲಾ ದೇಶದ ಇತಿಹಾಸದಲ್ಲಿ ಮೈಗಲ್ಲು ಆಗಿತ್ತು. 63 ವರ್ಷದ ಅಂಜು ಈಗ ಸಿನೆಮಾಗಳಲ್ಲಿ ನಟಿಸುತ್ತಿಲ್ಲ.












