ಮದುವೆ ನಿರಾಕರಣೆ: ಯುವಕನ ಮುಖಕ್ಕೆ ಆಸಿಡ್ ಎರಚಿದ ಯುವತಿ

0
743

ಹೊಸದಿಲ್ಲಿ, ಜೂ.17: ಮದುವೆಯಾಗಲು ನಿರಾಕರಿಸಿದ ಯುವಕನ ಮುಖಕ್ಕೆ ಯುವತಿಯೊಬ್ಬಳು ಆಸಿಡ್ ಎರಚಿದ್ದು ಪೊಲೀಸರು ಆಕೆಯನ್ನು ಬಂಧಿಸಿದ್ದಾರೆ. ದಿಲ್ಲಿಯ ವಿಕಾಸ್‍ಪುರದಲ್ಲಿ ಘಟನೆ ನಡೆದಿದ್ದು ಇಬ್ಬರೂ ಬೈಕ್‍ನಲ್ಲಿ ಹೋಗುತ್ತಿದ್ದಾಗ ಸರಿಯಾಗಿ ಸ್ಪರ್ಶಿಸಲು ಆಗುವುದಿಲ್ಲ ಎಂದು ಯುವಕನ ಹೆಲ್ಮೆಟನ್ನು ತೆಗೆಯಿಸಿ ಯುವತಿ ಮುಖಕ್ಕೆ ಆಸಿಡ್ ಎರಚಿದ್ದಾಳೆ. ಯುವತಿಯ ಕೈಗೂ ಸುಟ್ಟ ಗಾಯಗಳಾಗಿದ್ದು ಯುವಕನ ಎದೆ, ಮುಖ ಕೊರಳು ಸುಟ್ಟುಹೋಗಿದೆ. ಮೊದಲು ಪ್ರೇಮಿಗಳ ಮೇಲೆ ದೌರ್ಜನ್ಯ ನಡೆದಿದೆ ಎಂದು ವರದಿಯಾಗಿತ್ತು. ಘಟನೆ ಜೂನ್ ಹನ್ನೊಂದರಂದು ನಡೆದಿತ್ತು. ಬೈಕ್‍ನಲ್ಲಿ ಹೋಗುತ್ತಿದ್ದಾಗ ಯಾರೋ ಒಬ್ಬ ಆಸಿಡ್ ಎರಚಿದನೆಂದು ಹೇಳಿ ಪೊಲೀಸರಿಂದ ಸತ್ಯವನ್ನು ಮುಚ್ಚಿಟ್ಟಿದ್ದರು. ಪೊಲೀಸರು ಆರೋಪಿಯನ್ನು ಹುಡುಕಿದರೂ ಪತ್ತೆ ಮಾಡಲು ಸಾಧ್ಯವಾಗಿರಲಿಲ್ಲ. ಮಾತು ಮಾತಿಗೆ ಯುವತಿ ತನ್ನ ಹೆಲ್ಮೆಟ್ ತೆಗೆಯಲು ಹೇಳಿದ್ದಳು ಎಂದು ಯುವಕ ಹೇಳಿದ ಜಾಡಿನಲ್ಲಿ ಘಟನೆಯ ನೈಜ ಸ್ಥಿತಿಯನ್ನು ಪೊಲೀಸರು ಹೊರತಂದಿದ್ದಾರೆ. ಆಸಿಡ್ ಎರಚುವ ಮೊದಲು ಪರಸ್ಪರ ಸಂಬಂಧವನ್ನು ಮುರಿದುಕೊಳ್ಳೋಣ ಎಂದು ಯುವಕ ತನಗೆ ಹೇಳಿದ್ದ. ಇದರಿಂದ ಕೋಪಗೊಂಡು ಮನೆಯಲ್ಲಿ ಕ್ಲೀನಿಂಗ್ ಗೆ ಉಪಯೋಗಿಸುವ ಆಸಿಡ್‍ನ್ನು ಎರಚಿದೆ ಎಂದು ಬಂಧಿತ ಯುವತಿ ಪೊಲೀಸರ ಮುಂದೆ ತಪ್ಪೊಪಿಕೊಂಡಿದ್ದಾಳೆ.