ಅಯೋಧ್ಯೆ, ಜೂ.17: ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣಕ್ಕೆ ಕೇಂದ್ರ ಸರಕಾರ ಸುಗ್ರೀವಾಜ್ಞೆ ಹೊರಡಿಸಬೇಕೆಂದು ಶಿವಸೇನೆ ಅಧ್ಯಕ್ಷ ಉದ್ಧವ್ ಠಾಕ್ರೆ ಹೇಳಿದ್ದಾರೆ. ಪ್ರಧಾನಿ ಮೋದಿಗೆ ಆ ದಿಟ್ಟತನವಿದೆ. ಆದ್ದರಿಂದ ಈ ವಿಚಾರದಲ್ಲಿ ಅವರು ಮುಂದುವರಿಯಬೇಕು. ಅಯೋಧ್ಯೆಯ ರಾಮ್ಲಲ್ಲಾ ಮಂದಿರ ದರ್ಶನದ ಬಳಿಕ ಠಾಕ್ರೆ ಪತ್ರಿಕಾಗೋಷ್ಠಿಯಲ್ಲಿ ಮಾತಾಡುತ್ತಿದ್ದರು. ಲೋಕಸಭಾ ಚುನಾವಣೆಯ ವಿಜಯದ ನಂತರ ಪುತ್ರ ಆದಿತ್ಯ ಠಾಕ್ರೆ ಮತ್ತು ಶಿವಸೇನೆಯ ಹದಿನೆಂಟು ಹೊಸ ಸಂಸದರೊಂದಿಗೆ ಅಯೋಧ್ಯೆಗೆ ಬಂದು ಅವರು ರಾಮ್ಲಲ್ಲಾ ದರ್ಶನ ಪಡೆದರು. ಜಗತ್ತಿನಲ್ಲಿರುವ ಎಲ್ಲ ಹಿಂದೂಗಳು ರಾಮಮಂದಿರ ನಿರ್ಮಾಣವನ್ನು ಬೆಂಬಲಿಸುತ್ತಿದ್ದಾರೆ. ಕೇಂದ್ರ ಸರಕಾರ ತಕ್ಷಣ ತೀರ್ಮಾನಕ್ಕೆ ಬರಬೇಕೆಂದು ಠಾಕ್ರೆ ಹೇಳಿದರು.
ಕಾನೂನು ರಚಿಸಿ ರಾಮಮಂದಿರ ಕಟ್ಟುವುದು ರಾಜಕೀಯ ವಿಷಯವಲ್ಲ. ಅದು ವಿಶ್ವಾಸಕ್ಕೆ ಸಂಬಂಧಿಸಿದ ವಿಷಯವಾಗಿದೆ ಎಂದರು.












