ಸನ್ಮಾರ್ಗ ವಾರ್ತೆ
ಗಾಝಾದಲ್ಲಿ ಇಸ್ರೇಲ್ ನಡೆಸುತ್ತಿರುವ ದಾಳಿಯನ್ನು ತಕ್ಷಣ ನಿಲ್ಲಿಸುವಂತೆ ಆಗ್ರಹಿಸಿ ದೆಹಲಿಯ ಜಂತರ್ ಮಂತರ್ ನಲ್ಲಿ ಭಾರಿ ಪ್ರತಿಭಟನೆ ನಡೆದಿದೆ. ವಿದ್ಯಾರ್ಥಿಗಳು ಆಕ್ಟಿವಿಸ್ಟುಗಳು ಮತ್ತು ನಾಗರಿಕರು ವಿವಿಧ ಫ್ಲಕಾರ್ಡ್ ಗಳೊಂದಿಗೆ ಜಂತರ್ ಮಂತರ್ ನಲ್ಲಿ ಸೇರಿದರು ಮತ್ತು ಗಾಝಾದ ಜನರಿಗೆ ತಮ್ಮ ಬೆಂಬಲವನ್ನು ವ್ಯಕ್ತಪಡಿಸಿದರು. ಜಮಾಅತೆ ಇಸ್ಲಾಮಿ ಹಿಂದ್ ರಾಷ್ಟ್ರೀಯ ಕಾರ್ಯದರ್ಶಿ ಸಲ್ಮಾನ್ ಅಹಮದ್ ಅವರು ಗಾಝಾದ ಮೇಲೆ ಇಸ್ರೇಲ್ ದಾಳಿಯನ್ನು ತೀವ್ರವಾಗಿ ಖಂಡಿಸಿದರು. ಇದೆ ವೇಳೆ ಹೈದರಾಬಾದ್ ನಲ್ಲಿ ಎಸ್ಐಒ ಬೃಹತ್ ಪ್ರತಿಭಟನಾ ಸಭೆಯನ್ನು ಏರ್ಪಡಿಸಿದ್ದು ಇಸ್ರೇಲ್ ಉತ್ಪನ್ನಗಳನ್ನು ಬಹಿಷ್ಕರಿಸುವಂತೆ ಕರೆ ನೀಡಿದೆ.
ಫೆಲೆಸ್ತೀನ್ ವಿಷಯದಲ್ಲಿ ಕೇಂದ್ರ ಸರಕಾರ ಖಚಿತ ಮತ್ತು ಸ್ಪಷ್ಟ ನಿರ್ಧಾರವನ್ನು ತೆಗೆದುಕೊಳ್ಳಬೇಕು. ಭಾರತ ಫೆಲಸ್ತೀನ್ ರಾಷ್ಟ್ರಕ್ಕೆ ಐತಿಹಾಸಿಕವಾಗಿಯೇ ಬೆಂಬಲ ಘೋಷಿಸಿದ ರಾಷ್ಟ್ರವಾಗಿದೆ. ಭಾರತ ಸಹಿತ ಜಗತ್ತಿನ ರಾಷ್ಟ್ರಗಳು ಇಸ್ರೇಲ್ ಗೆ ಶಸ್ತ್ರಾಸ್ರ ರಫ್ತು ಮಾಡುವುದನ್ನು ನಿಲ್ಲಿಸಬೇಕಾಗಿದೆ ಎಂದು ಎಸ್ಐಓ ತೆಲಂಗಾಣದ ಅಧ್ಯಕ್ಷ ಮಹಮ್ಮದ್ ಫರಾಜ್ ಅಹಮದ್ ಹೇಳಿದ್ದಾರೆ.
ಇದೇ ವೇಳೆ ದೆಹಲಿಯಲ್ಲಿ ನಡೆದ ಪ್ರತಿಭಟನೆಯಲ್ಲಿ ನೂರಾರು ಮಂದಿ ಭಾಗವಹಿಸಿದ್ದರು. ಇವರು ಗಾಝಾದಲ್ಲಿ ಇಸ್ರೇಲ್ ನಡೆಸುತ್ತಿರುವ ಕ್ರೌರ್ಯವನ್ನು ಖಂಡಿಸಿದರು. ಕಳೆದ ಎರಡು ವರ್ಷಗಳಿಂದ ನಡೆಯುತ್ತಿರುವ ದಾಳಿಯಲ್ಲಿ ಸಾವಿಗೀಡಾದವರ ಅಂಕಿ ಸಂಖ್ಯೆಯನ್ನು ಹಂಚಿಕೊಂಡ ಭಾಷಣಕಾರರು ಭಾರತ ಸರಕಾರ ಕದನ ವಿರಾಮವನ್ನು ನಡೆಸುವುದಕ್ಕಾಗಿ ತನ್ನ ಪ್ರಭಾವವನ್ನು ಬೀರಬೇಕು ಎಂದು ಒತ್ತಾಯಿಸಿದರು.












