ಸಂಸತ್ತಿನಲ್ಲಿ ವಂದೇ ಮಾತರಂ ಹೇಳಲು ನಿರಾಕರಿಸಿದ ಮುಸ್ಲಿಂ ಸಂಸದ- ವೀಡಿಯೊ

0
1138

ಹೊಸದಿಲ್ಲಿ, ಜೂ. 19: ಹದಿನೇಳನೆ ಲೋಕಸಭಾ ಅಧಿವೇಶನ ಸೋಮವಾರ ಆರಂಭವಾಗಿದ್ದು ಮಂಗಳವಾರ ಸಂಸದರ ಪ್ರಮಾಣವಚನ ಕಾರ್ಯದಲ್ಲಿ ಸಮಾಜವಾದಿ ಪಾರ್ಟಿ ಸಂಸದ ಶಫೀಕುರ್ರಹ್ಮಾನ್ ಬರ್ಕ್ ಪ್ರಮಾಣ ವಚನದ ವೇಳೆ ವಂದೇ ಮಾತರಂ ಹೇಳಲು ನಿರಾಕರಿಸಿದ್ದಾರೆ. ಸಂಸತ್ತಿನಲ್ಲಿ ಪ್ರಮಾಣವಚನ ಸ್ವೀಕರಿಸಿದ ಬಳಿಕ ಸಂವಿಧಾನ ಝಿಂದಾಬಾದ್ ಘೋಷಣೆಯನ್ನು ಅವರು ಕೂಗಿದರು. ವಂದೇ ಮಾತರಂ ಹೇಳಲಾರೆ. ಅದು ಇಸ್ಲಾಮ್ ವಿರೋಧಿಯಾಗಿದೆ ಎಂದು ಸಂಸತ್ತಿನಲ್ಲಿ ಸ್ಪಷ್ಟಪಡಿಸಿದ್ದಾರೆ.

ಅವರು ಹೀಗೆ ಹೇಳುತ್ತಿದ್ದಂತೆ ಸಂಸತ್ತಿನಲ್ಲಿ ಗದ್ದಲ ಕೇಳಿ ಬಂತು. ಆದ್ದರಿಂದ ಸಂಸದರ ರಿಜಿಸ್ಟರಿಯಲ್ಲಿ ಸಹಿ ಹಾಕಲು ಕೂಡ ಬರ್ಕ್ ಮರೆತರು. ಅವರನ್ನು ಕರೆದು ಒಬ್ಬರು ರಿಜಿಸ್ಟ್ರರ್ ಗೆ ಸಹಿ ಹಾಕಲು ತಿಳಿಸಿದರು. ಕೇವಲ ಅವರ ಪ್ರಮಾಣ ವಚನ ಮಾತ್ರ ದಾಖಲಿಸಿಕೊಳ್ಳಲಾಗುವುದು, ಇತರ ವಿಷಯಗಳು ಕಡತಕ್ಕೆ ಸೇರುವುದಿಲ್ಲ ಎಂದು ಉಪಸಭಾಧ್ಯಕ್ಷರು ತಿಳಿಸಿದ್ದಾರೆ.