ಇಂದೋರ್, ಜೂ. 19: ಮಧ್ಯಪ್ರದೇಶ ನರಸಿಂಹಪುರ ಪೊಲೀಸರು ಕೊಲೆಯತ್ನ ಆರೋಪದಲ್ಲಿ ಕೇಂದ್ರ ಸಚಿವ ಪ್ರಹ್ಲಾದ್ ಪಟೇಲ್ ರ ಪುತ್ರ ಪ್ರಬಲ್ ಪಟೇಲ್ ಮತ್ತು ಸಂಬಂಧಿಕ ಮೋನು ಸಹಿತ ಏಳು ಮಂದಿಯನ್ನು ಮಂಗಳವಾರ ಬಂಧಿಸಿದ್ದಾರೆ. ಪ್ರಹ್ಲಾದ್ ಪಟೇಲ್ ಮಧ್ಯಪ್ರದೇಶದಲ್ಲಿ ಬಿಜೆಪಿಯ ಹಿರಿಯ ನಾಯಕರು ಆಗಿದ್ದು ದಾಮೋಹ್ ಕ್ಷೇತ್ರದ ಲೋಕಸಭಾ ಸದಸ್ಯರಾಗಿದ್ದಾರೆ. ಇತ್ತೀಚೆಗೆ ಅವರನ್ನು ಪ್ರಧಾನಿ ಮೋದಿ ಸಚಿವ ಸಂಪುಟದಲ್ಲಿ ಸಚಿವರನ್ನಾಗಿ ನೇಮಿಸಿದ್ದಾರೆ.
ಕೇಂದ್ರ ಸಚಿವ ಪಟೇಲ್ ರ ಕಿರಿಯ ಸಹೋದರ ಮತ್ತು ಬಿಜೆಪಿ ಶಾಸಕ ಘಟನೆಯು ನಡೆಯುವ ವೇಳೆ ಮೋನು ಜಬಲ್ಪುರದಲ್ಲಿದ್ದರು ಮತ್ತು ಪ್ರಬಲ್ ಜಬಲ್ ಪುರದಿಂದ ಮರಳುತ್ತಿದ್ದರು. ಇಬ್ಬರು ಘಟನೆ ನಡೆದ ಸ್ಥಳದಲ್ಲಿ ಉಪಸ್ಥಿತರಿರಲಿಲ್ಲ. ಇಬ್ಬರನ್ನೂ ರಾಜಕೀಯ ಕಾರಣದಿಂದ ಪ್ರಕರಣದಲ್ಲಿ ಸಿಲುಕಿಸಲಾಗಿದೆ. ಇದೇ ವೇಳೆ ಮಧ್ಯಪ್ರದೇಶ ಕಾಂಗ್ರೆಸ್ ಸಮಿತಿ ಟ್ವೀಟ್ ಮಾಡಿ ಕೇಂದ್ರ ಸಚಿವರ ಮತ್ತು ಬಿಜೆಪಿ ಶಾಸಕರ ಪುತ್ರ ಗುಂಡು ಹಾರಿಸಿದ್ದರು. ಕೊಲೆ ಯತ್ನ ಪ್ರಕರಣ ಅವರಿಬ್ಬರ ವಿರುದ್ಧ ದಾಖಲಾಗಿದೆ ಎಂದಿದೆ. ಜಿಲ್ಲೆಯ ಪೊಲೀಸ್ ಅಧೀಕ್ಷಕರಾದ ಗುರುಕಿರಣ್ ಸಿಂಗ್ ಮಂಗಳವಾರ ಪ್ರಬಲ್ ಪಟೇಲ್ (26) ಮತ್ತು ಮೋನು ಪಟೇಲ್ (27) ಸಹಿತ ಹನ್ನೆರಡು ಆರೋಪಿಗಳ ವಿರುದ್ಧ ಭಾರತ ದಂಡ ಸಂಹಿತೆ ಕಲಂ 307, 365 ಪ್ರಕರಣ ದಾಖಲಾಗಿದೆ. ಪ್ರಬಲ್ ಸಹಿತ ಏಳು ಆರೋಪಿಗಳನ್ನು ಬಂಧಿಸಲಾಗಿದೆ ಎಂದು ತಿಳಿಸಲಾಗಿದೆ. ಮೋನು ಪಟೇಲ್ ಸಹಿತ ಇತರ ಆರೋಪಿಗಳ ಶೋಧ ನಡೆಯುತ್ತಿದೆ ಎಂದು ತಿಳಿಸಿದ್ದಾರೆ.












