ಸನ್ಮಾರ್ಗ ವಾರ್ತೆ
ಮಧ್ಯಪ್ರದೇಶದಲ್ಲಿ ನಡೆದ ದುರ್ಗಾ ವಾಹಿನಿ ಶಸ್ತ್ರಪೂಜಾ ಕಾರ್ಯಕ್ರಮದಲ್ಲಿ ಬಿಜೆಪಿ ನಾಯಕಿ ಪ್ರಜ್ಞ ಸಿಂಗ್ ಠಾಕೂರ್ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ ಮುಸ್ಲಿಂ ಪುರುಷರಿಂದ ದೂರ ನಿಲ್ಲಿ. ಅವರಿಂದ ಯಾವುದೇ ನೆರವನ್ನೂ ತಿರಸ್ಕರಿಸಿ ಬಿಡಿ. ಒಂದು ವೇಳೆ ಶತ್ರುಗಳು ನಿಮ್ಮ ಬಳಿಗೆ ಬಂದರೆ ಅವರನ್ನು ತುಂಡರಿಸಿ ಎಂದು ಅವರು ಕರೆಕೊಟ್ಟಿದ್ದಾರೆ. ಮಾಲೆಂಗಾವ್ ಮಸೀದಿ ಸ್ಫೋಟದ ಆರೋಪಿಯಾಗಿದ್ದ ಈಕೆ ಇದೀಗ ದೋಷ ಮುಕ್ತರಾಗಿ ಹೊರ ಬಂದಿದ್ದಾರೆ.
ಮಿಯಾಗಳ ನಡುವೆ ಸಹೋದರ ಸಹೋದರಿ ಎಂಬ ಸಂಬಂಧವೇ ಇಲ್ಲ. ತಮ್ಮ ಸ್ವಂತ ಸಹೋದರಿಯರಿಗೆ ಗೌರವ ನೀಡದವರು ನಿಮ್ಮನ್ನು ಸಹೋದರಿ ಎಂದು ಗೌರವಿಸಲು ಹೇಗೆ ಸಾಧ್ಯ? ನೀವೆಂದೂ ಮುಸ್ಲಿಮರ ಸಹೋದರಿಯರು ಆಗಲಾರಿರಿ ಎಂದು ಅವರು ಹೇಳಿದ್ದಾರೆ.
ಯಾವಾಗ ನಮ್ಮ ಹೆಣ್ಣು ಮಕ್ಕಳನ್ನು ಅಪಹರಿಸಲಾಗುತ್ತದೋ ಮತ್ತು ಅವರ ದೇಹವನ್ನು ರಸ್ತೆಗೆ ಎಸೆಯಲಾಗುತ್ತದೋ ಅದು ನಮ್ಮಲ್ಲಿ ನೋವನ್ನು ತರಿಸುತ್ತದೆ ಈ ನೋವನ್ನು ಬಿಡುಗಡೆ ಮಾಡುವುದಕ್ಕಾಗಿ ಶತ್ರುಗಳು ಯಾವಾಗ ನಿಮ್ಮ ಬಳಿಗೆ ಬರುತ್ತಾರೋ ಅವರನ್ನು ತುಂಡರಿಸಿ ಬಿಡಿ ಎಂದವರು ಕರೆಕೊಟ್ಟಿದ್ದಾರೆ.
ಮನೆಯ ವಿದ್ಯುತ್ ದ್ವೀಪವನ್ನು ಸರಿಪಡಿಸುವುದು, ನಳ್ಳಿಯನ್ನು ಸರಿಪಡಿಸುವುದು, ವಾಹನ ಚಾಲನಾ ತರಬೇತಿಯನ್ನು ಕೊಡುವುದು ಇತ್ಯಾದಿಗಳಲ್ಲಿ ಮುಸ್ಲಿಂ ಪುರುಷರನ್ನು ದೂರ ಇಡಿ. ಅವರಿಗೆ ಕೆಲಸ ಕೊಡಬೇಡಿ ಎಂದವರು ಸಲಹೆ ನೀಡಿದ್ದಾರೆ.
ಅವರ ಈ ಹೇಳಿಕೆಗೆ ತೀವ್ರ ವಿರೋಧ ವ್ಯಕ್ತವಾಗಿದೆ ಮಧ್ಯಪ್ರದೇಶದ ವಿರೋಧ ಪಕ್ಷದ ನಾಯಕ ಉಮಂಗ್ ಸಿಂಘಾರ್ ಅವರು ಈ ಹೇಳಿಕೆಯನ್ನು ಖಂಡಿಸಿದ್ದಾರೆ ಮತ್ತು ಹಿಂದೂ ಮುಸ್ಲಿಂ ಘರ್ಷಣೆಗೆ ಪೂರಕವಾಗಿ ಅವರು ಮಾತಾಡುತ್ತಿದ್ದಾರೆ ಎಂದು ಹೇಳಿದ್ದಾರೆ.












