ಭಾರತದಲ್ಲಿ ಹಿಂದೂಗಳ ಜನಸಂಖ್ಯೆಯನ್ನು ಮುಸ್ಲಿಮರು ಎಂದೂ ಮೀರಲಾರರು: ಓವೈಸಿ

0
702

ಸನ್ಮಾರ್ಗ ವಾರ್ತೆ

ಭಾರತದಲ್ಲಿ ಮುಸ್ಲಿಮರು ಎಂದು ಕೂಡ ಹಿಂದೂ ಜನಸಂಖ್ಯೆಯನ್ನು ಮೀರಲಾರರು. ಆದರೆ ಈ ದೇಶದಲ್ಲಿ ಈ ಕುರಿತಂತೆ ಸುಳ್ಳುಗಳನ್ನು ಹಬ್ಬಿಸಲಾಗುತ್ತಿದೆ ಎಂದು ಸಂಸದ ಅಸದುದ್ದೀನ್ ಓವೈಸಿ ಹೇಳಿದ್ದಾರೆ. ಮಹಾರಾಷ್ಟ್ರದ ಪುಣೆಯ ಜರ್ನಲಿಸ್ಟ್ ಯೂನಿಯನ್ ಏರ್ಪಡಿಸಿದ್ದ ಮೀಟ್ ದಿ ಪ್ರೆಸ್ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತಾಡುತ್ತಾ ಅವರು ಈ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಮುಸ್ಲಿಂ ಸಮುದಾಯ ಎದುರಿಸುತ್ತಿರುವ ಸವಾಲುಗಳನ್ನು ಈ ಸಮಯದಲ್ಲಿ ಉಲ್ಲೇಖಿಸಿದ ಅವರು ಮುಸ್ಲಿಂ ಸಮುದಾಯದ ಅಭಿವೃದ್ಧಿಗೆ ಕೇಂದ್ರ ಸರಕಾರ ತೊಡಕಾಗಿರುವುದನ್ನು ಟೀಕಿಸಿದ್ದಾರೆ.

ಇತ್ತೀಚಿಗೆ ನಡೆದ ರಾಷ್ಟ್ರೀಯ ಕುಟುಂಬ ಕಲ್ಯಾಣ ಸರ್ವೆಯನ್ನು ಉಲ್ಲೇಖಿಸಿದ ಅವರು ಮುಸ್ಲಿಂ ಸಮುದಾಯದ ಫಲವತ್ತತೆಯ ಪ್ರಮಾಣದಲ್ಲಿ ಕುಸಿದಿರುವುದನ್ನು ಇದು ತೋರಿಸುತ್ತದೆ ಮತ್ತು ಮುಸ್ಲಿಂ ಸಮುದಾಯ ಶಿಕ್ಷಣದ ಕಡೆಗೆ ಹೆಚ್ಚು ಒತ್ತು ಕೊಡುತ್ತಿದೆ ಎಂದು ಅವರು ಹೇಳಿದ್ದಾರೆ.

ಮುಸ್ಲಿಮರು ಕೇವಲ ಮದ್ರಸಕ್ಕೆ ಹೋಗ್ತಾ ಇದ್ದಾರೆ ಅನ್ನುವ ಸುಳ್ಳುಗಳನ್ನು ಹರಡಲಾಗುತ್ತಿದೆ. ಮದರಸಕ್ಕೆ ಮುಸ್ಲಿಮರ ಮಕ್ಕಳು ಹೋಗ್ತಾ ಇರುವುದು ಧರ್ಮವನ್ನು ಕಲಿಯುವುದಕ್ಕಾಗಿ. ಇನ್ನೊಂದು ಕಾರಣ ಏನೆಂದರೆ ಮುಸ್ಲಿಂ ಬಾಹುಳ್ಯ ಪ್ರದೇಶದಲ್ಲಿ ಸರಕಾರ ಶಾಲೆಗಳನ್ನು ನಿರ್ಮಿಸುತ್ತಿಲ್ಲ. ಸರಕಾರವು ಮುಸ್ಲಿಂ ಸಮುದಾಯವನ್ನು ಹಿಂದುಳಿಯುವಂತೆ ಟಾರ್ಗೆಟ್ ಮಾಡಿ ಕೆಲಸ ಮಾಡುತ್ತಿದೆ ಎಂದವರು ಆರೋಪಿಸಿದ್ದಾರೆ.