ಮುಸ್ಲಿಮರಿಗೆ ಕಲ್ಲೆಸೆಯಿರಿ: ಶ್ರೀಲಂಕಾದ ಬೌದ್ಧ ಸನ್ಯಾಸಿ ಕರೆ

0
1826

ಕೊಲೊಂಬೊ, ಜೂ. 25: ಈಸ್ಟರ್ ವೇಳೆ ಭಯೋತ್ಪಾದನಾ ದಾಳಿಯಲ್ಲಿ 250 ಮಂದಿ ಮೃತಪಟ್ಟ ಘಟನೆಯ ನಂತರ ಶ್ರೀಲಂಕದಲ್ಲಿ ಮುಸ್ಲಿಮರು ಉಸಿರು ಬಿಗಿ ಹಿಡಿದು ಬದುಕುವ ಪರಿಸ್ಥಿತಿ ನಿರ್ಮಾಣವಾಗಿದೆ. ಬೌದ್ಧ ಧರ್ಮದ ಸಂತರು ಮುಸ್ಲಿಮರ ವಿರುದ್ಧ ಹಿಂಸೆಯನ್ನು ಪ್ರಚೋದಿಸುತ್ತಿದ್ದಾರೆ. ಮುಸ್ಲಿಂ ವೈದ್ಯರೊಬ್ಬರು ಸಾವಿರಾರು ಬುದ್ಧ ಮಹಿಳೆಯರಿಗೆ ಗರ್ಭಧಾರಣೆ ಆಗದಂತೆ ಶಸ್ತ್ರಕ್ರಿಯೆ ನಡೆಸಿದ್ದಾರೆ ಎಂದು ಬೌದ್ಧ ಸಂತರು ಆರೋಪಿಸಿದ್ದು ನಂತರ ಉದ್ರೇಕಕಾರಿ ಹೇಳಿಕೆ ನೀಡತೊಡಗಿದ್ದಾರೆ. ಕಳೆದವಾರ ವಾರಕಾಗೊಡಾ ಶ್ರೀ ಜಾನರತ್ನ ಥೆರೊ ಎಂಬ ಬುದ್ಧ ಸನ್ಯಾಸಿ ಭಾಷಣ ಮಾಡಿ ಜನರ ನಡುವೆ ಉದ್ವಿಗ್ನಸ್ಥಿತಿ ನಿರ್ಮಿಸಿದ್ದಾರೆ ಎಂದು ಶ್ರೀಲಂಕಾದ ರಾಜಕಾರಣಿಗಳು, ಸಾಮಾಜಿಕ ಕಾರ್ಯಕರ್ತರು ಹೇಳಿದ್ದಾರೆ. ನಾಲ್ಕು ಸಾವಿರ ಬುದ್ಧ ಮಹಿಳೆಯರಿಗೆ ಸಂತಾನ ಹರಣ ಚಿಕಿತ್ಸೆ ನೀಡಿದ್ದಾರೆ ಎಂದು ಮುಸ್ಲಿಂ ವೈದ್ಯರೊಬ್ಬರ ವಿರುದ್ಧ ಆರೋಪವನ್ನು ಬುದ್ಧ ಸನ್ಯಾಸಿ ಮಾಡಿದ್ದು ಕೆಲವು ಮಹಿಳೆಯರು ಇಂತಹ ವೈದ್ಯರಿಗೆ ಕಲ್ಲಿನಿಂದ ಹೊಡೆದು ಕೊಲ್ಲಬೇಕೆಂದು ಹೇಳುತ್ತಾರೆ. ಆದರೆ ನಾನು ಹಾಗೆ ಹೇಳುವುದಿಲ್ಲ. ಆದರೆ ಇದುವೇ ಆಗಬೇಕಿದೆ ಎಂದು ಜ್ಞಾನಮಿತ್ರ ಹೇಳಿದ್ದರು. ಶ್ರೀಲಂಕದ ಪ್ರಾಚೀನ ಸಮುದಾಯವಾದ ಅಸಗಿರಿಯಾ ಸಮುದಾಯ ಮುಸ್ಲಿಮರ ಹೊಟೇಲಿನಿಂದ ಆಹಾರ ಸೇವಿಸಬಾರದೆಂದು ತಮ್ಮ ಸಮುದಾಯದವರಿಗೆ ಆದೇಶಿಸಿದೆ. ಮುಸ್ಲಿಮರು ಬೌದ್ಧ ಗ್ರಾಹಕರ ಊಟದಲ್ಲಿ ಮಕ್ಕಳಾಗದಂತಹ ಔಷಧ ಸೇರಿಸುತ್ತಾರೆ ಎಂದು ಅಸಗಿರಿಯಾ ಸಮುದಾಯದ ಮುಖ್ಯಸ್ಥರು ಹೇಳಿದ್ದಾರೆ.