ವಲಸೆಗಾರರನ್ನು ನಿಯಂತ್ರಿಸದಿದ್ದರೆ ಯುರೋಪ್ ಮುಸ್ಲಿಂ ದೇಶವಾಗಿ ಬದಲಾಗಬಹುದು: ದಲೈಲಾಮ

0
1044

ಧರ್ಮಶಾಲಾ, ಜೂ. 29: ವಲಸೆಗಾರರನ್ನು ನಿಯಂತ್ರಿಸದಿದ್ದರೆ ಯುರೋಪಿನ ದೇಶಗಳು ಮುಸ್ಲಿಂ ದೇಶ, ಅಥವಾ ಆಫ್ರಿಕನ್ ದೇಶವಾಗಿ ಬದಲಾಗಬಹುದು ಎಂದು ದಲೈಲಾಮ ಹೇಳಿದರು. ಬಿಬಿಸಿ ಸಂದರ್ಶನದಲ್ಲಿ ಟಿಬೆಟ್‍ ನ ಆಧ್ಯಾತ್ಮಿಕ ನಾಯಕ ನಿಲುವನ್ನು ವ್ಯಕ್ತಪಡಿಸಿದ್ದಾರೆ. ಕೆಲವು ಮಂದಿ ವಲಸೆ ಬರುವುದನ್ನು ಒಪ್ಪಿಕೊಳ್ಳಬಹುದು. ಆದರೆ ಯುರೋಪಿನಾದ್ಯಂಥ ಆಫ್ರಿಕರು, ಮುಸ್ಲಿಮರು ತುಂಬಿಕೊಳ್ಳುವುದನ್ನು ಒಪ್ಪಲಾಗದು. ಜನರಲ್ಲಿ ಅವರ ಊರಲ್ಲೇ ಬದಕಲು ಹೇಳಬೇಕು ಎಂದು 60 ವರ್ಷಗಳಿಂದ ಭಾರತದಲ್ಲಿ ನಿರಾಶ್ರಿತರಾಗಿ ಬದುಕುತ್ತಿರುವ 83 ವರ್ಷದ ದಲೈಲಾಮ ಹೇಳಿದರು. ಅವರು 1959ರಲ್ಲಿ ಭಾರತಕ್ಕೆ ಓಡಿ ಬಂದಿದ್ದರು. ವಲಸೆಗಾರರು ಸ್ವಂತ ಊರಿಗೆ ಮರಳಬೇಕೆಂದು ಕಳೆದ ವರ್ಷವೂ ಅವರು ಹೇಳಿದ್ದಾರೆ. ತನ್ನ ಉತ್ತರಾಧಿಕಾರಿ ಮಹಿಳೆಯಾದರೆ ಅವರು ಸುಂದರಿಯಾಗಿರಬೇಕೆಂದು 2015ರಲ್ಲಿ ಹೇಳಿದ್ದರು. ಈ ಹೇಳಿಕೆಯನ್ನು ಪುನರುಚ್ಚರಿಸಿದ ದಲೈಲಾಮ ಇದು ಮಹಿಳೆಯರನ್ನು ಅಪಮಾನಿಸುವ ಹೇಳಿಕೆಯಲ್ಲ ಎಂದು ಸ್ಪಷ್ಟಪಡಿಸಿದರು. ನಿಜವಾದ ಸೌಂದರ್ಯ ಮನಸ್ಸಿನಲ್ಲಿದೆ. ಆದರೆ ಮನುಷ್ಯರಿಗೆ ಹೊರಭಾಗವೂ ಪ್ರಧಾನ ಎಂದರು.

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನೈತಿಕತೆಯುಳ್ಳ ವ್ಯಕ್ತಿಯಲ್ಲ ಎಂದು ಹೇಳಿದರು. ದಲೈಲಾಮರ ಹೇಳಿಕೆ ವಿರುದ್ಧ ಸಾಮಾಜಿಕ ಮಾಧ್ಯಮಗಳಲ್ಲಿ ತೀವ್ರ ಪ್ರತಿಭಟನೆ ವ್ಯಕ್ತವಾಗಿದೆ.