ಖಾಸಿಂ ಅಹಮದ್ ಶೇರ್ವಾನಿ ದೂರಿಗೆ ಸ್ಪಂದಿಸಿದ ಸುಪ್ರೀಂಕೋರ್ಟ್

0
497

ಸನ್ಮಾರ್ಗ ವಾರ್ತೆ

ಉತ್ತರ ಪ್ರದೇಶದ ಖಾಸಿಂ ಅಹಮದ್ ಶೆರ್ವಾನಿ ಅವರ ಮೇಲೆ 2021 ರಲ್ಲಿ ಧರ್ಮ ದ್ವೇಷದ ಹಲ್ಲೆಯಾಗಿತ್ತು. ಆದರೆ ಈ ಕೃತ್ಯವನ್ನು ದ್ವೇಷ ಅಪರಾಧದ ಕಾಯ್ದೆಯಡಿ ಪೊಲೀಸರು ದಾಖಲಿಸಿರಲಿಲ್ಲ. ಆರಂಭದಲ್ಲಿ ಪ್ರಕರಣವನ್ನು ದಾಖಲಿಸುವುದಕ್ಕೆ ಪೊಲೀಸರು ನಿರಾಕರಿಸಿದ್ದರು. ಇದೀಗ ಈ ಪ್ರಕರಣದಲ್ಲಿ ಮಧ್ಯಪ್ರವೇಶಿಸಿರುವ ಸುಪ್ರೀಂಕೋರ್ಟ್ ದ್ವೇಷ ಅಪರಾಧ ಕಾಯ್ದೆಯಡಿ ಪ್ರಕರಣವನ್ನು ದಾಖಲಿಸುವಂತೆ ಉತ್ತರಪ್ರದೇಶ ಸರಕಾರಕ್ಕೆ ಸೂಚಿಸಿದೆ.

ಅಲಿಗಡಕ್ಕೆ ಪ್ರಯಾಣಿಸುತ್ತಿದ್ದ ದೆಹಲಿಯ ಶೇರ್ವಾನಿ ಅವರು ನೋಯಿಡಾದಲ್ಲಿ ಪುರುಷರ ಒಂದು ಗುಂಪು ತನಗೆ ಲಿಫ್ಟ್ ನೀಡಿ ನಂತರ ತನ್ನನ್ನು ನಿಂದಿಸಿ ಗಡ್ಡ ಎಳೆದಿದೆ ಎಂದು ಆರೋಪಿಸಿದ್ದರು.

ಸುಪ್ರೀಂ ಕೋರ್ಟ್ ನಲ್ಲಿ ಶೇರ್ವಾನಿ ಅವರ ಪರ ಹಾಜರಾದ ವಕೀಲ ಅಹಮದಿ ಅವರು ಶೇರ್ವಾನಿಯವರಿಗೆ ಇನ್ನೂ ಪರಿಹಾರ ನೀಡಲಾಗಿಲ್ಲ ಎಂದು ನ್ಯಾಯಾಲಯಕ್ಕೆ ತಿಳಿಸಿದರು.

ದೆಹಲಿಯಿಂದ ನೋಯ್ಡಾಕ್ಕೆ ಅಧಿಕಾರಿಗಳಿಗೆ ತನ್ನ ದೂರನ್ನು ರವಾನಿಸಿದ ನಂತರ ಪೊಲೀಸರು ನಿಷ್ಕ್ರಿಯ ರಾಗಿದ್ದಾರೆ ಎಂದು ಶೆರ್ವಾನಿ ಅವರು ನವೆಂಬರ್ 2021 ರಲ್ಲಿ ಸುಪ್ರೀಂ ಕೋರ್ಟ್ ನ ಬಾಗಿಲು ಬಡಿದಿದ್ದರು. ತನಗೆ ಪರಿಹಾರವನ್ನು ನೀಡಬೇಕು ಮತ್ತು ಪೊಲೀಸರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಕೋರಿದ್ದರು. 2023 ಜನವರಿಯಲ್ಲಿ ಉತ್ತರ ಪ್ರದೇಶದ ಪೊಲೀಸರು ಕ್ರಿಮಿನಲ್ ಬೆದರಿಕೆ ಮತ್ತು ನೋವುಂಟು ಮಾಡುವುದಕ್ಕೆ ಸಂಬಂಧಿಸಿದ ನಿಬಂಧನೆಗಳ ಅಡಿಯಲ್ಲಿ ಮಾತ್ರ ಎಫ್ಐಆರ್ ದಾಖಲಿಸಿದ್ದರು.