ಲಂಡನ್, ಜು. 3: ದುಷ್ಕರ್ಮಿಯ ಇರಿತಕ್ಕೊಳಗಾಗಿ ಸಾಯುವ ಮೊದಲು ಎಂಟು ತಿಂಗಳು ಗರ್ಭಿಣಿಯಾಗಿದ್ದ 26 ವರ್ಷದ ಮಹಿಳೆ ಮಗುವಿಗೆ ಜನ್ಮ ನೀಡಿದ್ದಾರೆ. ದಕ್ಷಿಣ ಲಂಡನ್ನ ಕ್ರೋಡನ್ನಲ್ಲಿ ಶನಿವಾರ ಬೆಳಗ್ಗೆ ಮೂರುವರೆ ಗಂಟೆಗೆ ಈ ದಾರುಣ ಘಟನೆ ನಡೆದಿತ್ತು. ಕೆಲ್ಲಿ ಮೇರಿ ಫೆವರಿಲ್ಲ ಎಂಬ ಹೆಸರಿನ ಇರಿತಕ್ಕೊಳಗಾದ ಮಹಿಳೆ ರಕ್ತಸ್ರಾವದಿಂದ ಸಾಯುವುದರೊಂದಿಗೆ ಮಗುವಿಗೆ ಜನ್ಮ ನೀಡಿದರು.
ಟಂಡನ್ ಹೀಟ್ ರೆಮಿಡ್ ಅವೆಯಲ್ಲಿದ್ದ ಮನೆಯಲ್ಲಿ ಫೆವರಿಲ್ಲರಿಗೆ 37 ವರ್ಷದ ಯುವಕ ಇರಿದಿದ್ದಾರೆ. ಗಂಭೀರ ಗಾಯಗೊಂಡಿದ್ದ ಮಹಿಳೆಯನ್ನು ರಕ್ಷಿಸಲು ಪ್ಯಾರಾಮೆಡಿಕಲ್ ಸಿಬ್ಬಂದಿ ಮತ್ತು ಪೊಲೀಸರು ಶ್ರಮಿಸುವ ವೇಳೆ ಹೆರಿಗೆಯಾಯಿತು. ಗಂಭೀರ ಸ್ಥಿತಿಯಲ್ಲಿದ್ದ ಮಗುವನ್ನುಆಸ್ಪತ್ರೆಗೆ ಸೇರಿಸಲಾಗಿದೆ. ದುಷ್ಕರ್ಮಿಯನ್ನು ಪೊಲೀಸರು ಬಂಧಿಸಿದ್ದಾರೆ. ಲಂಡನ್ ಮೇಯರ್ ಸಾದಿಕ್ ಖಾನ್ ಘಟನೆಯ ಕುರಿತು ಶೋಕ ವ್ಯಕ್ತಪಡಿಸಿದ್ದಾರೆ.












